ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನಲ್ಲಿ ಸೆಪ್ಟೆಂಬರ್ ಬಂದರೂ ನಿಂತಿಲ್ಲ ಮಳೆ; ಯಾವುದರ ಸೂಚನೆ?

|
Google Oneindia Kannada News

ಮಡಿಕೇರಿ, ಸೆಪ್ಟೆಂಬರ್ 15: ಕೊಡಗಿನಲ್ಲಿ ಭಾರೀ ಮಳೆ ಸುರಿದು ಪ್ರವಾಹವೇರ್ಪಟ್ಟು, ಗುಡ್ಡ ಕುಸಿದು ಸಾವು ನೋವುಗಳಾಗಿದ್ದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಸುರಿದ ಮಳೆಯ ಪ್ರಮಾಣ ಕಡಿಮೆಯಾಗಿರುವುದು ಗೋಚರಿಸುತ್ತಿದೆ.

ಸಾಮಾನ್ಯವಾಗಿ ಸೆಪ್ಟೆಂಬರ್‌ನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಬಿಸಿಲು ಕಾಣಿಸುತ್ತಿತ್ತು. ಆದರೆ ಈ ಬಾರಿ ಜಿಲ್ಲೆಯಾದ್ಯಂತ ಇನ್ನೂ ಮಳೆ ಸುರಿಯುತ್ತಿರುವುದು ಆತಂಕಕಾರಿಯಾಗಿದೆ. ಈ ಸಮಯದಲ್ಲಿ ಮಳೆ ಸುರಿದು ಶೀತದ ವಾತಾವರಣ ನಿರ್ಮಾಣವಾದರೆ, ಈಗಾಗಲೇ ಮಿಡಿಗಚ್ಚಿರುವ ಕಾಫಿ ಮತ್ತು ಕರಿಮೆಣಸು ಫಸಲು ಉದುರುವ ಸಾಧ್ಯತೆ ಜತೆಗೆ ಕೊಳೆರೋಗದ ಭಯವೂ ಇಲ್ಲಿನ ಬೆಳೆಗಾರರನ್ನು ಕಾಡತೊಡಗಿದೆ.

ಕೊಡಗು ಜಿಲ್ಲೆಯಲ್ಲಿ 2063.11 ಮಿ.ಮೀ ಮಳೆ ದಾಖಲೆ ಕೊಡಗು ಜಿಲ್ಲೆಯಲ್ಲಿ 2063.11 ಮಿ.ಮೀ ಮಳೆ ದಾಖಲೆ

 2018ರಲ್ಲಿ ಸುರಿದಿತ್ತು ಮಹಾಮಳೆ

2018ರಲ್ಲಿ ಸುರಿದಿತ್ತು ಮಹಾಮಳೆ

ಜಿಲ್ಲೆಯಲ್ಲಿ ಹೆಚ್ಚಿನ ರೈತರು ಕಾಫಿ ಮತ್ತು ಕರಿಮೆಣಸು ನಂಬಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಇದೀಗ ಸುರಿಯುತ್ತಿರುವ ಉತ್ತರ ನಕ್ಷತ್ರದ ಮಳೆ ಮುಂಗಾರು ಆರಂಭದ ವಾತಾವರಣವನ್ನು ತಂದೊಡ್ಡಿದೆ. ಚಳಿ ಜತೆಗೆ ಜಿಟಿ ಜಿಟಿ ಮಳೆ ಜನರನ್ನು ಕಂಗೆಡಿಸಿದೆ.

2017ರಲ್ಲಿ ಕೂಡ ಮುಂಗಾರು ಮಳೆಗಿಂತ ಹಿಂಗಾರು ಮಳೆ ಹೆಚ್ಚಿನ ರಭಸ ತೋರಿತ್ತು. ಈ ಸಂದರ್ಭದಲ್ಲಿ ಕಾವೇರಿ ನದಿ ಉಕ್ಕಿ ಹರಿದಿತ್ತು. ಅದಾದ ನಂತರ 2018ರಲ್ಲಿ ಮಹಾಮಳೆ ಸುರಿದಿತ್ತು. ಜತೆಗೆ ಅನಾಹುತವನ್ನು ಸೃಷ್ಟಿಸಿತ್ತು. 2019ರಲ್ಲಿಯೂ ಹೆಚ್ಚು ಮಳೆ ಸುರಿದಿತ್ತು. ಇದೀಗ ಕಳೆದ ವರ್ಷಕ್ಕೆ ಹೋಲಿಸಿದರೆ ಮಳೆಯ ಪ್ರಮಾಣ ಕಡಿಮೆಯೇ ಎನ್ನಬೇಕು. ಆದರೆ ಜನವರಿಯಿಂದ ಇಲ್ಲಿ ತನಕ ಸುರಿದ ಮಳೆಯನ್ನು ಗಮನಿಸಿದ್ದೇ ಆದರೆ, ಎಲ್ಲ ಸಮಯದಲ್ಲಿಯೂ ಉತ್ತಮವಾಗಿ ಮಳೆ ಸುರಿದಿರುವುದನ್ನು ಕಾಣಬಹುದಾಗಿದೆ.
 ಪ್ರಸಕ್ತ 400 ಮಿ.ಮೀ. ಕಡಿಮೆ ಮಳೆ

