ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನರಲ್ ಕೆ. ಎಸ್. ತಿಮ್ಮಯ್ಯ ಮ್ಯೂಸಿಯಂ ವಿಶೇಷತೆಗಳು

By Coovercolly Indresh
|
Google Oneindia Kannada News

ಮಡಿಕೇರಿ, ಫೆಬ್ರವರಿ 5; ಶನಿವಾರ ರಾಷ್ಟ್ರದ ಪ್ರಥಮ ಪ್ರಜೆ ರಾಮನಾಥ್ ಕೋವಿಂದ್ ಅವರು ದೇಶದ ವೀರ ಸೇನಾನಿ ಆಗಿದ್ದ ಜನರಲ್ ಕೆ. ಎಸ್. ತಿಮ್ಮಯ್ಯ ಅವರ ಸನ್ನಿಸೈಡ್ ಮ್ಯೂಸಿಯಂ ಉದ್ಘಾಟಿಸುತ್ತಿದ್ದಾರೆ. ಕೊಡಗಿನ ಪ್ರಪ್ರಥಮ ಸೇನಾ ಮ್ಯೂಸಿಯಂ ಆಗಿರುವ ಇಲ್ಲಿ ಯುದ್ಧದ ಟ್ಯಾಂಕರ್, ಸೂಪರ್ ಸಾನಿಕ್ ಯುದ್ಧ ವಿಮಾನ ಸೇರಿದಂತೆ ಹಲವು ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಈ ಮ್ಯೂಸಿಯಂನ ಕನಸು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂನದ್ದಾಗಿದೆ. ಈ ಫೋರಂ ಸದಸ್ಯರು ಸತತವಾಗಿ ಕಳೆದ ಒಂದು ದಶಕದಿಂದ ಶ್ರಮ ಪಟ್ಟಿದ್ದು ಉದ್ಘಾಟನೆಗೂ ಮಾನ್ಯ ರಾಷ್ಟ್ರಪತಿಗಳೇ ಆಗಮಿಸಬೇಕೆಂದು ಕನಸು ಕಂಡಿದ್ದು ಅದನ್ನು ಸಾಕಾರಗೊಳಿಸಿಸುವಲ್ಲೂ ಯಶಸ್ವಿ ಆಗಿದ್ದಾರೆ.

ರಾಷ್ಟ್ರಪತಿಗಳ ಕೊಡಗು ಭೇಟಿ; ಬಿಗಿ ಬಂದೋಬಸ್ತ್ ರಾಷ್ಟ್ರಪತಿಗಳ ಕೊಡಗು ಭೇಟಿ; ಬಿಗಿ ಬಂದೋಬಸ್ತ್

ಜನರಲ್ ತಿಮ್ಮಯ್ಯ 1906 ಮಾರ್ಚ್, 31ರಂದು ಸನ್ನಿಸೈಡ್ ಎಂಬ ಬಂಗಲೆಯಲ್ಲಿ ಹುಟ್ಟಿ ಬೆಳೆದ ನಿವಾಸವನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾರ್ಪಡಿಸಲಾಗಿದೆ. ಈ ಕಟ್ಟಡದಲ್ಲಿ ಮೊದಲು ಪ್ರಾದೇಶಿಕ ಸಾರಿಗೆ ಇಲಾಖೆ ಕಾರ್ಯ ನಿರ್ವಹಿಸುತಿತ್ತು. ನಂತರ ಮ್ಯೂಸಿಯಂ ನಿರ್ಮಾಣಮಾಡಲೆಂದೇ ಕಚೇರಿಯನ್ನು ತೆರವುಗೊಳಿಸಿ, ಸುಂದರ ಮ್ಯೂಸಿಯಂ ನಿರ್ಮಿಸಲಾಗಿದೆ.

