ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿಪ್ಪು ಹುಟ್ಟಿದ್ದು ನವೆಂಬರ್ ಹತ್ತೋ? ಇಪ್ಪತ್ತೋ?

ಟಿಪ್ಪು ಜಯಂತಿಯನ್ನು ನವೆಂಬರ್ 10ರಂದು ಸರ್ಕಾರ ಆಚರಿಸಲು ಮುಂದಾಗಿದ್ದು, ಕೊಡಗಿನಲ್ಲಿ ಹಲವು ಸಂಘಟನೆಗಳ ವಿರೋಧ ವ್ಯಕ್ತಪಡಿಸಿವೆ. ಇಷ್ಟಕ್ಕೂ ಟಿಪ್ಪು ಹುಟ್ಟಿದ್ದು ನವೆಂಬರ್ ಹತ್ತೋ? ಇಪ್ಪತ್ತೋ?

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ನವೆಂಬರ್ 02: ಟಿಪ್ಪು ಜಯಂತಿಯನ್ನು ನವೆಂಬರ್. 10ರಂದು ಸರ್ಕಾರ ಆಚರಿಸಲು ಮುಂದಾಗಿದ್ದು, ಕೊಡಗಿನಲ್ಲಿ ಹಲವು ಸಂಘಟನೆಗಳ ವಿರೋಧ ವ್ಯಕ್ತಪಡಿಸಿವೆ. ಇಷ್ಟಕ್ಕೂ ಟಿಪ್ಪು ಹುಟ್ಟಿದ್ದು ನವೆಂಬರ್ ಹತ್ತೋ? ಇಪ್ಪತ್ತೋ ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಪ್ರಶ್ನಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸರಕಾರವೇ ಮುದ್ರಿಸಿ ಪ್ರಕಟಿಸಿದ ಪುಸ್ತಕ ದಾಖಲೆಗಳಲೆಲ್ಲ ಹೈದರನ ಮಗನಾದ ಟಿಪ್ಪು 1753ರ ನವೆಂಬರ್ 20ರ ಶುಕ್ರವಾರದಂದು ಬೆಂಗಳೂರಿನ ದೇವನ ಹಳ್ಳಿಯಲ್ಲಿ ಜನ್ಮತಾಳಿದ ನೆಂದು 2011ರಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾದ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಹಾಗೂ ಟಿಪ್ಪುವಿನ ಅಧ್ಯಯನ ವಿಷಯದಲ್ಲಿರುವ ಹಲವು ಪುಸ್ತಕಗಳಲೆಲ್ಲ ನವೆಂಬರ್ 20 ಎಂದೇ ಮುದ್ರಿಸಲಾಗಿದೆ.

 Kodava Koota President B. Aiyappa on Tipu Sultan Date of Birth confusion

ಟಿಪ್ಪುವಿನ ಜನನ ನವೆಂಬರ್ 20 ಆದರೆ ಟಿಪ್ಪುವಿನ ಜನನ ದಿನಕ್ಕೂ ಮೊದಲೇ ಟಿಪ್ಪು ಜಯಂತಿಯನ್ನು ಆಚರಿಸಲು ಹೊರಟಿರುವ ಸರಕಾರಕ್ಕೆ ಭೇಷ್ ಎನ್ನಲೇ ಬೇಕಾಗಿದೆ. ಮಕ್ಕಳಿಗೆ ಕಲಿಸುವುದು ಟಿಪ್ಪು ಜಯಂತಿ ನ.20 ಎಂದು, ಆಚರಿಸುವುದು ನ.10ರಂದು !

ಶಾಂತಿ ನೆಮ್ಮದಿಯಿಂದ ಕೂಡಿದಂತಹ ಕೊಡವ ನಾಡನ್ನು ಧ್ವಂಸ ಮಾಡಿದ ಟಿಪ್ಪುವಿನ ಜಯಂತಿಯ ಹಿಂದಿನ ಉದ್ದೇಶವಾದರೂ ಏನು? ಎಂದು ಪ್ರಶ್ನಿಸಿರುವ ಅವರು ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಿಸುತ್ತಿರುವುದಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.

English summary
According to government records Tipu Sultan's date of birth is on November 20, 1750, But, Karnataka Government is celebrating Tipu Jayanti on November 10, Why is this confusion questions Kodava Makkada Koota President Bollajira B. Aiyappa
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X