ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಧಾನಿ ಪರೀಕ್ಷಾ ಪೇ ಚರ್ಚಾ; ಕೊಡಗಿನ ಪದ್ಮಪ್ರಿಯಾಗೆ ಅವಕಾಶ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಮಾರ್ಚ್ 30; ಪ್ರತಿ ವರ್ಷದಂತೆ ಈ ಬಾರಿಯೂ ಪ್ರಧಾನ ಮಂತ್ರಿ ನರೇಂದ್ರಮೋದಿ ಏಪ್ರಿಲ್ 1ರಂದು ಬೆಳಗ್ಗೆ 11 ಗಂಟೆಗೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ನಡೆಸಲಿದ್ದಾರೆ. ಇದು 5ನೇ ಆವೃತಿಯಾಗಿದ್ದು, ಈ ಕಾರ್ಯಕ್ರಮ ಆನ್‌ಲೈನ್/ ವರ್ಚುವಲ್ ಮೂಲಕ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಲಿದ್ದು, ಕೊಡಗಿನ ಕೇಂದ್ರೀಯ ವಿದ್ಯಾಲಯದ ಪದ್ಮಪ್ರಿಯಾ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿದ್ಧಾರೆ. ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮವು ಬಹು ನಿರೀಕ್ಷಿತ ವಾರ್ಷಿಕ ಕಾರ್ಯಕ್ರಮವಾಗಿದ್ದು, ನರೇಂದ್ರ ಮೋದಿ ಪರೀಕ್ಷೆ ಸಮಯದಲ್ಲಿನ ಒತ್ತಡಕ್ಕೆ ಸಂಬಂಧಿಸಿದಂತೆ ನೇರ ಪ್ರಸಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸತ್ತಾರೆ.

ಪ್ರಧಾನಿ ಮೋದಿಯ 'ಪರೀಕ್ಷಾ ಪೇ ಚರ್ಚಾ' ಸಂವಾದಕ್ಕೆ ಉಡುಪಿಯ ಗ್ರಾಮೀಣ ಪ್ರದೇಶದ ಅನುಷಾ ಆಯ್ಕೆಪ್ರಧಾನಿ ಮೋದಿಯ 'ಪರೀಕ್ಷಾ ಪೇ ಚರ್ಚಾ' ಸಂವಾದಕ್ಕೆ ಉಡುಪಿಯ ಗ್ರಾಮೀಣ ಪ್ರದೇಶದ ಅನುಷಾ ಆಯ್ಕೆ

ಈ ಕಾರ್ಯಕ್ರಮ ದೇಶದಾದ್ಯಂತ ದೂರದರ್ಶನ, ರೇಡಿಯೋ, ಟಿವಿ ಚಾನಲ್‌ಗಳು, ಯುಟ್ಯೂಬ್ ಸೇರಿದಂತೆ ಡಿಜಿಟಲ್ ಚಾನಲ್‌ಗಳಲ್ಲಿ ಪ್ರಸಾರವಾಗಲಿದೆ. ಮಕ್ಕಳಲ್ಲಿ ಪರೀಕ್ಷೆ ಹಾಗೂ ಶೈಕ್ಷಣಿಕ ಚಟುವಟಿಕೆ ಸಂಬಂಧಿಸಿದಂತೆ ಹುರಿದುಂಬಿಸುವಲ್ಲಿ ಮತ್ತು ಪ್ರೋತ್ಸಾಹಿಸುವಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗಿದೆ.

KCET 2022 Exam Dates: ಸಿಇಟಿ ಪ್ರವೇಶ ಪರೀಕ್ಷೆ ದಿನಾಂಕ ಘೋಷಣೆ; ಇಲ್ಲಿದೆ ವೇಳಾಪಟ್ಟಿKCET 2022 Exam Dates: ಸಿಇಟಿ ಪ್ರವೇಶ ಪರೀಕ್ಷೆ ದಿನಾಂಕ ಘೋಷಣೆ; ಇಲ್ಲಿದೆ ವೇಳಾಪಟ್ಟಿ

