ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನ ಅನಧಿಕೃತ ಹೋಂಸ್ಟೇಗಳ ನೋಂದಣಿಗೆ ಕಡೇ ಅವಕಾಶ!

|
Google Oneindia Kannada News

ಮಡಿಕೇರಿ, ಫೆಬ್ರವರಿ 20: ಕೊಡಗಿನಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಹೋಂ ಸ್ಟೇಗಳಿಂದ ಸಮಸ್ಯೆ ಎದುರಾಗುತ್ತಿರುವುದಲ್ಲದೆ, ಅನಧಿಕೃತ ಹೋಂ ಸ್ಟೇಗಳು ಜಿಲ್ಲಾಡಳಿತಕ್ಕೂ ತಲೆನೋವಾಗಿ ಪರಿಣಮಿಸಿವೆ.

ಈ ಹಿಂದೆಯೇ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಹೋಂ ಸ್ಟೇಗಳ ಮಾಲೀಕರು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳುವಂತೆ ಸೂಚನೆ ನೀಡಿದ್ದರೂ ಅದನ್ನು ಪಾಲಿಸದಿರುವ ಕಾರಣ ಮತ್ತೊಮ್ಮೆ ಕೊನೆಯ ಅವಕಾಶ ನೀಡಲು ಜಿಲ್ಲಾಡಳಿತ ಮುಂದಾಗಿದೆ. ಮಾರ್ಚ್ 20ರೊಳಗೆ ನೋಂದಣಿ ಮಾಡಿಕೊಳ್ಳದಿದ್ದರೆ ಅಂತಹ ಹೋಂ ಸ್ಟೇ ಮಾಲೀಕರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ನೀಡಿದ್ದಾರೆ.

 ಎಲ್ಲೆಲ್ಲೂ ಹುಟ್ಟಿಕೊಂಡ ಹೋಂ ಸ್ಟೇಗಳು

ಎಲ್ಲೆಲ್ಲೂ ಹುಟ್ಟಿಕೊಂಡ ಹೋಂ ಸ್ಟೇಗಳು

ಕಳೆದೊಂದು ದಶಕದ ಅವಧಿಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಸಾವಿರಾರು ಹೋಂ ಸ್ಟೇಗಳು ನಿರ್ಮಾಣವಾಗಿದ್ದು, ಈ ಪೈಕಿ ಕೆಲವು ಅಧಿಕೃತ ನೋಂದಣಿ ಮಾಡಿಕೊಂಡಿದ್ದರೆ, ಬಹುತೇಕ ಹೋಂ ಸ್ಟೇಗಳು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ. ಇಂತಹ ಹೋಂ ಸ್ಟೇಗಳನ್ನು ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವುದು ಕೂಡ ಗುಟ್ಟಾಗಿ ಉಳಿದಿಲ್ಲ. ಈಗಾಗಲೇ ಜಿಲ್ಲೆಯ ಕೆಲವು ಹೋಂಸ್ಟೇಗಳಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳು ಬಯಲಾಗಿವೆ.

'ಹೋಂ ಸ್ಟೇ'; ಕೊಡಗಿಗೆ ಕಪ್ಪುಚುಕ್ಕೆಯಾಗುತ್ತಿವೆಯೇ ಈ ಆತಿಥ್ಯದ ಮನೆಗಳು?'ಹೋಂ ಸ್ಟೇ'; ಕೊಡಗಿಗೆ ಕಪ್ಪುಚುಕ್ಕೆಯಾಗುತ್ತಿವೆಯೇ ಈ ಆತಿಥ್ಯದ ಮನೆಗಳು?

ಹೋಂ ಸ್ಟೇಗಳ ಮೇಲೆ ನಿಗಾ ವಹಿಸದೆ ಹೋದರೆ ಮುಂದಿನ ದಿನಗಳಲ್ಲಿ ಭಾರೀ ಅಪಾಯ ಎದುರಾಗುವ ಸಾಧ್ಯತೆ ಇರುವ ಕಾರಣ ಅನಧಿಕೃತ ಹೋಂ ಸ್ಟೇಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವ ಕೆಲಸವೂ ನಡೆಯುತ್ತಿದೆ. ಈಗಾಗಲೇ ವಿಶೇಷ ತನಿಖಾ ತಂಡವು ಜಿಲ್ಲೆಯ ಹೋಂ ಸ್ಟೇಗಳ ಮೇಲೆ ಕಣ್ಣಿಟ್ಟಿದ್ದು, ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ನಡೆಯುತ್ತಿರುವ ಹೋಂ ಸ್ಟೇಗಳ ಮಾಹಿತಿ ಸಂಗ್ರಹಿಸಿದ್ದು, ಈ ಪ್ರಕಾರ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ದೊರೆತ ಮಾಹಿತಿ ಪ್ರಕಾರ ಸುಮಾರು 350ಕ್ಕೂ ಹೆಚ್ಚು ಅನಧಿಕೃತ ಹೋಂ ಸ್ಟೇಗಳು ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ.

