ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಡಿಕೇರಿ; ಹುಲಿ ಸೆರೆ ಸಿಕ್ಕಿಲ್ಲ, ಅರಣ್ಯ ಇಲಾಖೆಯ ಶತ ಪ್ರಯತ್ನ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಮಾರ್ಚ್ 01: ಫೆಬ್ರವರಿ 21ರಿಂದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಅರವಳಿಕೆ ತಜ್ಞರು, ಕಾಡು-ಮೇಡು, ಕಾಫಿ ತೋಟದಲ್ಲಿ ಸಂಚಾರ ಮಾಡಿದರೂ ಹುಲಿ ಮಾತ್ರ ಕಣ್ಣಿಗೆ ಬಿದ್ದಿಲ್ಲ. ದಕ್ಷಿಣ ಕೊಡಗಿನ ಟಿ. ಶೆಟ್ಟಿಗೇರಿ ಸಮೀಪದಲ್ಲಿ ಅರಣ್ಯ ಇಲಾಖೆಯ ತಾತ್ಕಾಲಿಕ ಕಚೇರಿಯನ್ನೇ ಆರಂಭಿಸಲಾಗಿದೆ.

ಪ್ರತಿದಿನ 150ಕ್ಕೂ ಅಧಿಕ ಸಿಬ್ಬಂದಿಗಳು ಹುಲಿ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗುತ್ತಿದ್ದಾರೆ. ನಾಗರ ಹೊಳೆ ಅಭಯಾರಣ್ಯದಿಂದ ನಾಡಿಗೆ ಬಂದಿರುವ ಹುಲಿ ಈಗಾಗಲೇ ಎರಡು ಅಮಾಯಕ ಜೀವಗಳನ್ನು ಬಲಿ ಪಡೆದಿದೆ.

ಹುಲಿ ಹಾವಳಿ ತಡೆಯದಿದ್ದರೆ ರೈತರಿಂದ ಕೊಡಗು ಬಂದ್‌ ಎಚ್ಚರಿಕೆ ಹುಲಿ ಹಾವಳಿ ತಡೆಯದಿದ್ದರೆ ರೈತರಿಂದ ಕೊಡಗು ಬಂದ್‌ ಎಚ್ಚರಿಕೆ

ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ಹಿನ್ನಡೆ ಆಗಿರುವುದು ಜನರ ಓಡಾಟ ಮತ್ತು ವರ್ತನೆ ಇಂದ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಒನ್‌ ಇಂಡಿಯಾ ಕನ್ನಡಕ್ಕೆ ತಿಳಿಸಿದರು. ಕೆಲವು ಗ್ರಾಮಸ್ಥರು ರಾತ್ರಿ ಹೊತ್ತಿನಲ್ಲಿ ಆನೆಗಳು ಬಾರದಂತೆ ಬೆಂಕಿ ಹಾಕುವುದು , ಪಟಾಕಿ ಹೊಡೆಯುವುದು ಮಾಡುತ್ತಿದ್ದು ಇದರಿಂದ ಹುಲಿಯು ಬರುತ್ತಿಲ್ಲ ಎಂದು ಹೇಳಿದರು.

ಮಡಿಕೇರಿ; ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ 4ನೇ ದಿನಕ್ಕೆಮಡಿಕೇರಿ; ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ 4ನೇ ದಿನಕ್ಕೆ

ಒಟ್ಟು 8 ತಂಡಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು ಸುತ್ತಮುತ್ತಲಿನ ಅರಣ್ಯ, ಕಾಫಿ ತೋಟದಲ್ಲಿ ಈಗಾಗಲೇ ಎರಡು ಮೂರು ಬಾರಿ ಕೋಂಬಿಂಗ್‌ ಮಾಡಲಾಗಿದೆ. ಬೆಂಗಳೂರಿನ ಪಿಸಿಸಿಎಫ್ ವಿಜಯ್ ಕುಮಾರ್ ಗೋಗಿ ಕಳೆದ ವಾರ ಕ್ಯಾಂಪ್‌ಗೆ ಆಗಮಿಸಿ ಸಿಬ್ಬಂದಿಗಳಿಗೆ, ಅಧಿಕಾರಿಗಳಿಗೆ ಧೈರ್ಯ ತುಂಬಿ ಕಾರ್ಯಾಚರಣೆ ಯಶಸ್ವಿಯಾಗಿಸುವಂತೆ ಸೂಚನೆ ನೀಡಿ ತೆರಳಿದ್ದಾರೆ.

ಚಿರತೆ, ಹುಲಿ, ಆನೆ ದಾಳಿ; ಹೆಚ್ಚಾಗುತ್ತಿದೆ ಮಾನವ, ಪ್ರಾಣಿ ಸಂಘರ್ಷ ಚಿರತೆ, ಹುಲಿ, ಆನೆ ದಾಳಿ; ಹೆಚ್ಚಾಗುತ್ತಿದೆ ಮಾನವ, ಪ್ರಾಣಿ ಸಂಘರ್ಷ

'ರಾಣಾ' ಶ್ವಾನದ ಸಹಕಾರ

'ರಾಣಾ' ಶ್ವಾನದ ಸಹಕಾರ

ಹುಲಿ ಕಾರ್ಯಾಚರಣೆಗೆ ನೆರವಾಗಲು ಬಂಡೀಪುರದಿಂದ ಅರಣ್ಯ ಇಲಾಖೆಯ ಪರಿಣಿತ 'ರಾಣಾ' ಶ್ವಾನವನ್ನು ಕರೆಸಿಕೊಳ್ಳಲಾಗಿದೆ. ಹುಲಿಯ ಜಾಡನ್ನು ಕಂಡುಹಿಡಿಯುವ ವಿಶೇಷ ಪ್ರಯತ್ನ ಕೂಡ ನಡೆಯುತ್ತಿದೆ. ಕಳೆದ ಮೂರು ದಿನಗಳಿಂದ ಹುಲಿಯು ಸುತ್ತಮುತ್ತಲಿನ ರೈತರ ಯಾವುದೇ ಜಾನುವಾರುಗಳ ಮೇಲೆ ದಾಳಿ ನಡೆಸಿದ ವರದಿಗಳು ಬಂದಿಲ್ಲ.

