ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು ಜಿಲ್ಲೆಯ 5ನೇ ತಾಲ್ಲೂಕಾಗಿ ಕುಶಾಲನಗರ ಅಸ್ತಿತ್ವಕ್ಕೆ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಜುಲೈ 6: ಕುಶಾಲನಗರವನ್ನು ಕೇಂದ್ರವಾಗಿಸಿಕೊಂಡ ನೂತನ ತಾಲ್ಲೂಕನ್ನು ಕಂದಾಯ ಸಚಿವ ಆರ್.ಅಶೋಕ್ ಉದ್ಘಾಟಿಸುವ ಮೂಲಕ, ಕೊಡಗು ಜಿಲ್ಲೆಯ ಐದನೇ ತಾಲ್ಲೂಕು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು.

ತಾಲ್ಲೂಕು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕಂದಾಯ ಸಚಿವರು, "ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಪೊನ್ನಂಪೇಟೆ ಮತ್ತು ಕುಶಾಲನಗರ ನೂತನ ತಾಲ್ಲೂಕಿಗೆ ಅಧಿಸೂಚನೆ ಹೊರಡಿಸಿತ್ತು. ಅದರಂತೆ ಇಂದು ಕುಶಾಲನಗರ ತಾಲ್ಲೂಕು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ,'' ಎಂದರು.

"ತಾಲ್ಲೂಕು ಕೇಂದ್ರದಲ್ಲಿ ಗ್ರೇಡ್- 1 ತಹಶೀಲ್ದಾರರು ಸೇರಿದಂತೆ ಒಟ್ಟು 12 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಜೊತೆಗೆ 50 ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿದೆ. ಕುಶಾಲನಗರ ತಾಲ್ಲೂಕು ಅಭಿವೃದ್ಧಿಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ನೆರವು ನೀಡಲಾಗುವುದು. ಹಂತಹಂತವಾಗಿ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು,'' ಎಂದು ಸಚಿವ ಆರ್. ಅಶೋಕ್ ಹೇಳಿದರು.

 Madikeri: Kushalanagar Formation As The 5th Taluk Of Kodagu District

132 ಕೋಟಿ ಮಂಜೂರು
"ಕೊಡಗು ಜಿಲ್ಲೆಗೆ 2020- 21ನೇ ಸಾಲಿನಲ್ಲಿ ವಿಪತ್ತು ನಿರ್ವಹಣೆಗಾಗಿ ರಾಜ್ಯ ಸರ್ಕಾರ ಒಟ್ಟು 132 ಕೋಟಿ ಹಣ ಮಂಜೂರು ಮಾಡಿದೆ. ಪ್ರವಾಹ ಪೀಡಿತರಿಗೆ 82 ಕೋಟಿ, ಬೆಳೆ ಹಾನಿಗೆ 30 ಕೋಟಿ, ಕೋವಿಡ್ ನಿರ್ವಹಣೆಗೆ 10 ಕೋಟಿ ಸೇರಿದಂತೆ ಒಟ್ಟು 132 ಕೋಟಿಯಲ್ಲಿ ಇದೀಗ ಜಿಲ್ಲೆಯಲ್ಲಿ 106 ಕೋಟಿ ವಿಪತ್ತು ನಿಧಿ ಇರುವುದಾಗಿ,'' ಮಾಹಿತಿ ಒದಗಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, "ಕುಶಾಲನಗರ- ಸುಂಟಿಕೊಪ್ಪ ಹೋಬಳಿ ಅಧಿಕ ಜನಸಂಖ್ಯೆ ಹೊಂದಿತ್ತು. ಈಗ ತಾಲೂಕು ಆಗಿ ಘೋಷಣೆಯಾಗಿದ್ದು ಸಂತಸದ ವಿಷಯ ಎಂದರಲ್ಲದೇ, ಎರಡು ಹೋಬಳಿಗಳಲ್ಲಿ ಅತೀ ಹೆಚ್ಚಿನ ಪ್ರಮಾಣದ ವ್ಯಾಪಾರ ವಹಿವಾಟು ನಡೆಯುತ್ತಿದೆ. ನೂತನ ತಾಲ್ಲೂಕು ಮೂಲಕ ಜನರಿಗೆ ಉತ್ತಮ ಆಡಳಿತ ನೀಡಲು ಸಾದ್ಯವಾಗುತ್ತದೆ,'' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 Madikeri: Kushalanagar Formation As The 5th Taluk Of Kodagu District

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕೊಡಗು- ಮೈಸೂರು ಲೋಕಸಭಾ ಕ್ಷೇತ್ರ ಸಂಸದ ಪ್ರತಾಪ್ ಸಿಂಹ ಮಾತನಾಡಿ, "ಅತೀ ಶೀಘ್ರದಲ್ಲಿ ಬೆಳವಣಿಗೆ ಕಂಡ ಕುಶಾಲನಗರ ಅಭಿವೃದ್ಧಿಯತ್ತ ಸರ್ಕಾರ ಚಿಂತನೆ ಹರಿಸಿ ನೂತನ ತಾಲೂಕು ಘೋಷಣೆ ಮಾಡಿದೆ. ಕಂದಾಯ ಸಚಿವ ಆರ್. ಅಶೋಕ್, ಸ್ಥಳೀಯ ಶಾಸಕ ಅಪ್ಪಚ್ಚು ರಂಜನ್ ಶ್ರಮ ಇದರಲ್ಲಿ ಅಡಗಿದೆ,'' ಎಂದರು.

Recommended Video

ಹೆಂಡತಿ ಬೈದು ಬುದ್ಧಿ ಹೇಳಿದ ಮೇಲೆ ಕ್ಷಮೆ ಕೇಳಿದ ದಿನೇಶ್ ಕಾರ್ತಿಕ್! | Oneindia Kannada

ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಮಾತನಾಡಿ, "ಕುಶಾಲನಗರವನ್ನು ಕಾವೇರಿ ತಾಲ್ಲೂಕು ಆಗಬೇಕು ಎಂದು ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗಿದ್ದು, ಅದರಂತೆ ತಾಲ್ಲೂಕು ಅಸ್ತಿತ್ವಕ್ಕೆ ಬಂದಿರುವುದು ಸಂತಸ ತಂದಿದೆ,'' ಎಂದರು.

English summary
Kushalanagar new taluk was inaugurated by Revenue Minister R. Ashok. The fifth taluk of Kodagu district officially came into being.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X