 ಕೊಡಗಿನ ಸಂಸ್ಕೃತಿಗೆ ಮಾರಕವಾಗುವ ಭಯ

ಕೊಡಗಿನ ಸಂಸ್ಕೃತಿಗೆ ಮಾರಕವಾಗುವ ಭಯ

ಇದು ಜಿಲ್ಲೆಯ ಹಿತದೃಷ್ಟಿಯಿಂದ ಮಾರಕ ಬೆಳವಣಿಗೆಯಾಗಿದ್ದು, ಈಗಾಗಲೇ ಜಿಲ್ಲೆಯಲ್ಲಿ ಹೋಂ ಸ್ಟೇಗಳಿಂದ ಪ್ರವಾಸೋದ್ಯಮಕ್ಕೆ ಅನುಕೂಲವಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಮತ್ತೊಂದೆಡೆ ಕೊಡಗಿನ ಸಂಸ್ಕೃತಿ ಬಗ್ಗೆ ಪರಿಣಾಮ ಬೀರುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದಕ್ಕೆ ಮುಖ್ಯ ಕಾರಣ ಮೊದಮೊದಲು ಸ್ಥಳೀಯರೇ ಹೋಂ ಸ್ಟೇ ನಡೆಸುತ್ತಿದ್ದರಾದರೂ ಇದೀಗ ಹೊರಗಿನವರು ಇಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತಿದ್ದಾರೆ. ಹೀಗೆ ಬರುವ ವ್ಯಕ್ತಿಗಳು ಲಾಭದಾಸೆಗೆ ಅಕ್ರಮ ಚಟುವಟಿಕೆಗೂ ಹಿಂಜರಿಯುವುದಿಲ್ಲ. ಇದರಿಂದ ಸ್ಥಳೀಯವಾಗಿ ಪ್ರಾಮಾಣಿಕತೆಯಿಂದ ಹೋಂ ಸ್ಟೇ ನಡೆಸುವ ಕಾಫಿ ಬೆಳೆಗಾರರಿಗೂ ಸಮಸ್ಯೆಗಳಾಗುತ್ತಿದೆ.

 ಮಾ.20ರೊಳಗೆ ಹೋಂ ಸ್ಟೇಗಳ ನೋಂದಣಿ ಕಡ್ಡಾಯ

ಮಾ.20ರೊಳಗೆ ಹೋಂ ಸ್ಟೇಗಳ ನೋಂದಣಿ ಕಡ್ಡಾಯ

ಈಗಾಗಲೇ ಹೋಂ ಸ್ಟೇಗಳ ಚಟುವಟಿಕೆ ಕುರಿತಂತೆ ದೂರುಗಳು ಕೇಳಿ ಬರುತ್ತಿರುವ ಕಾರಣದಿಂದಾಗಿ ಅನಧಿಕೃತವಾಗಿ ಹೋಂ ಸ್ಟೇ ನಡೆಸುತ್ತಿರುವ ಮಾಲೀಕರು ಮಾ.20ರೊಳಗೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಲೇಬೇಕಾಗಿದೆ. ಇಲ್ಲದೆ ಹೋದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ಹೋಂ ಸ್ಟೇ ನಡೆಸುವವರು 2015-20ರ ಪ್ರವಾಸೋದ್ಯಮ ನೀತಿಯ ಮಾರ್ಗಸೂಚಿಗಳ ಅನ್ವಯ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಲೇಬೇಕಾಗಿದೆ. ಜತೆಗೆ ಸ್ಥಳೀಯ ಸಂಸ್ಥೆಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕಾಗಿದೆ. ಆದರೆ ಕೆಲವು ಹೋಂ ಸ್ಟೇಗಳ ಮಾಲೀಕರು ಕೇವಲ ಗ್ರಾಮ ಪಂಚಾಯಿತಿಗಳ ಯಾವುದೇ ರೀತಿಯ ನಿರಾಕ್ಷೇಪಣಾ ಪತ್ರ, ದಾಖಲಾತಿ, ಪರವಾನಿಗೆ ಇಲ್ಲದೇ ಹಾಗೂ ಬಾಡಿಗೆ ಆಧಾರದ ಮೇಲೆ ಹೋಂ ಸ್ಟೇಗಳನ್ನು ನಡೆಸುತ್ತಿರುವುದು ಕಂಡು ಬಂದಿದೆ.

