ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿ. ಪಿ. ಯೋಗೇಶ್ವರ್‌ ಕೊಡಗು ಪ್ರವಾಸ; ಸ್ಪಷ್ಟನೆ ಕೊಟ್ಟಿದ್ದೇಕೆ?

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಮಾರ್ಚ್ 26; ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವ ಸಿ. ಪಿ. ಯೋಗೇಶ್ವರ್ ಕೊಡಗು ಜಿಲ್ಲಾ ಪ್ರವಾಸ ಗೊಂದಲಕ್ಕೆ ಕಾರಣವಾಗಿತ್ತು. ಈಗ ಸ್ವತಃ ಸಚಿವರ ಕಡೆಯಿಂದ ಪ್ರವಾಸದ ಬಗ್ಗೆ ಸ್ಪಷ್ಟನೆಯನ್ನು ನೀಡಲಾಗಿದೆ.

ಸಚಿವರು ಮಾರ್ಚ್ 27 ಹಾಗೂ 28 ರಂದು ಕೊಡಗು ಪ್ರವಾಸವನ್ನು ಕೈಗೊಂಡಿದ್ದಾರೆ. ಈ ಪ್ರವಾಸ ಪಟ್ಟಿಯ ಕಾರ್ಯಕ್ರಮ ನೋಡಿದರು ಇದು ತಮ್ಮ ಪಕ್ಷದ ಕಾರ್ಯಕರ್ತರಿಗೆ ಕೊಡಗು ಪ್ರವಾಸ ಏರ್ಪಡಿಸಿದ್ದಾರೆನೋ? ಎಂಬಂತೆ ಅಂದು ಕೊಂಡರು.

ಸಿಪಿ ಯೋಗೇಶ್ವರ್‌ಗೆ ಕುಮಾರಸ್ವಾಮಿ ಕೊಟ್ಟ ಸಲಹೆ ಏನು? ಸಿಪಿ ಯೋಗೇಶ್ವರ್‌ಗೆ ಕುಮಾರಸ್ವಾಮಿ ಕೊಟ್ಟ ಸಲಹೆ ಏನು?

ಮಾ. 27ರ ಬೆಳಗ್ಗೆ 7ಕ್ಕೆ ಬೆಂಗಳೂರಿನಿಂದ ರಸ್ತೆ ಮೂಲಕ ಕೊಡಗು ಜಿಲ್ಲೆಗೆ ಪ್ರಯಾಣ. ಬೆಳಗ್ಗೆ 11.30ಕ್ಕೆ ಚನ್ನಪಟ್ಟಣದ ಕಾರ್ಯಕರ್ತರೊಂದಿಗೆ ಕೊಡಗಿನ ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿ ಹಾಗೂ ಇದೇ ಕಾರ್ಯಕರ್ತರೊಂದಿಗೆ ಅಪರಾಹ್ನ 1.30 ಹಾಗೂ 3 ಗಂಟೆಗೆ ಹಾರಂಗಿ ಜಲಾಶಯ ಅತಿಥಿ ಗೃಹದಲ್ಲಿ ಮತ್ತೊಂದು ಸಭೆ ಹಾಗೂ ರಾತ್ರಿ ಮಡಿಕೇರಿಯ ಕ್ಲಬ್ ಮಹೀಂದ್ರಾದಲ್ಲಿ ವಾಸ್ತವ್ಯ ಎಂದು ಪಟ್ಟಿ ಇತ್ತು.

ಮೈಸೂರು ಜಿಲ್ಲಾ ಉಸ್ತುವಾರಿ ಮೇಲೆ ಸಿ. ಪಿ. ಯೋಗೇಶ್ವರ್ ಕಣ್ಣು?ಮೈಸೂರು ಜಿಲ್ಲಾ ಉಸ್ತುವಾರಿ ಮೇಲೆ ಸಿ. ಪಿ. ಯೋಗೇಶ್ವರ್ ಕಣ್ಣು?

