ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗನ್ನು ಮತ್ತೆ ಕಟ್ಟುವುದು ಸರ್ಕಾರದ ಸದ್ಯದ ಸವಾಲು

By Gururaj
|
Google Oneindia Kannada News

Recommended Video

Kodagu floods: Bangalore drone start-up helps locate stranded people

ಬೆಂಗಳೂರು, ಆಗಸ್ಟ್ 21 : ಭಾರಿ ಮಳೆ, ಪ್ರವಾಹ, ಗುಡ್ಡ ಕುಸಿತದಿಂದಾಗಿ ಕೊಡಗು ಜಿಲ್ಲೆ ಸಂಪೂರ್ಣವಾಗಿ ತತ್ತರಿಸಿ ಹೋಗಿದೆ. ಮಳೆ ನಿಂತ ಮೇಲೆ ಕೊಡಗನ್ನು ಪುನಃ ಕಟ್ಟುವ ಸವಾಲು ಕರ್ನಾಟಕ ಸರ್ಕಾರದ ಮುಂದಿದೆ.

ಎರಡು ದಿನಗಳ ಕಾಲ ಕೊಡಗಿನಲ್ಲಿ ಪ್ರವಾಸ ಮಾಡಿ ಮುಖ್ಯಮಂತ್ರಿ ಕುಮಾರಸ್ವಾಮಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಮಳೆ ನಿಂತ ಬಳಿಕ ಪರಿಹಾರ ಕಾರ್ಯಗಳನ್ನು ಕೊಡಗು ಜಿಲ್ಲೆಯಲ್ಲಿ ಆರಂಭಿಸಲಾಗುತ್ತದೆ.

ಕೊಡಗು ಮತ್ತೆ ಕಟ್ಟಲು ಸರ್ಕಾರದಿಂದ ಸಮರೋಪಾದಿ ಕಾರ್ಯ: ಸಿಎಂಕೊಡಗು ಮತ್ತೆ ಕಟ್ಟಲು ಸರ್ಕಾರದಿಂದ ಸಮರೋಪಾದಿ ಕಾರ್ಯ: ಸಿಎಂ

ಪರಿಹಾರ ವಿತರಣೆ, ಸಂತ್ರಸ್ತರಿಗೆ ಉದ್ಯೋಗ, ತಾತ್ಕಲಿಕ ವಸತಿ ವ್ಯವಸ್ಥೆ, ಆಹಾರ ಸಾಮಾಗ್ರಿ ವಿತರಣೆ, ಶಾಶ್ವತ ಮನೆ ನಿರ್ಮಾಣ ಮುಂತಾದ ಕೆಲಸವನ್ನು ಸರ್ಕಾರ ಮಾಡಬೇಕಿದೆ. ಸದ್ಯ, ನಿರಾಶ್ರಿತರ ಶಿಬಿರದಲ್ಲಿರುವ ಜನರು ಮಳೆ ನಿಂತ ಮೇಲೆ ತಮ್ಮ ಊರಿಗೆ ತೆರಳಲಿದ್ದಾರೆ.

Kodagus rehabilitation challenge for Karnataka government

ಪರಿಹಾರ ಸಾಮಾಗ್ರಿ : ನಿರಾಶ್ರಿತರ ಶಿಬಿರದಲ್ಲಿರುವ ಪ್ರತಿ ಕುಟುಂಬಕ್ಕೆ ಸರ್ಕಾರ ಪ್ರಾಥಮಿಕವಾಗಿ 3,800 ರೂ. ಹಣ ನೀಡಲಿದೆ. 10 ಕೆಜಿ ಅಕ್ಕಿ, 1 ಕೆಜಿ ಸಕ್ಕರೆ, 1 ಲೀಟರ್ ಪಾಮ್ ಎಣ್ಣೆ, 1 ಕೆಜಿ ತೊಗರಿ ಬೇಳೆ, 5 ಲೀಟರ್ ಸೀಮೆಎಣ್ಣೆಯನ್ನು ನೀಡಲಾಗುತ್ತದೆ.

ಕೊಡಗಿನ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ಭರವಸೆಯ ಹೊಂಗಿರಣಕೊಡಗಿನ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ಭರವಸೆಯ ಹೊಂಗಿರಣ

ಕರ್ನಾಟಕ ಸರ್ಕಾರ ವಿವಿಧ ಇಂಜಿನಿಯರ್, ಸೇನಾಪಡೆಯ ಯೋಧರ ನೆರವು ಪಡೆದು ನಿರಾಶ್ರಿತರ ಕ್ಯಾಂಪ್‌ಗಳಲ್ಲಿರುವ ಜನರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲಿದೆ. ಈಗಾಗಲೇ ಅಗತ್ಯ ಸ್ಥಳ ಗುರುತಿಸುವಂತೆ ಕೊಡಗು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಮನೆ ಕಳೆದುಕೊಂಡ ಸಂತ್ರಸ್ತರಿಗಾಗಿ ಸರ್ಕಾರ 2 ಸಾವಿರ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಾಣ ಮಾಡಲಿದೆ. ಅಗತ್ಯ ವ್ಯವಸ್ಥೆಯನ್ನು ಹೊಂದಿರುವ 1 ಶೆಡ್ ನಿರ್ಮಾಣಕ್ಕೆ ಸುಮಾರು 10 ಸಾವಿರ ರೂ. ವೆಚ್ಚವಾಗಲಿದೆ.
ಮನೆಗಳನ್ನು ಕಳೆದುಕೊಂಡ ಜನರಿಗಾಗಿ ನರೇಗಾ ಯೋಜನೆಯಡಿ ಉದ್ಯೋಗವಕಾಶ ನೀಡಲಾಗುತ್ತದೆ.

English summary
Karnataka government yet to begin rehabilitation measures in flood hit Kodagu district. Compensation, jobs, temporary shelters rehabilitation is a big challenge for government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X