ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ನಾಪತ್ತೆಯಾಗಿದ್ದ ಕುಶಾಲನಗರದ ಎಎಸ್‌ಐ ಶವವಾಗಿ ಪತ್ತೆ

|
Google Oneindia Kannada News

ಮಡಿಕೇರಿ, ಫೆಬ್ರವರಿ 04; ನಾಪತ್ತೆಯಾಗಿದ್ದ ಕುಶಾಲನಗರದ ಸಂಚಾರ ಠಾಣೆ ಎಎಸ್‌ಐ ಎಸ್. ಎಂ. ಸುರೇಶ್ ಶವವಾಗಿ ಪತ್ತೆಯಾಗಿದ್ದಾರೆ. ಹಾಸನದ ಕಾಡ್ಲೂರು ಬಳಿಯ ನದಿಯಲ್ಲಿ ಶುಕ್ರವಾರ ಶವ ಸಿಕ್ಕಿದೆ.

ಕೊಡಗು ಜಿಲ್ಲೆಯ ಕುಶಾಲನಗರ ಸಂಚಾರಿ ಠಾಣೆ ಎಎಸ್‌ಐ 51 ವರ್ಷದ ಎಂ. ಸುರೇಶ್ ಜನವರಿ 27ರಿಂದ ನಾಪತ್ತೆಯಾಗಿದ್ದರು. ಅವರ ಪತ್ನಿ ನೀಡಿದ ದೂರಿನ ಅನ್ವಯ ಪೊಲೀಸರು ಹುಡುಕಾಟವನ್ನು ನಡೆಸುತ್ತಿದ್ದರು.

ಇಂಜಿನಿಯರ್ ಕಿಡ್ನಾಪ್ ಕೇಸ್: ಮೂರೇ ತಾಸಿನಲ್ಲಿ ಕಿಡ್ನಾಪರ್ಸ್ ಅಂದರ್ ಮಾಡಿದ ಯಲಹಂಕ ಪೊಲೀಸ್ಇಂಜಿನಿಯರ್ ಕಿಡ್ನಾಪ್ ಕೇಸ್: ಮೂರೇ ತಾಸಿನಲ್ಲಿ ಕಿಡ್ನಾಪರ್ಸ್ ಅಂದರ್ ಮಾಡಿದ ಯಲಹಂಕ ಪೊಲೀಸ್

Kushalnagar ASI SM Suresh Found Dead

ಶುಕ್ರವಾರ ಹಾಸನ ಜಿಲ್ಲೆಯ ಕಾಡ್ಲೂರು ಬಳಿಯ ನದಿಯಲ್ಲಿ ಶವ ಪತ್ತೆಯಾಗಿದೆ. ಕೊಣನೂರು ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಎಂ. ಸುರೇಶ್ ಅರಕಲಗೂಡು ಮೂಲದವರು ಕುಶಾಲನಗರದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.

ರೋಗಿ ಜೀವ ಕಾಪಾಡಲು ಮೆಕಾನಿಕ್ ಆಗಿ ಬದಲಾದ ಸಂಚಾರ ಪೊಲೀಸ್ ಕಾನ್‌ಸ್ಟೇಬಲ್ ! ರೋಗಿ ಜೀವ ಕಾಪಾಡಲು ಮೆಕಾನಿಕ್ ಆಗಿ ಬದಲಾದ ಸಂಚಾರ ಪೊಲೀಸ್ ಕಾನ್‌ಸ್ಟೇಬಲ್ !

ಎಸ್. ಎಂ. ಸುರೇಶ್ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಎಸ್‌ಎಸ್‌ಐ ಆಗಿ ಕೆಲಸ ಮಾಡುತ್ತಿದ್ದರು. ಅದಕ್ಕೂ ಮೊದಲು ಕುಶಾಲ ನಗರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದರು.

73ನೇ ಗಣರಾಜ್ಯೋತ್ಸವ: 939 ಪೊಲೀಸ್ ಸಿಬ್ಬಂದಿಗೆ ಶೌರ್ಯ ಪ್ರಶಸ್ತಿ 73ನೇ ಗಣರಾಜ್ಯೋತ್ಸವ: 939 ಪೊಲೀಸ್ ಸಿಬ್ಬಂದಿಗೆ ಶೌರ್ಯ ಪ್ರಶಸ್ತಿ

ಸಹೋದ್ಯೋಗಿಗಳು ಹೇಳುವ ಪ್ರಕಾರ ನಾಪತ್ತೆಯಾಗುವ ಮೊದಲು ರಾತ್ರಿ 8 ಗಂಟೆ ತನಕ ಅವರು ಠಾಣೆಯಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದರು. ಬಳಿಕ ಕುಶಾಲನಗರದ ಸಿದ್ದಯ್ಯ ಪುರಾಣಿಕ್ ಲೇಔಟ್‌ನಲ್ಲಿನ ನಿವಾಸಕ್ಕೆ ವಾಪಸ್ ಆಗಿರಲಿಲ್ಲ.

