ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Exclusive;ಕೊಡಗು ವಸತಿ ಶಾಲೆ 24 ವಿದ್ಯಾರ್ಥಿಗಳಿಗೆ ಕೋವಿಡ್

By Coovercolly Indresh
|
Google Oneindia Kannada News

ಮಡಿಕೇರಿ, ಜನವರಿ 27; ದೇಶದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಸರ್ಕಾರವೂ ಈ ಹಿಂದೆ ಹೇರಿದ್ದ ಸಾಕಷ್ಟು ನಿರ್ಬಂಧಗಳನ್ನು ತೆಗೆದು ಹಾಕಿದೆ. ಆದರೆ ಇಂದು ಕೊಡಗಿನ ಗರಗಂದೂರಿನ ಮೊರಾರ್ಜಿ ವಸತಿ ಶಾಲೆಯಲ್ಲಿ ಏಕಾಏಕಿ 24 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು ಆತಂಕ ಸೃಷ್ಟಿಯಾಗಿದೆ.

ಈ ವಿದ್ಯಾರ್ಥಿಗಳು ಕಾಲೇಜು ಪ್ರಾರಂಭಗೊಂಡ ದಿನವಾದ ಜನವರಿ 11 ರಿಂದ ಕಾಲೇಜಿಗೆ ತೆರಳುತ್ತಿದ್ದರು. ಇವರೆಲ್ಲರೂ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಕೋವಿಡ್‌ 19 ಸೋಂಕು ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಕೂಡಲೇ ಮಡಿಕೇರಿಯ ಕೋವಿಡ್‌ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಲಾಯಿತು. ಎಲ್ಲಾ 24 ವಿದ್ಯಾರ್ಥಿಗಳಲ್ಲೂ ಕೋವಿಡ್‌ ಸೋಂಕು ದೃಢಪಟ್ಟಿದೆ.

ಕೊರೊನಾ ಲಸಿಕೆ ಅಭಿಯಾನ: ಕೊಡಗು ಶೇ 84, ರಾಜ್ಯದಲ್ಲಿ 62% ಪೂರ್ಣ ಕೊರೊನಾ ಲಸಿಕೆ ಅಭಿಯಾನ: ಕೊಡಗು ಶೇ 84, ರಾಜ್ಯದಲ್ಲಿ 62% ಪೂರ್ಣ

Morarji Desai Residential School 24 Students Tested Positive For COVID 19

ಈ ಕುರಿತು ಒನ್‌ ಇಂಡಿಯಾ ಜತೆ ಮಾತನಾಡಿದ ವಸತಿ ಶಾಲೆಯ ಪ್ರಾಂಶುಪಾಲ ಲೋಕೇಶ, "ಜನವರಿ 11ರಿಂದ ತರಗತಿಗಳನ್ನು ಪ್ರಾರಂಭಿಸಲಾಗಿತ್ತು. ಕಳೆದ ಗುರುವಾರ ಓರ್ವ ವಿದ್ಯಾರ್ಥಿಯು ಜ್ವರದಿಂದ ಬಳಲುತ್ತಿದ್ದ. ಕೂಡಲೇ ಆತನ ಪೋಷಕರನ್ನು ಕರೆಸಿ ಕೋವಿಡ್‌ 19 ಪರೀಕ್ಷೆಗೊಳಪಡಿಸಿದಾಗ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ತರಗತಿಯ ಎಲ್ಲಾ ವಿದ್ಯಾರ್ಥಿಗಳನ್ನು ಭಾನುವಾರ ಮತ್ತು ಸೋಮವಾರ ಕೋವಿಡ್‌ ಪರೀಕ್ಷೆಗೆ ಮಡಿಕೇರಿಗೆ ಕರೆದೊಯ್ಯಲಾಯಿತು. ಇಂದು ಪರೀಕ್ಷಾ ವರದಿ ಬಂದ ನಂತರ ಒಟ್ಟು 24 ವಿದ್ಯಾರ್ಥಿಗಳಿಗೆ ಸೋಂಕು ದೃಢಡಪಟ್ಟಿದೆ. ಆದರೆ ವಿದ್ಯಾರ್ಥಿನಿಯರಿಗೆ ಯಾರಿಗೂ ಸೋಂಕು ದೃಢಪಟ್ಟಿಲ್ಲ" ಎಂದರು.

