ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಗಳನ್ನು ಅಂಗನವಾಡಿಗೆ ಸೇರಿಸಿ ಮಾದರಿಯಾದ ಕೊಡಗು ಎಸ್ ಪಿ ಡಾ.ಸುಮನ್

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಅಕ್ಟೋಬರ್ 16: ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರು ತಮ್ಮ ಮಗಳನ್ನು ಸರ್ಕಾರಿ ಅಂಗನವಾಡಿಗೆ ದಾಖಲಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಐವತ್ತು ರುಪಾಯಿ ಖರ್ಚಿನಲ್ಲೇ ಈ ಶಿಕ್ಷಕರು ಎಂಥ ಅದ್ಭುತ ಮಾಡಿದರು!ಐವತ್ತು ರುಪಾಯಿ ಖರ್ಚಿನಲ್ಲೇ ಈ ಶಿಕ್ಷಕರು ಎಂಥ ಅದ್ಭುತ ಮಾಡಿದರು!

ಮಕ್ಕಳಿಗೆ ಶಿಕ್ಷಣ ನೀಡುವುದನ್ನು ಕೂಡ ಪ್ರತಿಷ್ಠೆಯನ್ನಾಗಿ ಪರಿಗಣಿಸುತ್ತಿರುವ ಇಂದಿನ ಪೋಷಕರು ಮಕ್ಕಳು ಜನಿಸುತ್ತಲೇ ಇಂಗ್ಲೀಷ್ ಪದ ಪ್ರಯೋಗಗಳನ್ನು ಆರಂಭಿಸುತ್ತಾರೆ. ಬೇಬಿ ಸಿಟ್ಟಿಂಗ್, ಎಲ್ ಕೆಜಿ, ಯುಕೆಜಿ ತರಗತಿಗಳಿಗಾಗಿ ವರ್ಷಗಟ್ಟಲೆ ಕಾದು ಸೀಟು ಗಿಟ್ಟಿಸಿಕೊಳ್ಳುವುದೂ ಪೋಷಕರಿಗೆ ಸವಾಲಾಗಿಬಿಟ್ಟಿದೆ. ಆದರೆ ಯಾವುದೇ ಪೈಪೋಟಿಯಿಲ್ಲದೆ ಸುಲಭ ಮಾರ್ಗ ತೋರುವ ಅಂಗನವಾಡಿಗಳು ಕಾಲ ಬುಡದಲ್ಲಿದ್ದರೂ ಅವುಗಳ ಬಗ್ಗೆ ಕನ್ನಡ ಪೋಷಕರಿಗೆ ತಾತ್ಸಾರವೇ ಹೆಚ್ಚು. ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳಂತೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯ ಕಡೆಗೆ ತಿರುಗಿಯೂ ನೋಡದಂತೆ ಮಾಡುತ್ತಾರೆ ಎನ್ನುವ ಅಪವಾದವಿದೆ.

Madikeri SP Dr Suman D Pannekar Enroll Daughter To Anganawadi

ಆದರೆ ಇದಕ್ಕೆ ತದ್ವಿರುದ್ಧವಾಗಿ ಕೊಡಗು ಎಸ್ ಪಿ ಸುಮನ್ ಡಿ.ಪನ್ನೇಕರ್ ಅವರು ತಮ್ಮ ಎರಡೂವರೆ ವರ್ಷದ ಮಗಳು ಖುಷಿಯನ್ನು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಸಮೀಪದ ಅಂಗನವಾಡಿಗೆ ದಾಖಲಿಸಿದ್ದಾರೆ.

ಕಾವಾಡಿ-ಮಾವುತರ ಮಕ್ಕಳಿಗಾಗಿ ನಡೆಯುತ್ತಿದೆ ಟೆಂಟ್ ಶಾಲೆಕಾವಾಡಿ-ಮಾವುತರ ಮಕ್ಕಳಿಗಾಗಿ ನಡೆಯುತ್ತಿದೆ ಟೆಂಟ್ ಶಾಲೆ

ಮಕ್ಕಳಿಗೆ ಬಾಲ್ಯದಿಂದಲೇ ನೈತಿಕತೆ ಮತ್ತು ಮೌಲ್ಯಗಳ ಪಾಠ ಅಗತ್ಯವೆನ್ನುವ ಕಾರಣಕ್ಕಾಗಿ ಖುಷಿಗೆ ಅಂಗನವಾಡಿ ಮೂಲಕವೇ ಮೊದಲ ಪಾಠ ಆರಂಭಿಸುತ್ತಿರುವುದಾಗಿ ಎಸ್ ಪಿ ತಿಳಿಸಿದ್ದಾರೆ. ಸ್ಥಳೀಯ ಅಂಗನವಾಡಿ ವ್ಯವಸ್ಥೆ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

English summary
Kodagu District Superintendent of Police, Dr.Suman D. Panneker, has become role model for others by enrolling his daughter in Government Anganwadi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X