ಶುಕ್ರವಾರ ಸಂಜೆಯಾದರೂ ಎಸ್. ಎಂ. ಸುರೇಶ್ ಠಾಣೆಗೆ ಆಗಮಿಸಿರಲಿಲ್ಲ. ಆಗ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಆಗ ಅವರ ಮನೆಗೆ ಬೀಗ ಹಾಕಲಾಗಿತ್ತು. ಸುರೇಶ್ ಪತ್ನಿ ಹಿರಿಯ ಪುತ್ರಿ ಸ್ಪಂದನಾ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ಪತಿ ಸಂಪರ್ಕಕ್ಕೆ ಸಿಗದ ಕಾರಣ ಅವರು ಸಹ ಆತಂಕಗೊಂಡಿದ್ದರು.

ಪತಿಯ ಮೊಬೈಲ್ ಸ್ವಿಚ್ ಆಫ್ ಬರುತ್ತಿದ್ದ ಕಾರಣ ಬೆಂಗಳೂರಿನಿಂದ ಕುಶಾಲನಗರಕ್ಕೆ ಆಗಮಿಸಿದ್ದರು. ಶುಕ್ರವಾ ಸಂಜೆಯ ತನಕವೂ ಪತಿ ಮನೆಗೆ ಆಗಮಿಸಿದ ಕಾರಣ ಕುಶಾಲನಗರ ಪೊಲೀಸರಿಗೆ ದೂರು ನೀಡಿದ್ದರು.

ಗುರುವಾರ ರಾತ್ರಿ 9.45ಕ್ಕೆ ಪತಿ ನನಗೆ ಕರೆ ಮಾಡಿದ್ದರು. ಕೋವಿಡ್ ಲಸಿಕೆ ಬೂಸ್ಟರ್ ಡೋಸ್ ಪಡೆದುಕೊಂಡೆ ಎಂದು ಮಾಹಿತಿ ನೀಡಿದ್ದರು. ಮರುದಿನ ರಜೆ ಹಾಕಿ ವಿಶ್ರಾಂತಿ ಪಡೆಯುವಂತೆ ಹೇಳಿದ್ದೆ.

ಶುಕ್ರವಾರ ಬೆಳಗ್ಗೆ 7.30ಕ್ಕೆ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. 11 ಗಂಟೆಗೆ ಮತ್ತೆ ಕಾಲ್ ಮಾಡಿದಾಗಲೂ ಸ್ವಿಚ್ ಆಫ್ ಬರುತ್ತಿತ್ತು. ಬಳಿಕ ಕುಶಾಲನಗರದಲ್ಲಿರುವ ನನ್ನ ತಂಗಿಗೆ ಕರೆ ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ಅವರು ಮನೆಗೆ ಭೇಟಿ ನೀಡಿದಾಗ ಮನೆ ಬೀಗ ಹಾಕಿತ್ತು. ಬೀಗ ಒಡೆದು ನೋಡಿದರೆ ಮನೆಯಲ್ಲಿಯೂ ಸುರೇಶ್ ಇರಲಿಲ್ಲ ಎಂದು ಮಾಹಿತಿ ನೀಡಿದರು ಎಂದು ದೂರಿನಲ್ಲಿ ತಿಳಿಸಿದ್ದರು.

ಎಸ್. ಎಂ. ಸುರೇಶ್ ಸೌಮ್ಯ ಸ್ವಭಾವದ ವ್ಯಕ್ತಿ ಎಂದು ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಹೇಳುತ್ತಾರೆ. ಸುರೇಶ್ ಹುಡುಕಾಟಕ್ಕಾಗಿ ಡಿವೈಎಸ್‌ಪಿ ಶೈಲೇಂದ್ರ ವಿಶೇಷ ತಂಡ ರಚನೆ ಮಾಡಿದ್ದರು.

ಪೊಲೀಸರು ತನಿಖೆ ನಡೆಸಿದಾಗ ಅವರ ಮೊಬೈಲ್‌ನ ಕೊನೆಯ ಲೋಕೇಶನ್ ಕುಶಾಲನಗರದ ಗುಮ್ಮಚೋಲಿ ಪ್ರದೇಶದಲ್ಲಿ ಪತ್ತೆಯಾಗಿತ್ತು. ಶುಕ್ರವಾರ ಅವರ ಶವ ಹಾಸನದಲ್ಲಿ ಪತ್ತೆಯಾಗಿದೆ.

English summary
Kushalnagar traffic ASI S. M. Suresh found dead in Hassa. 51 year old S. M. Suresh missing from January 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X