ಈಗಿನ ಸ್ಥಿತಿಯಲ್ಲಿ 30 ಕೋಟಿ ಭಾರತೀಯರಿಗೆ ಕೋವಿಡ್ ಲಸಿಕೆಗೆ ಬೇಕು 3 ವರ್ಷ ಈಗಿನ ಸ್ಥಿತಿಯಲ್ಲಿ 30 ಕೋಟಿ ಭಾರತೀಯರಿಗೆ ಕೋವಿಡ್ ಲಸಿಕೆಗೆ ಬೇಕು 3 ವರ್ಷ

ಈ ಕುರಿತು ಮಾತನಾಡಿರುವ ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಬಿಂದುಶ್ರೀ, "ಮೊದಲು ಓರ್ವ ವಿದ್ಯಾರ್ಥಿಗೆ ಪಾಸಿಟಿವ್‌ ಬಂದ ಕೂಡಲೇ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನೂ ತೆಗೆದುಕೊಳ್ಳಲಾಗಿದೆ. ನಾನೂ ಸೇರಿದಂತೆ ಒಟ್ಟು 7 ಆರೋಗ್ಯ ಇಲಾಖೆಯ ಸಿಬ್ಬಂದಿಗಳು ನಿನ್ನೆಯಿಂದಲೂ ಮೊರಾರ್ಜಿ ವಸತಿ ಶಾಲೆಯಲ್ಲಿಯೇ ಇದ್ದು ವಿದ್ಯಾರ್ಥಿಗಳ ಆರೋಗ್ಯದ ಕುರಿತು ನಿಗಾ ವಹಿಸುತಿದ್ದೇವೆ" ಎಂದು ಹೇಳಿದರು.

ಭಾರತದಿಂದ ಆರು ದೇಶಗಳಿಗೆ ಕೋವಿಡ್ ಲಸಿಕೆ ಪೂರೈಕೆಭಾರತದಿಂದ ಆರು ದೇಶಗಳಿಗೆ ಕೋವಿಡ್ ಲಸಿಕೆ ಪೂರೈಕೆ

ಕೋವಿಡ್‌ ಸೋಂಕು ಧೃಡ ಪಟ್ಟ ಎಲ್ಲಾ 24 ವಿದ್ಯಾರ್ಥಿಗಳನ್ನೂ ಮಡಿಕೇರಿಯ ಕೋವಿಡ್‌ ಆಸ್ಪತ್ರೆಗೆ ಆಂಬುಲೆನ್ಸ್‌ ನಲ್ಲಿ ಕಳಿಸಿಕೊಡಲಾಗಿದೆ. ಎಲ್ಲರಿಗೂ ಸ್ವಲ್ಪ ಜ್ವರ ಹಾಗೂ ಸೋಂಕಿನ ಲಕ್ಷಣಗಳಿದ್ದು ಯಾರಿಗೂ ಗಂಭೀರ ಲಕ್ಷಣಗಳಿಲ್ಲ.

Recommended Video

ಹಿಂಸಾಚಾರಕ್ಕೆ ತಿರುಗಿದ Farmer protests, ಅಹಿತಕರ ಘಟನೆಗೆ ಸಾಕ್ಷಿಯಾದ Delhi! 22ಕ್ಕೂ ಹೆಚ್ಚು FIR ದಾಖಲು | Oneindia Kannada

ಎಲ್ಲಾ ವಿದ್ಯಾರ್ಥಿಗಳಿಗೂ ಸೂಕ್ತ ಚಿಕಿತ್ಸೆ ಪ್ರಾರಂಭಿಸಿದ್ದು ಗುಣಮುಖರಾಗುತ್ತಿದ್ದಾರೆ. ಈ ಪ್ರಕರಣ ಕೆಲವು ಕಾಲ ಪೋಷಕರಲ್ಲಿ ಕೊಂಚ ಆತಂಕ ಸೃಷ್ಟಿ ಮಾಡಿದ್ದು, ಈಗ ಎಲ್ಲರೂ ನಿರಾಳರಾಗಿದ್ದಾರೆ.

English summary
Kodagu Morarji Desai Residential School 24 students tested positive for COVID 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X