ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು ಪ್ರವಾಹ : 35 ಸಂತ್ರಸ್ತರಿಗೆ ಮನೆಗಳ ಹಂಚಿಕೆ

|
Google Oneindia Kannada News

ಮಡಿಕೇರಿ, ಮೇ 16 : ಕೊಡಗು ಜಿಲ್ಲೆಯಲ್ಲಿ ಮಳೆ ಮತ್ತು ಭೂ ಕುಸಿತದಿಂದ ಮನೆ ಕಳೆದುಕೊಂಡ 35 ಸಂತ್ರಸ್ತರಿಗೆ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಜಿಲ್ಲಾಡಳಿತ ಮನೆ ಪಡೆದುಕೊಂಡ ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಿದೆ.

ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ ಕರ್ಣಂಗೇರಿ ಗ್ರಾಮದ ಸರ್ವೆ ನಂ 178/1ರಲ್ಲಿ 4.80 ಎಕರೆ ಜಾಗದಲ್ಲಿ ನಿರ್ಮಿಸಿದ್ದ ಮನೆಗಳನ್ನು ಹಂಚಲಾಗಿದೆ. ಗ್ರಾಮದಲ್ಲಿಯೇ ನಮಗೆ ಮನೆಗಳು ಬೇಕು ಎಂದು ಬೇಡಿಕೆ ಇಟ್ಟಿದ್ದ ಸಂತ್ರಸ್ತರಿಗೆ ಮನೆ ಹಂಚಿಕೆ ಮಾಡಲಾಗಿದೆ.

ಮತ್ತೆ ಬಂತು ಮಳೆಗಾಲ : ಕೊಡಗು ನಿರಾಶ್ರಿತರಿಗೆ ಮನೆ ಸಿಗುವುದೇ?ಮತ್ತೆ ಬಂತು ಮಳೆಗಾಲ : ಕೊಡಗು ನಿರಾಶ್ರಿತರಿಗೆ ಮನೆ ಸಿಗುವುದೇ?

ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಅನುಮೋದಿತ ಬಡಾವಣೆ ನಕ್ಷೆಯಂತೆ 35 ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಕರ್ಣಂಗೇರಿ ಗ್ರಾಮದಲ್ಲಿ ಮನೆ ಬೇಕು ಎಂದು 106 ಅರ್ಜಿಗಳು ಸಲ್ಲಿಕೆಯಾಗಿದ್ದವು' ಎಂದು ಹೇಳಿದ್ದಾರೆ.

ಚಿತ್ರಗಳು : ಕೊಡಗು ಸಂತ್ರಸ್ತರಿಗೆ ಕಟ್ಟುತ್ತಿರುವ ಮನೆಗಳು ಹೇಗಿವೆ?ಚಿತ್ರಗಳು : ಕೊಡಗು ಸಂತ್ರಸ್ತರಿಗೆ ಕಟ್ಟುತ್ತಿರುವ ಮನೆಗಳು ಹೇಗಿವೆ?

house

ಸಂತ್ರಸ್ತರ ಮೊದಲ ಪಟ್ಟಿಯಲ್ಲಿ ಪೂರ್ಣ ಹಾಗೂ ತೀವ್ರ ಹಾನಿಗೊಳಗಾದ ನಿರಾಶ್ರಿತರಿಗೆ ಸರ್ಕಾರದ ವತಿಯಿಂದ ನಿರ್ಮಿಸಲಾದ ಮನೆ ಹಂಚಿಕೆ ಮಾಡಲಾಗಿದೆ. ಕರ್ಣಂಗೇರಿ ಗ್ರಾಮದಲ್ಲಿ ಮೂವರು ಮನೆ ಕಳೆದುಕೊಂಡಿದ್ದು, ಅವರಿಗೆ ಅಲ್ಲಿಯೇ ಮನೆ ನೀಡಲಾಗಿದೆ.

ಮಳೆಗಾಲ ಆರಂಭ : ಕೊಡಗಿನಲ್ಲಿ ತೆಗೆದುಕೊಂಡ ಕ್ರಮಗಳುಮಳೆಗಾಲ ಆರಂಭ : ಕೊಡಗಿನಲ್ಲಿ ತೆಗೆದುಕೊಂಡ ಕ್ರಮಗಳು

ಮಕ್ಕಂದೂರು ಗ್ರಾಮದ ಉದಯಗಿರಿ ಭಾಗದಲ್ಲಿ ಬರುವ ಸಂತ್ರಸ್ಥರಿಗೆ ಮನೆ ನಿರ್ಮಾಣ ಮಾಡಲಾಗುತ್ತಿರುವ ಸ್ಥಳಕ್ಕೆ ಕೇವಲ 2 ಕಿ.ಮೀ.ದೂರವಿದೆ. ಆದ್ದರಿಂದ ಅಲ್ಲಿಯ 16 ಸಂತ್ರಸ್ತರಿಗೂ ಅಲ್ಲಿಯೇ ಮನೆಗಳನ್ನು ಹಂಚಿಕೆ ಮಾಡಲಾಗಿದೆ.

2018ರ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಸುರಿದ ಮಳೆಗೆ ಗುಡ್ಡ ಕುಸಿದು 840 ಕುಟುಂಬಗಳು ಮನೆ ಕಳೆದುಕೊಂಡಿದ್ದವು. 840 ಕುಟುಂಬಗಳ ಪೈಕಿ 770 ಕುಟುಂಬಗಳಿಗೆ ತುರ್ತಾಗಿ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

English summary
Kodagu district administration allotted house for 35 family who lost house in rain and landslide in 2018. House built by Rajiv Gandhi Vasati Nigama in Karngeri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X