Kodagu Student Padma Priya Elected For Pariksha Pe Charcha Event

ಆನ್‌ಲೈನ್ ಮೂಲಕ ನಡೆಯುವ ಪರೀಕ್ಷಾ ಪೇ ಚರ್ಚಾ ಸಂವಾದ ಕಾರ್ಯಕ್ರಮವನ್ನು ವೀಕ್ಷಿಸಲು ಅನುಕೂಲವಾಗುವಂತೆ ಮಡಿಕೇರಿಯ ಕೇಂದ್ರೀಯ ವಿದ್ಯಾಲಯ ಮತ್ತು ಗಾಳಿಬೀಡುವಿನ ನವೋದಯ ವಿದ್ಯಾಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಸೋಮವಾರದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ; ಹಿಜಾಬ್‌ಗೆ ಅವಕಾಶವಿಲ್ಲ ಸೋಮವಾರದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ; ಹಿಜಾಬ್‌ಗೆ ಅವಕಾಶವಿಲ್ಲ

ಕಾರ್ಯಕ್ರಮ ಸದುಪಯೋಗಿಸಿಕೊಳ್ಳಿ; ಈ ಕಾರ್ಯಕ್ರಮದ ಕುರಿತಂತೆ ಮಾಹಿತಿ ನೀಡಿರುವ ಕೊಡಗು ಜಿಲ್ಲಾಧಿಕಾರಿ ಡಾ. ಬಿ. ಸಿ. ಸತೀಶ, "ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದ ಸದುಪಯೋಗವನ್ನು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಪಡೆದುಕೊಳ್ಳುವಂತೆ ತಿಳಿಸಿದ್ದು, ಈ ಕಾರ್ಯಕ್ರಮವು ಬಹು ನಿರೀಕ್ಷಿತ ವಾರ್ಷಿಕ ಕಾರ್ಯಕ್ರಮವಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಪರೀಕ್ಷೆಯ ಒತ್ತಡ ಮತ್ತು ಸಂಬಂಧಿಸಿದಂತೆ ನೇರ ಪ್ರಸಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಲಿದ್ದಾರೆ" ಎಂದು ತಿಳಿಸಿದ್ದಾರೆ.

"ಪರೀಕ್ಷಾ ಪೇ ಚರ್ಚಾ, ಸಾರ್ವಜನಿಕ ಆಂದೋಲನವಾಗಿದ್ದು ದೇಶವು ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಹೊರಬರುತ್ತಿರುವ ಹಿನ್ನೆಲೆಯಲ್ಲಿ ಮತ್ತು ಪರೀಕ್ಷೆಗಳು ಆಫ್‌ಲೈನ್ ಮೋಡ್‌ಗೆ ಹಿಂತಿರುಗುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷದ ಸಂವಾದ ಕಾರ್ಯಕ್ರಮವು ಪ್ರಾಮುಖ್ಯತೆ ಪಡೆದಿದ್ದು, ರಾಜ್ಯ ರಾಜ್ಯಪಾಲರ ಉಪಸ್ಥಿತಿಯಲ್ಲಿ ರಾಜಭವನಕ್ಕೆ ಭೇಟಿ ನೀಡಿ ವೀಕ್ಷಿಸಲು ದೇಶಾದ್ಯಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಎಂದು ತಿಳಿಸಿದ್ದರು. ಅದರಂತೆ ದೇಶಾದ್ಯಂತ ರಾಜ್ಯ ಸರ್ಕಾರಗಳು ವಿದ್ಯಾರ್ಥಿಗಳ, ಶಿಕ್ಷಕರ ಮತ್ತು ಪೋಷಕರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತಿರುವುದಾಗಿ ತಿಳಿಸಿದರಲ್ಲದೆ, ಈ ಕಾರ್ಯಕ್ರಮವನ್ನು ಸಾಮೂಹಿಕ ಚಳುವಳಿಯಾಗಿಸಿ ವಿದ್ಯಾರ್ಥಿಗಳಿಗೆ ಒತ್ತಡ-ಮುಕ್ತ ಪರೀಕ್ಷೆಗಳನ್ನು ಖಾತ್ರಿಪಡಿಸುವುದಕ್ಕಾಗಿ ಮಾಧ್ಯಮಗಳು ಬೆಂಬಲವನ್ನೂ ನೀಡಬೇಕು" ಎಂದು ಮನವಿ ಮಾಡಿದರು.

