ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಡಿಕೇರಿಯಲ್ಲಿ ಹೊಸ ಬದುಕಿಗೆ ಕಾಲಿಟ್ಟ ಸಂತ್ರಸ್ತ ಕುಟುಂಬದ ಯುವತಿ!

By Gururaj
|
Google Oneindia Kannada News

ಮಡಿಕೇರಿ, ಆಗಸ್ಟ್ 26 : ಪ್ರಕೃತಿ ವಿಕೋಪದಿಂದಾಗಿ ಕೊಡಗು ಜಿಲ್ಲೆಯಲ್ಲಿ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಪ್ರಕೃತಿಯ ಮುನಿಸಿನಿಂದ ಮನೆ ಕಳೆದುಕೊಂಡ ಜೋಡಿ ಭಾನುವಾರ ಹೊಸ ಜೀವನಕ್ಕೆ ಕಾಲಿಟ್ಟಿದೆ. ಜಿಲ್ಲಾಧಿಕಾರಿಗಳು ನವ ಜೋಡಿಗೆ ಶುಭ ಹಾರೈಸಿದರು.

ಭಾನುವಾರ ಆರ್.ಮಂಜುಳಾ ಅವರು ಕೇರಳದ ಕಣ್ಣೂರು ಜಿಲ್ಲೆಯ ರಜೀಶ್ ಅವರನ್ನು ವಿವಾಹವಾದರು. ಮಂಜುಳಾ ಅವರು ಎಮ್ಮೆತ್ತಾಳು ಗ್ರಾಮದವರು. ಅವರ ವಿವಾಹ ಹಿಂದೆಯೇ ನಿಶ್ಚಯವಾಗಿತ್ತು. ಆದರೆ, ಗುಡ್ಡ ಕುಸಿತದಲ್ಲಿ ಅವರ ಗ್ರಾಮ ಸಂಪೂರ್ಣವಾಗಿ ನಾಶವಾಗಿದೆ.

ಕೊಡಗಿನಲ್ಲಿ ಮತ್ತೆ ಮನೆ ನಿರ್ಮಿಸುವ ನಿರಾಶ್ರಿತರ ಕನಸು ನನಸಾಗುವುದೇ?ಕೊಡಗಿನಲ್ಲಿ ಮತ್ತೆ ಮನೆ ನಿರ್ಮಿಸುವ ನಿರಾಶ್ರಿತರ ಕನಸು ನನಸಾಗುವುದೇ?

ಮಡಿಕೇರಿ ನಗರದ ನೆರೆ ಸಂತ್ರಸ್ತರ ಪರಿಹಾರ ಕೇದ್ರ ಗಜ್ಜೆ ಸಂಗಪ್ಪ ಹಾಲ್‌ನಲ್ಲಿ ಭಾನುವಾರ ಮಂಜುಳಾ ಮತ್ತು ರಜೀಶ್ ವಿವಾಹವಾದರು. ಕೊಡಗು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಹೊಸ ಜೀವನಕ್ಕೆ ಕಾಲಿಟ್ಟ ದಂಪತಿಗಳಿಗೆ ಶುಭ ಕೋರಿದರು.

Madikeri witness for marriage after floods

ಮೊದಲೇ ಮದುವೆ ನಿಶ್ಚಯವಾಗಿದ್ದರೂ ನೆರೆ ಪ್ರವಾಹಕ್ಕೆ ತುತ್ತಾಗಿದ್ದ ಕುಟುಂಬಕ್ಕೆ ಸೇರಿದ ಮಂಜುಳ ಅವರ ವಿವಾಹ ನಡೆಯುವ ಬಗ್ಗೆ ಅನಿಶ್ಚಿತತೆ ಎದುರಾಗಿತ್ತು. ಜನರು, ಸಂಘ ಸಂಸ್ಥೆಗಳ ಸಹಕಾರದ ಮೂಲಕ ಸರಳವಿವಾಹ ನಡೆಯಿತು.

ಕೊಡಗು ಸಹಜ ಸ್ಥಿತಿಗೆ ಬರುವವರೆಗೂ ಸನ್ಮಾನ ಸ್ವೀಕರಿಸಲ್ಲ: ಎಚ್ಡಿಕೆಕೊಡಗು ಸಹಜ ಸ್ಥಿತಿಗೆ ಬರುವವರೆಗೂ ಸನ್ಮಾನ ಸ್ವೀಕರಿಸಲ್ಲ: ಎಚ್ಡಿಕೆ

Madikeri witness for marriage after floods

ಪ್ರವಾಹದಿಂದ ಎಲ್ಲವನ್ನು ಕಳೆದುಕೊಂಡಿದ್ದ ಪೋಷಕರು ಮಗಳ ವಿವಾಹದ ಬಗ್ಗೆ ಆತಂಕಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ಜಿಲ್ಲಾಉಸ್ತುವಾರಿ ಸಚಿವರು, ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಸಂಘಟನೆಗಳ‌ ನೆರವಿನೊಂದಿಗೆ ನಿಗದಿತ ದಿನಾಂಕದಲ್ಲಿಯೇ ವಿವಾಹ ಮಹೋತ್ಸವ ನಡೆಸಲಾಯಿತು.

English summary
Madikeri rehabilitation centre witnessed for marriage of Manjula and Rajesh on August 26, 2018. Kodagu DC Srividya also participated in the simple marriage. Manjula family lost house in the recent flood.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X