ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನ ಡಾ.ಚರಿಷ್ಮಾ ಕಲಿಯಂಡ ಲಿವರ್ ಪೂಲ್ ನಗರ ಕೌನ್ಸಿಲರಾಗಿ ಆಯ್ಕೆ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಸೆಪ್ಟೆಂಬರ್ 10: ಕೊಡಗು ಮೂಲದ ಡಾ.ಚರಿಷ್ಮಾ ಕಲಿಯಂಡ ಅವರು ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಲಿವರ್ ಪೂಲ್ ನಗರದ ಕೌನ್ಸಿಲರಾಗಿ ಆಯ್ಕೆಯಾಗಿದ್ದಾರೆ.

ಕೊಡಗು ಜಿಲ್ಲೆಯ ನಾಪೋಕ್ಲು ಬಳಿಯ ಕೊಳಕೇರಿ ಮೂಲದ ಡಾ.ಚರಿಷ್ಮಾ ಅವರು ಕಲಿಯಂಡ ಮಾದಪ್ಪ (ಜಯ) ಮತ್ತು ಭಾನುಮತಿ (ಚೊಟ್ಟೇರ ಕಾವೇರಪ್ಪ ಅವರ ಪುತ್ರಿ) ದಂಪತಿಗಳ ಪುತ್ರಿ. ಪ್ರಸ್ತುತ ಅವರ ಇಡೀ ಕುಟುಂಬ ಲಿವರ್ ಪೂಲ್ ನಗರದಲ್ಲಿ ನೆಲೆಸಿದ್ದಾರೆ.

1987 ಡಿಸೆಂಬರ್ 2 ರಂದು ಜನಿಸಿದ ಡಾ.ಚರಿಷ್ಮಾ, ಬೆಂಗಳೂರಿನಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದ ಬಳಿಕ ಸಿಡ್ನಿಯ ಲಿವರ್ ಪೂಲ್ ನಲ್ಲಿ ನೆಲೆಸಿದರು. ಇವರು ಈಗ ಆಸ್ಟ್ರೇಲಿಯಾದ ಪ್ರಜೆಯಾಗಿದ್ದಾರೆ.

Kodagu Woman Dr.Charisma Kaliyanda Has Elect To Be A Liverpool City Councilor

ನೋಂದಾಯಿತ ಆಕ್ಯುಪೇಷನಲ್ ಥೆರಪಿಸ್ಟ್ ಡಾ. ಚರಿಷ್ಮಾ, ಪ್ರಸ್ತುತ ಎಸ್‌ಟಿಇಎಂ ವೃತ್ತಿಪರರೊಂದಿಗೆ ತಮ್ಮ ಕೌಶಲ್ಯಗಳನ್ನು ಬೆಳೆಸಲು ಮತ್ತು ಸುಧಾರಿಸಲು ಕೆಲಸ ಮಾಡುತ್ತಿದ್ದರು. ಕಾರ್ಮಿಕ ಪಕ್ಷಕ್ಕೆ ಸೇರುವ ಮೂಲಕ ರಾಜಕೀಯ ಪ್ರವೇಶಿಸಿದರು.

ಅವರು ಎರಡು ವರ್ಷಗಳ ಹಿಂದೆ ಕೌನ್ಸಿಲ್ ಚುನಾವಣೆಯಲ್ಲಿ ಸ್ಪರ್ಧಿಸಿ, ಅತ್ಯಂತ ಕಡಿಮೆ ಅಂತರದಿಂದ ಸೋಲನುಭವಿಸಿದ್ದರು.

ಇತ್ತೀಚೆಗೆ ಕಾರ್ಮಿಕ ಪಕ್ಷದ ಉನ್ನತ ನಾಯಕರು ದಕ್ಷಿಣ ವಾರ್ಡ್ ನಿಂದ ಲಿವರ್ ಪೂಲ್ ಸಿಟಿಯ ಕೌನ್ಸಿಲರಾಗಿ ಸರ್ವಾನುಮತದಿಂದ ಇವರನ್ನು ಆಯ್ಕೆ ಮಾಡಿದ್ದಾರೆ.

Recommended Video

China ವಿರುದ್ಧ Siachen ನಲ್ಲಿ ನಮ್ಮ ಯೋಧರಿಗೆ ಎದುರಾಯ್ತು ದೊಡ್ಡ ಸಂಕಷ್ಟ. | Oneindia Kannada

ಈ ಚುನಾವಣೆಯೊಂದಿಗೆ ಡಾ.ಚರಿಷ್ಮಾ ಅವರು ಮುಂದಿನ ದಿನಗಳಲ್ಲಿ ನಗರದ ಮೇಯರ್ ಆಗುವ ಸಾಧ್ಯತೆಯಿದ್ದು, ಲಿವರ್ ಪೂಲ್ ನ 144 ವರ್ಷಗಳ ಇತಿಹಾಸದಲ್ಲಿ ಕೌನ್ಸಿಲ್‌ಗೆ ಆಯ್ಕೆಯಾದ ಕೇವಲ 11 ಮಹಿಳೆಯರಲ್ಲಿ ಡಾ.ಚರಿಷ್ಮಾ ಒಬ್ಬರಾಗಿದ್ದಾರೆ. ಪ್ರಸ್ತುತ ಡಾ.ಚರಿಷ್ಮಾ ಅವರ ಸಹೋದರ ತರುಣ್ ತಿಮ್ಮಯ್ಯ ಅವರ ಕುಟುಂಬವೂ ಲಿವರ್ ಪೂಲ್ ಸಿಟಿಯಲ್ಲಿ ನೆಲೆಸಿದ್ದಾರೆ.

English summary
Dr.Charisma Kaliyanda, a native of Kodagu, has been elected as a councilor for the City of Liverpool in Sydney, Australia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X