Minister CP Yogeshwar Kodagu Tour Clarification

ಮಾರ್ಚ್ 28ರಂದು ಬೆಳಗ್ಗೆ 11.30ಕ್ಕೆ ಕ್ಲಬ್ ಮಹೀಂದ್ರಾದಿಂದ ರಸ್ತೆ ಮೂಲಕ ಮೈಸೂರಿಗೆ ಪ್ರಯಾಣ, ಅಪರಾಹ್ನ 2 ರಿಂದ 3ರವರೆಗೆ ಮೈಸೂರು ಲಲಿತ ಮಹಲ್ ಪ್ಯಾಲೇಸ್ ಕಾಯ್ದಿರಿಸಿದೆ. 3 ಗಂಟೆಗೆ ಅಲ್ಲಿ ಪ್ರವಾಸೋದ್ಯಮ ಕುರಿತು ತಜ್ಞರೊಂದಿಗೆ ಸಭೆ ಸೇರಿದಂತೆ ಮೈಸೂರಿನಲ್ಲಿ ಬೇರೆ ಹಲವು ಕಾರ್ಯಕ್ರಮಗಳಿವೆ.

2ನೇ ಬಾರಿಗೆ ಸಚಿವ ಸ್ಥಾನ ಅಲಂಕರಿಸಲಿರುವ ಸಿಪಿ ಯೋಗೇಶ್ವರ್ ವ್ಯಕ್ತಿಚಿತ್ರಣ 2ನೇ ಬಾರಿಗೆ ಸಚಿವ ಸ್ಥಾನ ಅಲಂಕರಿಸಲಿರುವ ಸಿಪಿ ಯೋಗೇಶ್ವರ್ ವ್ಯಕ್ತಿಚಿತ್ರಣ

ಆದರೆ, ಚನ್ನಪಟ್ಟಣದ ಮೂಲಕವೇ ಬರುವ ಸಚಿವರು ಅಲ್ಲಿನ ಕಾರ್ಯಕರ್ತರೊಂದಿಗೆ ಕುಶಾಲನಗರದ ಕಾವೇರಿ ನಿಸರ್ಗಧಾಮ ಹಾಗೂ ಹಾರಂಗಿ ಅತಿಥಿ ಗೃಹದಲ್ಲಿ ಏರ್ಪಡಿಸಿರುವ ಸಭೆ ಹಾಗೂ ಕ್ಲಬ್ ಮಹೀಂದ್ರಾ ಮಡಿಕೇರಿಯಲ್ಲಿ ವಾಸ್ತವ್ಯವೇಕೆ? ಎಂಬುದು ಪ್ರಶ್ನೆಯಾಗಿತ್ತು. ಸಚಿವರ ಇಲಾಖೆಗೆ ಸಂಬಂಧಿಸಿದಂತೆ ಪ್ರವಾಸಿ ಜಿಲ್ಲೆಯಾಗಿರುವ ಕೊಡಗಿನಲ್ಲಿ ಯಾವುದೇ ಸಭೆ ಕರೆದಿಲ್ಲದಿರುವುದು ಕುತೂಹಲಕ್ಕೆ ಕಾರಣವಾಗಿತ್ತು.

ಸಚಿವರಿಂದ ಸ್ಪಷ್ಟನೆ; ಸಚಿವರ ಕೊಡಗು ಪ್ರವಾಸದ ಬಗ್ಗೆ ಸ್ಪಷ್ಟನೆಯನ್ನು ನೀಡಲಾಗಿದೆ. ಸಚಿವರ ಪ್ರವಾಸ ಕಾರ್ಯಕ್ರಮ ಅಧಿಕೃತ ಕಾರ್ಯಕ್ರಮ ಆಗಿರುವುದಿಲ್ಲ. ಸಚಿವರು ಖಾಸಗಿ ಪ್ರವಾಸವನ್ನು ಕೈಗೊಳ್ಳಲಿದ್ದಾರೆ.

Recommended Video

ನಾಳೆ ಇಂದ ನನ್ನ ಆಟ ಶುರು ಎಂದ ರಮೇಶ್ ಜಾರಕಿಹೊಳಿ | Oneindia Kannada

ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಯೋಜನೆಗಳ ಪ್ರಗತಿ ಪರಿಶೀಲನೆಗೆ ಮತ್ತು ಕುಂದು-ಕೊರತೆಗಳನ್ನು ಆಲಿಸುವ ಸಂಬಂಧ ಮುಂಬರುವ ದಿನಗಳಲ್ಲಿ ಅಧಿಕೃತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ.

English summary
Clarification on Tourism minister C. P. Yogeshwar Kodagu tour on March 27 and 28, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X