ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು ಜಿಲ್ಲೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಜೂನ್ 22; ಕೊಡಗು ಜಿಲ್ಲೆಯ ವೈದ್ಯಕೀಯ ಕ್ಷೇತ್ರಕ್ಕೆ ಸಂಸದರಿಂದ ಮಹತ್ವದ ಕೊಡುಗೆ ಘೋಷಣೆಯಾಗಿದೆ. ಜಿಲ್ಲೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣಗೊಳ್ಳಲಿದೆ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದರು.

ಮಂಗಳವಾರ ಸಂಸದರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. "ಪ್ರತಿ ನಿಮಿಷಕ್ಕೆ 1000 ಲೀಟರ್ ಆಕ್ಸಿಜನ್ ಉತ್ಪಾದನೆ ಮಾಡುವ ಘಟಕ ನಿರ್ಮಾಣವಾಗಲಿದ್ದು, ಇದಕ್ಕೆ 1.50 ಕೋಟಿ ರೂ. ವೆಚ್ಚವಾಗಲಿದೆ" ಎಂದರು.

ಆಕ್ಸಿಜನ್ ದುರಂತ; ನ್ಯಾಯಾಂಗ ಆಯೋಗದ ವಿಚಾರಣೆ ಮೈಸೂರಲ್ಲಿ! ಆಕ್ಸಿಜನ್ ದುರಂತ; ನ್ಯಾಯಾಂಗ ಆಯೋಗದ ವಿಚಾರಣೆ ಮೈಸೂರಲ್ಲಿ!

"ಈ ಘಟಕವು ಮುಂದಿನ ಜುಲೈ 15ರೊಳಗಾಗಿ ನಿರ್ಮಾಣಗೊಳ್ಳಲಿದ್ದು ರಾಷ್ಟ್ರೀಯ ಹೆದ್ದಾರಿ ನಿಗಮವು ಇದರ ನಿರ್ಮಾಣ ಮಾಡಲಿದೆ. ನಿಗಮ ಈಗಾಗಲೇ ದೇಶಾದ್ಯಂತ ಇಂತಹ 1200 ಘಟಕಗಳನ್ನು ಸ್ಥಾಪಿಸಲಿದೆ" ಎಂದು ತಿಳಿಸಿದರು.

ಆಕ್ಸಿಜನ್, ಲಸಿಕೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ತಾರತಮ್ಯ: ಕರವೇ ಟೀಕೆಆಕ್ಸಿಜನ್, ಲಸಿಕೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ತಾರತಮ್ಯ: ಕರವೇ ಟೀಕೆ

Kodagu To Get Oxygen Generation Plant

"ಪುಟ್ಟ ಜಿಲ್ಲೆಯಾದ ಕೊಡಗಿನ ಅಗತ್ಯತೆ ಮನಗಂಡು ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲಾ ಅಗತ್ಯತೆಗಳನ್ನು ಪೂರೈಸುತ್ತಿದ್ದಾರೆ. ಸ್ಥಳೀಯ ಶಾಸಕರಾದ ಕೆ. ಜಿ. ಬೋಪಯ್ಯ, ಎಂ. ಪಿ. ಅಪ್ಪಚ್ಚು ರಂಜನ್, ಎಂ. ಪಿ. ಸುನೀಲ್ ಸುಬ್ರಹ್ಮಣಿ ಬೇಡಿಕೆಯ ಧ್ವನಿಗೆ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಕ್ಕಿದೆ" ಎಂದು ಪ್ರತಾಪ್ ಸಿಂಹ ಹೇಳಿದರು.

ಕೊಡಗು; ಕೊರೊನಾ ಪ್ರಕರಣಗಳ ಏರಿಳಿತದಲ್ಲಿ ಕಾಣದ ಕೈಗಳ ಕೈವಾಡ? ಕೊಡಗು; ಕೊರೊನಾ ಪ್ರಕರಣಗಳ ಏರಿಳಿತದಲ್ಲಿ ಕಾಣದ ಕೈಗಳ ಕೈವಾಡ?

"ಜಿಲ್ಲೆಯಲ್ಲಿ 13 ಸಾವಿರ ಲೀಟರ್ ಉತ್ಪಾದನಾ ಸಾಮರ್ಥ್ಯದ ಆಕ್ಸಿಜನ್ ಪ್ಲಾಂಟ್ ಈಗಾಗಲೇ ಇದ್ದು, ಈ ಘಟಕ ಸ್ಥಾಪನೆ ಆದರೆ ಇಲ್ಲಿಯೇ ನಿಮಿಷಕ್ಕೆ 1 ಸಾವಿರ ಲೀಟರ್ ಆಕ್ಸಿಜನ್ ಉತ್ಪಾದನೆ ಮಾಡಬಹುದು. ಇದರಿಂದ ಬೇರೆ ಊರುಗಳಿಂದ ಆಕ್ಸಿಜನ್ ಬರಲಿ ಎಂದು ಕಾಯುವುದು ತಪ್ಪಲಿದೆ" ಎಂದರು.

"ಮುಂದೆ ಸೋಮವಾರಪೇಟೆಯಲ್ಲೂ ಘಟಕ ಸ್ಥಾಪನೆಯಾದರೆ ಕೊಡಗಿನ ಆಕ್ಸಿಜನ್ ಬೇಡಿಕೆಯನ್ನು ಇಲ್ಲೇ ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ" ಎಂದು ಸಂಸದರು ತಿಳಿಸಿದರು.

English summary
Mysuru-Kodagu MP Pratap Simha inspected spot for oxygen generation plant at Kodagu district hospital. Plant will set up in at the cost of 1.50 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X