Kodagu Student Padma Priya Elected For Pariksha Pe Charcha Event

ಪರೀಕ್ಷಾ ಪೇ ಚರ್ಚಾವು ಒಂದು ದೊಡ್ಡ ಆಂದೋಲನವಾಗಿದ್ದು, ಎಕ್ಸಾಮ್ ವಾರಿಯರ್ಸ್ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಯುವಕರಿಗೆ ಒತ್ತಡ ರಹಿತ ವಾತಾವರಣ ಸೃಷ್ಟಿಸಬೇಕೆಂದು ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಕರೆ ನೀಡಿದ್ದಾರೆ. ನರೇಂದ್ರ ಮೋದಿ ನೇತೃತ್ವದಲ್ಲಿ ವಿದ್ಯಾರ್ಥಿಗಳನ್ನು, ಪೋಷಕರನ್ನು, ಶಿಕ್ಷಕರನ್ನು ಮತ್ತು ಸಮಾಜವನ್ನು ಒಟ್ಟು ಗೂಡಿಸಲು ಮತ್ತು ವಿಶಿಷ್ಟ ಪ್ರತ್ಯೇಕತೆಯ ಪರಿಸರವನ್ನು ಬೆಳೆಸುವುದರೊಂದಿಗೆ ಪ್ರತಿಯೊಂದು ಮಗುವನ್ನು ವ್ಯಕ್ತಿತ್ವವನ್ನು ಆಚರಿಸಲು, ಪ್ರೋತ್ಸಾಹಿಸಲು, ಮತ್ತು ಸಂಪೂರ್ಣವಾಗಿ ವ್ಯಕ್ತಪಡಿಸಲು ಅವಕಾಶ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಎಕ್ಷಾಮ್ ವಾರಿಯರ್ಸ್ ಪುಸ್ತಕ ವಿತರಣೆ; ಪರೀಕ್ಷಾ ಪೇ ಚರ್ಚಾ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಗೆ ಪ್ರಶ್ನೆಗಳನ್ನು ಕೇಳಲು, ವಿದ್ಯಾರ್ಥಿಗಳ, ಶಿಕ್ಷಕರ ಮತ್ತು ಪೋಷಕರ ಆನ್‌ಲೈನ್ ಸೃಜನಶೀಲ ಬರವಣಿಗೆ ಆಧಾರದ ಮೇಲೆ, ಕಿರುಪಟ್ಟಿ ಮಾಡಲಾಗಿದೆ. ಸ್ಪರ್ಧೆಯನ್ನು 2021 ರ ಡಿಸೆಂಬರ್ 28ರಿಂದ 2022ರ ಫೆಬ್ರವರಿ 3 ರವರೆಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

15.7 ಲಕ್ಷಕ್ಕೂ ಅಧಿಕ ಸ್ಪರ್ಧಾರ್ಥಿಗಳು ಸೃಜನಾತ್ಮಕ ಬರವಣಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅವರನ್ನು ಸ್ಪರ್ಧೆಗಳ ಮೂಲಕ ಆಯ್ಕೆ ಮಾಡಲಾಗಿತ್ತು. ಸ್ಪರ್ಧೆಗಳ ಮೂಲಕ ಆಯ್ಕೆಯಾಗಿ ಭಾಗವಹಿಸಿದವರಿಗೆ 'ಎ' ಶ್ಲಾಘನೆಯ ಪ್ರಮಾಣಪತ್ರ ಮತ್ತು ವಿಶೇಷ ಪರೀಕ್ಷಾ ಪೇ ಚರ್ಚಾ ಕಿಟ್‌ನಲ್ಲಿ ಪ್ರಧಾನಿ ಮೋದಿ ಅವರು ಬರೆದಿರುವ ಎಕ್ಷಾಮ್ ವಾರಿಯರ್ಸ್ ಪುಸ್ತಕವನ್ನು ನೀಡಲಾಗುತ್ತದೆ.

Recommended Video

ಇವತ್ತಿನ ರೋಚಕ ಪಂದ್ಯ RCB vs KKR ನಡುವೆ!! | Oneindia Kannada

English summary
Kodagu district student Padma Priya elected for Pariksha pe charcha 2022. Pariksha Pe Charcha event will be held on April 1st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X