ಹುಲಿ ಅರಣ್ಯಕ್ಕೆ ವಾಪಸ್?

ಹುಲಿ ಅರಣ್ಯಕ್ಕೆ ವಾಪಸ್?

ಹುಲಿ ಕಾರ್ಯಾಚರಣೆ ತಂಡ ಬಹುತೇಕ ಪ್ರದೇಶದಲ್ಲಿ ತನ್ನ ಕಾರ್ಯಾಚರಣೆ ಚುರುಕುಗೊಳಿಸಿದೆ. ಇದರಿಂದಾಗಿ ಹುಲಿ ಅರಣ್ಯ ಸೇರಿರಬಹುದೇ? ಎಂದು ಸಹ ಅಂದಾಜಿಸಲಾಗಿದೆ. ಅಳವಡಿಸಿರುವ ಕ್ಯಾಮರಾಗಳಲ್ಲಿಯೂ ಕೂಡ ಹುಲಿ ಸಂಚಾರದ ಸುಳಿವು ಸೆರೆಯಾಗಿಲ್ಲ. ಪ್ರತಿ ಕ್ಯಾಮರಾಗಳ ದೃಶ್ಯಗಳನ್ನು ಕಂಪ್ಯೂಟರ್ ಮೂಲಕ ಪ್ರತಿದಿನ ವೀಕ್ಷಣೆ ಮಾಡಲಾಗುತ್ತಿದೆ.

ಸಾಕಾನೆಗಳ ಸಹಕಾರ

ಸಾಕಾನೆಗಳ ಸಹಕಾರ

ಹಸುವನ್ನು ತಿಂದು ತೆರಳಿದ ಪ್ರದೇಶದಲ್ಲಿ ಹುಲಿ ಮತ್ತೆ ಬರಬಹುದು ಎಂಬ ನಿರೀಕ್ಷೆ ಇಟ್ಟುಕೊಂಡು ತೆರಳುವ ಕಾರ್ಯಾಚರಣೆ ತಂಡಕ್ಕೆ ನಿರಾಸೆ ಎದುರಾಗುತ್ತಿದೆ. ಊಟ, ನಿದ್ದೆ ಬಿಟ್ಟು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು, ಸಾಕಾನೆಗಳ ಸಹಾಯದಿಂದ ಸತತವಾಗಿ ಕಾರ್ಯಾಚರಣೆ ನಡೆಸಿದರೂ ಫಲಿತಾಂಶ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಸಿಗುತ್ತಿಲ್ಲ.

Recommended Video

ಕೈ ಕೊಟ್ಟ ಕೊರೊನಾ ವ್ಯಾಕ್ಸಿನ್‌ ಪೋರ್ಟಲ್‌..! ಸರ್ಕಾರದ ಅವ್ಯವಸ್ಥೆಗೆ ಹಿರಿಯನಾಗರಿಕರ ಬೇಸರ | Oneindia Kannada
ಹಂದಿ ಬೇಟೆಯಾಡುತ್ತಿದೆ

ಹಂದಿ ಬೇಟೆಯಾಡುತ್ತಿದೆ

ರೈತರು ತಮ್ಮ ಕೊಟ್ಟಿಗೆಯಲ್ಲಿ ಸಾಕಿರುವ ಜಾನುವಾರುಗಳನ್ನು ರಕ್ಷಣೆ ಮಾಡುವ ಸಲುವಾಗಿ ಇಲಾಖೆ ಸಿಬ್ಬಂದಿಗಳ ತಂಡ ಸುತ್ತಮುತ್ತಲಿನ ಎರಡು ಕಿ.ಮೀ. ನಲ್ಲಿರುವ ರೈತರ ಜಾನುವಾರು ಕೊಟ್ಟಿಗೆಯನ್ನು ಕಾವಲು ಕಾಯುತ್ತಿದ್ದಾರೆ. ಈ ಭಾಗದಲ್ಲಿ ಕಾಡು ಹಂದಿಗಳು ಅಧಿಕವಾಗಿರುವ ಹಿನ್ನೆಲೆಯಲ್ಲಿ ಅವುಗಳನ್ನು ಹುಲಿಯು ಬೇಟೆಯಾಡಿ ತಿನ್ನುವ ಮೂಲಕ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿವೆ. ಹಾಗಾಗಿ ಜಾನುವಾರುಗಳ ಬಳಿ ತೆರಳುವುದು ಕಡಿಮೆಯಾಗಿದೆ ಎಂದು ಸಹ ಅಂದಾಜಿಸಲಾಗಿದೆ.

English summary
From February 21, 2021 forest department officials busy in Ponnampet to carry out a tiger capture operation. Tiger which killed two people yet to capture by officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X