ಪ್ರಸಕ್ತ 400 ಮಿ.ಮೀ. ಕಡಿಮೆ ಮಳೆ

ಕೊಡಗಿನಲ್ಲಿ ಸುರಿದ ಮಳೆಯ ಪ್ರಮಾಣವನ್ನು ಗಮನಿಸಿದರೆ, ಕಳೆದ ವರ್ಷಕ್ಕಿಂತ ಸುಮಾರು 400 ಮಿ.ಮೀ. ಮಳೆ ಕಡಿಮೆಯಾಗಿರುವುದು ಗೋಚರಿಸಿದೆ. ಜನವರಿಯಿಂದ ಇಲ್ಲಿವರೆಗೆ 2063 ಮಿ.ಮೀ. ಮಳೆ ಸುರಿದಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 2476 ಮಿ.ಮೀ. ಮಳೆ ಸುರಿದಿತ್ತು. ಆದರೆ ಕಳೆದ ವರ್ಷ ಈ ಅವಧಿಯಲ್ಲಿ ಮಳೆ ಇರಲಿಲ್ಲ. ಹೀಗಾಗಿ ಬೆಳೆಗಾರರು ನೆಮ್ಮದಿಯುಸಿರು ಬಿಟ್ಟಿದ್ದರು. ಆದರೆ ಈ ಬಾರಿ ಮಳೆ ಕೂಡ ಮುಂಗಾರು ಮಳೆಯಂತೆ ಸುರಿಯುತ್ತಿರುವುದು ಭಯವನ್ನುಂಟು ಮಾಡಿದೆ.

 ಇನ್ನೂ ಬಿಸಿಲು ಕಾಣಿಸಿಕೊಂಡಿಲ್ಲ

ಇನ್ನೂ ಬಿಸಿಲು ಕಾಣಿಸಿಕೊಂಡಿಲ್ಲ

ಮಳೆ ಕಡಿಮೆಯಾಗಿ ಬಿಸಿಲು ಕಾಣಿಸಿಕೊಂಡರೆ ಆರೋಗ್ಯ ವೃದ್ಧಿಸಲು ಸಾಧ್ಯವಾಗಲಿದೆ. ಈಗಾಗಲೇ ಕೊರೊನಾದಿಂದ ಸಂಕಷ್ಟಕ್ಕೀಡಾದ ಜನಕ್ಕೆ ಮಳೆಯೂ ತೊಡಕಾಗಿ ಕಂಡು ಬರುತ್ತಿದೆ. ಅದರಲ್ಲೂ ಮಡಿಕೇರಿ ತಾಲೂಕಿನಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಶೀತದ ವಾತಾವರಣ ಹೆಚ್ಚಾಗಿ ಒಂದಲ್ಲ ಒಂದು ರೀತಿಯ ತೊಂದರೆಗೆ ಜನ ಸಿಲುಕುವಂತಾಗಿದೆ.

ಕೊಡಗಿನಲ್ಲಿ ಮತ್ತೆ ಮಳೆ ಅಬ್ಬರ, ಹೋಬಳಿವಾರು ಮಳೆ ವಿವರಕೊಡಗಿನಲ್ಲಿ ಮತ್ತೆ ಮಳೆ ಅಬ್ಬರ, ಹೋಬಳಿವಾರು ಮಳೆ ವಿವರ

Recommended Video

ಸಂಜನಾ, ರಾಗಿಣಿ ಆಯ್ತು ಈಗ ದಿಗಂತ್, ಐಂದ್ರಿತಾ ಸರದಿ | Oneindia Kannada
 ಜಿಲ್ಲೆಯಲ್ಲಿ ತಾಲೂಕುವಾರು ಮಳೆ ವಿವರ

ಜಿಲ್ಲೆಯಲ್ಲಿ ತಾಲೂಕುವಾರು ಮಳೆ ವಿವರ

ಮಡಿಕೇರಿ ತಾಲೂಕಿನಲ್ಲಿ ಕಳೆದೊಂದು ದಿನದ ಅವಧಿಯಲ್ಲಿ 20.80 ಮಿ.ಮೀ. ಮಳೆ ಸುರಿದಿದೆ. ಜನವರಿಯಿಂದ ಇಲ್ಲಿಯವರೆಗೆ 2908.44 ಮಿ.ಮೀ. ಮಳೆ ಸುರಿದಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 3351.92 ಮಿ.ಮೀ. ಮಳೆ ದಾಖಲಾಗಿತ್ತು. ವಿರಾಜಪೇಟೆ ತಾಲೂಕಿನಲ್ಲಿ 17.87, ಸೋಮವಾರಪೇಟೆ ತಾಲೂಕಿನಲ್ಲಿ 18.18ಮಿ.ಮೀ. ಮಳೆಯಾಗಿದೆ.

ಗರಿಷ್ಠ 2,859 ಅಡಿಯ ಹಾರಂಗಿ ಜಲಾಶಯದಲ್ಲಿ ಸದ್ಯ 2856.93 ಅಡಿಯಷ್ಟು ನೀರಿದೆ. ಇದೀಗ ನೀರಿನ ಒಳಹರಿವು 3222 ಕ್ಯುಸೆಕ್ ಇದ್ದು, ನದಿಗೆ 500, ನಾಲೆಗೆ 700 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ.

English summary
Rainfall in Madikeri was usually very low in September month. But this time it is worrying that it is still raining across the district,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X