ಕೊಡಗು ಜಿಲ್ಲಾಧಿಕಾರಿಯಾಗಿ ಚಾರುಲತ ಸೋಮಲ್ ಅಧಿಕಾರ ಸ್ವೀಕಾರಕೊಡಗು ಜಿಲ್ಲಾಧಿಕಾರಿಯಾಗಿ ಚಾರುಲತ ಸೋಮಲ್ ಅಧಿಕಾರ ಸ್ವೀಕಾರ

ಯುದ್ಧ ವಿಮಾನ ಗಮನ ಸೆಳೆಯುತ್ತದೆ

ಯುದ್ಧ ವಿಮಾನ ಗಮನ ಸೆಳೆಯುತ್ತದೆ

ವಸ್ತು ಸಂಗ್ರಹಾಲಯ ಆವರಣಕ್ಕೆ ಭೇಟಿ ನೀಡುತ್ತಿದ್ದಂತೆ ಯುದ್ಧ ಟ್ಯಾಂಕ್ ಮತ್ತು ಯುದ್ಧ ವಿಮಾನ ಗಮನ ಸೆಳೆಯುತ್ತದೆ. ಸಮೀಪದಲ್ಲೇ ಯುದ್ಧ ಸ್ಮಾರಕ ಸಹ ನಿರ್ಮಾಣ ಮಾಡಲಾಗಿದೆ. ವಸ್ತು ಸಂಗ್ರಹಾಲಯದ ಒಳಗೆ ಹೋದಾಗ ಜನರಲ್ ತಿಮ್ಮಯ್ಯ ಅವರ ಬಾಲ್ಯ, ಸೇನಾ ಕ್ಷೇತ್ರದಲ್ಲಿನ ಸೇವೆ ಸಲ್ಲಿಸಿದ ವಿವಿಧ ಛಾಯಾಚಿತ್ರಗಳು ಆಕರ್ಷಿಸುತ್ತವೆ. ಜನರಲ್ ತಿಮ್ಮಯ್ಯ ಅವರ ವ್ಯಕ್ತಿ ಚರಿತ್ರೆ, ಭಾರತೀಯ ಸೇನೆಯ ಇತಿಹಾಸವನ್ನು ವಸ್ತು ಸಂಗ್ರಹಾಲಯದಲ್ಲಿ ನೋಡಬಹುದಾಗಿದೆ. ತಿಮ್ಮಯ್ಯ ಅವರು ಬಳಸುತಿದ್ದ ವಸ್ತುಗಳು, ಯೂನಿಫಾರ್ಮ್ ಕೂಡ ಇಲ್ಲಿದೆ. ವಸ್ತು ಸಂಗ್ರಹಾಲಯದ ಪ್ರತಿ ಕೊಠಡಿಯು ಸೈನಿಕರ ಶೌರ್ಯವನ್ನು ಹೇಳುತ್ತದೆ.

ಅದ್ಭುತವಾಗಿ ವಿನ್ಯಾಸಗೊಳಿಸಲಾಗಿದೆ

ಅದ್ಭುತವಾಗಿ ವಿನ್ಯಾಸಗೊಳಿಸಲಾಗಿದೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ಜನರಲ್ ತಿಮ್ಮಯ್ಯ ಅವರ ಸ್ಮಾರಕ ಭವನವನ್ನು ಅದ್ಭುತವಾಗಿ ವಿನ್ಯಾಸಗೊಳಿಸಲಾಗಿದ್ದು, ಭಾರತೀಯ ಸೇನಾಧಿಕಾರಿಯಾಗಿ ನಡೆದು ಬಂದ ದಾರಿಯ ಇತಿಹಾಸ ಸಾರುವುದರ ಜೊತೆಗೆ ಭಾರತೀಯ ಸೇನಾ ಪರಂಪರೆಯ ಮಾಹಿತಿ ನೀಡುವ ಮಹತ್ವದ ಸಂದೇಶ ವಸ್ತು ಸಂಗ್ರಹಾಲಯದಲ್ಲಿದೆ.

