ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಡಿಕೇರಿ; ಕಸದ ನಡುವೆ ಇಣುಕುತ್ತಿವೆ ಬ್ರಿಟಿಷರ ಕಾಲದ ಸ್ಮಾರಕಗಳು

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಫೆಬ್ರವರಿ 07: ಬ್ರಿಟಿಷರು ಕೊಡಗನ್ನು ಆಳಿ ನಮಗೆ ಬಿಟ್ಟುಹೋಗಿದ್ದು ಕೆಲವು ಗೋರಿಗಳು ಮತ್ತು ಸ್ಮಾರಕಗಳನ್ನು ಮಾತ್ರ. ಇಂತಹ ಗೋರಿಗಳು ಹಾಗೂ ಸ್ಮಾರಕಗಳು ಇತಿಹಾಸದ ವೈಭವವನ್ನು ಕಣ್ಣಮುಂದೆ ತರುತ್ತವೆ. ಮಡಿಕೇರಿಯಲ್ಲಿ ಈಗಲೂ ಇತಿಹಾಸವನ್ನು ಸಾರುವ ಸ್ಮಾರಕಗಳು, ಗೋರಿಗಳು ಹಲವೆಡೆ ಇವೆ. ಆದರೆ ಅವುಗಳನ್ನು ಸಂರಕ್ಷಿಸುವ ಕೆಲಸ ಮಾತ್ರ ಸರಿಯಾಗಿ ಆಗುತ್ತಿಲ್ಲ.

ಮಡಿಕೇರಿಯ ಕೋಟೆಯ ಆವರಣದಲ್ಲಿರುವ ವಸ್ತು ಸಂಗ್ರಹಾಲಯದಲ್ಲಿ ಹಲವಾರು ಬ್ರಿಟಿಷ್ ಪಳೆಯುಳಿಕೆಗಳು ಮತ್ತು ಅವರ ಗುರುತು ಕಲ್ಲುಗಳನ್ನು ನೋಡಬಹುದು. ಆದರೆ ಇಲ್ಲಿ ಕಾಡು ಪಾಲಾಗಿರುವಂತಹ ಸ್ಮಾರಕ ಕಲ್ಲುಗಳು ಮಾತ್ರ ಯಾರಿಗೂ ಕಾಣದೆ ಭಗ್ನಗೊಂಡು ಕಸದಲ್ಲೇ ದಿನೇ ದಿನೇ ಮುಚ್ಚಿಹೋಗುತ್ತಿವೆ.

Monuments Found In Garbage In Madikeri

ಮಡಿಕೇರಿಯಿಂದ ಗಾಳಿಬೀಡು ರಸ್ತೆ, ಕಾರಿಯಪ್ಪ ಕಾಲೇಜಿನ ಸಮೀಪದ ಕಾನ್ವೆಂಟ್ ರಸ್ತೆಗೆ ಸಾಗುವ ದಾರಿಯಲ್ಲಿ ಕಸದ ರಾಶಿ ನಡುವೆ ಬ್ರಿಟಿಷರ ಕಾಲದ ಸ್ಮಾರಕಗಳು ಇಣುಕುತ್ತಿವೆ. ಆದರೆ ಇದರ ಬಗ್ಗೆ ಗಮನ ಹರಿಸುವವರೇ ಇಲ್ಲವಾಗಿದ್ದಾರೆ. ಇನ್ನಾದರೂ ಪ್ರಾಚ್ಯವಸ್ತು ಇಲಾಖೆ ನಿದ್ರೆಯಿಂದೆದ್ದು ಈ ಕಸದ ಕೊಂಪೆಯ ನಡುವೆ ಬಿದ್ದಿರುವ ಬ್ರಿಟಿಷರ ಗತವೈಭವದ ನೆನಪಿನ ಸ್ಮಾರಕಗಳನ್ನು ಮುಂದಿನ ಪೀಳಿಗೆಗೆ ನೋಡಲು ಉಳಿಸಲಿ.

Monuments Found In Garbage In Madikeri
English summary
On the way from Madikeri to the galibidu road, near cariappa college, monuments of british era found in garbage
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X