ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು ಜಿಲ್ಲೆಯಲ್ಲಿನ ತಾಲೂಕುವಾರು ಮಳೆ ವಿವರ

|
Google Oneindia Kannada News

ಮಡಿಕೇರಿ, ಅ.01: ಕೊಡಗು ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 0.89 ಮಿ.ಮೀ. ಕಳೆದ ವರ್ಷ ಇದೇ ದಿನ 7.33 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 2343.32 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2550.75 ಮಿ.ಮೀ ಮಳೆಯಾಗಿತ್ತು.

ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 1.35 ಮಿ.ಮೀ. ಕಳೆದ ವರ್ಷ ಇದೇ ದಿನ 20.75 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 3330.97 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 3488.02 ಮಿ.ಮೀ. ಮಳೆಯಾಗಿತ್ತು.

ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 1.33 ಮಿ.ಮೀ. ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2121.75 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 2411.80 ಮಿ.ಮೀ. ಮಳೆಯಾಗಿತ್ತು.

ಕರ್ನಾಟಕದ ಮಳೆ ಹಾಗೂ ಜಲಾಶಯ ನೀರಿನ ಮಟ್ಟ ವರದಿಕರ್ನಾಟಕದ ಮಳೆ ಹಾಗೂ ಜಲಾಶಯ ನೀರಿನ ಮಟ್ಟ ವರದಿ

ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 0.00 ಮಿ.ಮೀ. ಕಳೆದ ವರ್ಷ ಇದೇ ದಿನ 1.23 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1577.24 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1752.43 ಮಿ.ಮೀ. ಮಳೆಯಾಗಿತ್ತು.

ಮಳೆ ಮುನ್ಸೂಚನೆ

ಮಳೆ ಮುನ್ಸೂಚನೆ

ಮಳೆ ಮುನ್ಸೂಚನೆ: ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಉತ್ತಮ ಮಳೆ ಹಾಗೂ ಚದುರಿದಂತೆ ಅಲ್ಲಲ್ಲಿ ಅಧಿಕದಿಂದ ಅತ್ಯಧಿಕ ಭಾರಿ ಮಳೆ. ಉತ್ತರ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಗುಡುಗು ಸಹಿತ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮದಿಂದ ಅಧಿಕ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ನೈಸರ್ಗಿಕ ಮತ್ತು ಪ್ರಕೃತಿ ವಿಕೋಪ ಸಂಸ್ಥೆ ಹೇಳಿದೆ.

ಹೋಬಳಿವಾರು ದಾಖಲಾಗಿರುವ ಮಳೆ

ಹೋಬಳಿವಾರು ದಾಖಲಾಗಿರುವ ಮಳೆ

ಕೊಡಗು ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಸಂಪಾಜೆ 2.60, ಭಾಗಮಂಡಲ 2.80, ಅಮ್ಮತ್ತಿ 8, ಮಿ.ಮೀ.ಮಳೆಯಾಗಿದೆ.
ಪ್ರಕೃತಿ ವಿಕೋಪ ಸಂಬಂಧಿತ ಯಾವುದೇ ಸಮಸ್ಯೆಗಳಿಗೆ ತುರ್ತು ಸೇವೆಗೆ ಟೋಲ್ ಫ್ರೀ ಸಂಖ್ಯೆ 24 X7 ಕಂಟ್ರೋಲ್ ರೂ.08272-221077, ವಾಟ್ಸ್‍ಆಪ್ ನಂ.8550001077 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೋರಿದ್ದಾರೆ.

ಹಾರಂಗಿ ಜಲಾಶಯದ ನೀರಿನ ಮಟ್ಟ

ಹಾರಂಗಿ ಜಲಾಶಯದ ನೀರಿನ ಮಟ್ಟ

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2858.81 ಅಡಿಗಳು, ಕಳೆದ ವರ್ಷ ಇದೇ ದಿನ 2856.41 ಅಡಿ. ಹಾರಂಗಿಯಲ್ಲಿ ಬಿದ್ದ ಮಳೆ 0.00 ಮಿ.ಮೀ., ಕಳೆದ ವರ್ಷ ಇದೇ ದಿನ 2.20 ಮಿ.ಮೀ. ಇಂದಿನ ನೀರಿನ ಒಳಹರಿವು 1058 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 558 ಕ್ಯುಸೆಕ್. ಇಂದಿನ ನೀರಿನ ಹೊರ ಹರಿವು ನದಿಗೆ 800, ನಾಲೆಗೆ 500. ಕಳೆದ ವರ್ಷ ಇದೇ ದಿನ ನದಿಗೆ 30, ನಾಲೆಗೆ 1450 ಕ್ಯುಸೆಕ್.

Recommended Video

ಮನೀಶಾ ಮನೆಗೆ ಕಾಂಗ್ರೆಸ್ ಅವಕಾಶ ನೀಡದ ಯೋಗಿ ಪೊಲೀಸ್ | Oneindia Kannada
ಅ.3 ರಂದು ವಿದ್ಯುತ್ ವ್ಯತ್ಯಯ

ಅ.3 ರಂದು ವಿದ್ಯುತ್ ವ್ಯತ್ಯಯ

ವಿರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಬಿ.ಶೆಟ್ಟಿಗೇರಿ, ವಿರಾಜಪೇಟೆ, ಬೇತ್ರಿ ಪಾಲಂಗಾಲ, ಕ್ಲಬ್ ಮಹೇಂದ್ರ ಮತ್ತು ಹೆಗ್ಗಳ ಫೀಡರ್‍ನಲ್ಲಿ ವಿದ್ಯುತ್ ಜಾಲದ ಸಮಗ್ರ ಅಭಿವೃದ್ದಿ ಯೋಜನೆ ಹಾಗೂ ತುರ್ತು ನಿರ್ವಹಣೆ ಕಾಮಗಾರಿ ನಡೆಸಬೇಕಿದ್ದು, ಅಕ್ಟೋಬರ್, 3 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.

ಬಿಟ್ಟಂಗಾಲ, ಬಿ.ಶೆಟ್ಟಿಗೇರಿ, ವಿ.ಬಾಡಗ, ಕಾಕೋಟುಪೆರಂಬು, ಮಾರೂರು, ಬೇತ್ರಿ, ಕಡಂಗಮರೂರು, ಮೈತಾಡಿ, ಪಾಲಂಗಾಲ, ಕೆದಮುಳ್ಳೂರು, ಮಹೇಂದ್ರ, ಆರ್ಜಿ, ಹೆಗ್ಗಳ, ಪೆರಂಬಾಡಿ ಹಾಗೂ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ಈ ಮೇಲೆ ತಿಳಿಸಿರುವ ಸಮಯದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

English summary
Heavy rainfall recorded in Kodagu district, IMD and KSNMDC has issued yellow alert across the district. Here are help line number and the water level of Harangi dam in the district as on October 01.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X