ಬಂದೂಕುಗಳು ಗಮನ ಸೆಳೆಯಲಿವೆ

ಬಂದೂಕುಗಳು ಗಮನ ಸೆಳೆಯಲಿವೆ

ವಸ್ತು ಸಂಗ್ರಹಾಲಯದಲ್ಲಿ ಯುದ್ಧದಲ್ಲಿ ಬಳಸಲಾಗುತ್ತಿದ್ದ ಬಂದೂಕುಗಳು ಗಮನ ಸೆಳೆಯುತ್ತವೆ ಇವು ಕೊಡಗಿನ ಸೇನಾ ಪರಂಪರೆ ಹಾಗೂ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಭಾರತೀಯ ಸೈನಿಕರ ಶೌರ್ಯವನ್ನು ಒಳಗೊಂಡ ಕಲಾಕೃತಿಗಳು ಮ್ಯೂಸಿಯಂನ ಸಂಗ್ರಹದಲ್ಲಿ ಸೇರಿವೆ. ತಿಮ್ಮಯ್ಯ ಅವರ ಬಾಲ್ಯದ ಚಿತ್ರಗಳು, ಕಲಾಕೃತಿ ಗಮನ ಸೆಳೆಯುತ್ತವೆ. ಜನರಲ್ ತಿಮ್ಮಯ್ಯ ಅವರು ಬಳಸಿದ ಲೇಖನಿಗಳು, ಮಿಲಿಟರಿ ಸಮವಸ್ತ್ರಗಳು, ಪುಸ್ತಕಗಳನ್ನು ಪ್ರದರ್ಶನಕ್ಕಿರಿಸಲಾಗಿದೆ.

ಪ್ರವಾಸಿಗರಿಗೆ ಮಾಹಿತಿ

ಪ್ರವಾಸಿಗರಿಗೆ ಮಾಹಿತಿ

ಸೈನಿಕರು ಬಳಸುವ 24ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳು, 50ರಿಂದ 60 ವರ್ಷಗಳ ಇತಿಹಾಸ ಇರುವ ಲೈಟ್ ಮೆಷಿನ್ ಗನ್, ಮಧ್ಯಮ ಮೆಷಿನ್ ಗನ್ ಮತ್ತು ಸೆಲ್ಫ್ ಲೋಡಿಂಗ್ ರೈಫಲ್ಸ್, 7.62, .38 ರೈಫಲ್ ಮತ್ತು 303 ಬೋರ್ಡ್ ರೈಫಲ್‌ಗಳು, ರಾಕೆಟ್ ಲಾಂಚರ್‌ಗಳು, 32 ಎಂಎಂ ರೈಫಲ್ ಮತ್ತು 38 ಎಂಎಂ ರೈಫಲ್‌ಗಳ ಸಹಿತ ಹತ್ತು ಹಲವು ವಸ್ತುಗಳು ಸಂಗ್ರಹಾಲಯದಲ್ಲಿ ಸ್ಥಾನ ಪಡೆದಿವೆ. ಅಲ್ಲದೆ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಕುರಿತಾದ ಮಾಹಿತಿಗಳೂ ಇಲ್ಲಿವೆ.

Recommended Video

ಏರೋ ಇಂಡಿಯಾ 2021 ಕಾರ್ಯಕ್ರಮಕ್ಕೆ ಇಂದು ತೆರೆ | Oneindia Kannada
ಭಾನುವಾರದಿಂದ ಮುಕ್ತ

ಭಾನುವಾರದಿಂದ ಮುಕ್ತ

ಮಡಿಕೇರಿ -ಮೈಸೂರು ಹೆದ್ದಾರಿ ಬದಿಯಲ್ಲೇ ಇರುವ ಈ ವಸ್ತು ಸಂಗ್ರಹಾಲಯದ ದೊಡ್ಡ ಗಾತ್ರದ ಚಿನ್ನದ ಬಣ್ಣದ ಟೈಟಾನಿಯಂ ಅಕ್ಷರಗಳು ನೋಡುಗರನ್ನು ಆಕರ್ಷಿಸುತ್ತಿವೆ. ಭಾನುವಾರದಿಂದ ಈ ಮ್ಯೂಸಿಯಂ ಸಾರ್ವಜನಿಕರಿಗೆ ಮುಕ್ತವಾಗಲಿದೆ.

English summary
President of India Ram Nath Kovind to inaugurate General Thimayya memorial museum in Madikeri, Kodagu on Saturday, February 6, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X