ಮಡಿಕೇರಿ ಹೋಂಸ್ಟೇನಲ್ಲಿ ಅನೈತಿಕ ಚಟುವಟಿಕೆ ಆರೋಪ; 7 ಮಂದಿ ಬಂಧನಮಡಿಕೇರಿ ಹೋಂಸ್ಟೇನಲ್ಲಿ ಅನೈತಿಕ ಚಟುವಟಿಕೆ ಆರೋಪ; 7 ಮಂದಿ ಬಂಧನ

 ಅನಧಿಕೃತ ಹೋಂ ಸ್ಟೇಗಳಿಗೆ ಬೀಗಮುದ್ರೆ

ಅನಧಿಕೃತ ಹೋಂ ಸ್ಟೇಗಳಿಗೆ ಬೀಗಮುದ್ರೆ

ಒಂದು ವೇಳೆ ಹೋಂ ಸ್ಟೇ ನೋಂದಣಿಯನ್ನು ಮಾರ್ಚ್ 20ರೊಳಗೆ ಪ್ರವಾಸೋದ್ಯಮ ಇಲಾಖೆಯಲ್ಲಿ ಆನ್‌ಲೈನ್ ಮೂಲಕ ನೋಂದಣಿ ಮಾಡದಿದ್ದರೆ ಅಂತಹ ಎಲ್ಲಾ ಹೋಂ ಸ್ಟೇಗಳನ್ನು ಅನಧಿಕೃತವೆಂದು ಪರಿಗಣಿಸಲಾಗುತ್ತದೆ. ಜತೆಗೆ ಕಂದಾಯ ಇಲಾಖೆಯಿಂದ ವಿಶೇಷ ತಂಡವನ್ನು ರಚಿಸಲಾಗಿದ್ದು, ಅದು ಪರಿಶೀಲನೆ ನಡೆಸಿ ಅನಧಿಕೃತ ಹೋಂ ಸ್ಟೇಗೆ ಬೀಗಮುದ್ರೆ ಹಾಕುವ ಮೂಲಕ ಕ್ರಮ ಕೈಗೊಳ್ಳಲಿದೆ. ಸದ್ಯ ಜಿಲ್ಲೆಗೊಂದು ಸುತ್ತು ಹೊಡೆದು ವಿಶೇಷ ತನಿಖಾ ತಂಡವು ನೀಡಿದ ಮಾಹಿತಿ ಪ್ರಕಾರ ಅನಧಿಕೃತವಾಗಿ ಮಡಿಕೇರಿ ತಾಲ್ಲೂಕಿನಲ್ಲಿ 210, ಸೋಮವಾರಪೇಟೆ ತಾಲ್ಲೂಕಿನಲ್ಲಿ 83, ವಿರಾಜಪೇಟೆ ತಾಲ್ಲೂಕಿನಲ್ಲಿ 116 ಹೋಂ ಸ್ಟೇಗಳು ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ. ಇದರ ಮಾಲೀಕರಿಗೆ ಇದೀಗ ನೋಂದಣಿಗೆ ಮತ್ತೊಂದು ಅವಕಾಶ ನೀಡಲಾಗಿದೆ.

ಪರವಾನಗಿ, ದಾಖಲೆ ಇಲ್ಲದ ಹೋಂ ಸ್ಟೇ ಮೇಲೆ ಅಧಿಕಾರಿಗಳ ದಾಳಿಪರವಾನಗಿ, ದಾಖಲೆ ಇಲ್ಲದ ಹೋಂ ಸ್ಟೇ ಮೇಲೆ ಅಧಿಕಾರಿಗಳ ದಾಳಿ

ಒಂದು ವೇಳೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ತೋಟಗಳ ನಡುವೆ ಅನಧಿಕೃತವಾಗಿ ಹೋಂ ಸ್ಟೇ ನಡೆಸುವ ಮೂಲಕ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕರೆ ಸಾರ್ವಜನಿಕರು ಕೂಡ ಸಹಾಯಕ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಸ್ಟುವರ್ಟ್ ಹಿಲ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ 571201 ಇಲ್ಲಿಗೆ ಪತ್ರದ ಮೂಲಕ ಅಥವಾ ದೂರವಾಣಿ ಸಂಖ್ಯೆ: 08272-228580ಕ್ಕೆ ಕರೆ ಮಾಡಿ ದೂರು ನೀಡಲು ಅವಕಾಶವಿದೆ.

English summary
DC AnisKanmani Joy has issued an alert against unofficial homestay owners if they do not register by March 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X