ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನ ಈ ಯುವತಿ ಫಿಲಿಪ್ಪೀನ್ಸ್ ನಲ್ಲಿ ಪೈಲಟ್ ಆದ ಕಥೆ

By Coovercolly Indresh
|
Google Oneindia Kannada News

ಮಡಿಕೇರಿ, ಮಾರ್ಚ್ 11: ವಿಮಾನ ಯಾನದಲ್ಲಿ ಪೈಲಟ್ ಅಧಿಕಾರಿಯಾಗಿ ಕಳೆದ 4 ವರ್ಷಗಳಿಂದ ಕೊಡಗಿನ ಯುವತಿಯೊಬ್ಬರು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿರಾಜಪೇಟೆ ತಾಲೂಕು ಹರಿಹರ ಗ್ರಾಮದ ಚಿಂದಮಾಡ ಉತ್ತಯ್ಯ ಅವರ ಪುತ್ರಿ, 32 ವಯಸ್ಸಿನ ಪೊನ್ನಮ್ಮ ಫಿಲಿಪ್ಪೀನ್ಸ್ ನಲ್ಲಿ ಎ.320 ಫಸ್ಟ್ ಆಫೀಸರ್ (ಪೈಲಟ್) ಆಗಿ ಪೆಸಿಫಿಕ್ ಏರ್ ಅಂತರರಾಷ್ಟ್ರೀಯ ಏರ್ ಲೈನ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Recommended Video

ಸಂಬಳ ಎಷ್ಟು ಅಂತಾ ಗೊತ್ತಾದ್ರೆ ಶಾಕ್ ಆಗೋದು ಗ್ಯಾರೆಂಟಿ! | Salary | Train Driver | Oneindia kannada

ಪೊನ್ನಮ್ಮ ಅವರು ಪೈಲಟ್ ಆಗುವುದಕ್ಕೂ ಮುನ್ನ 4 ವರ್ಷಗಳ ಕಾಲ ವಿಮಾನ ಯಾನ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದರು. ಈ ಹಿಂದೆ ಇವರ ಕುಟುಂಬ ಆರ್ಥಿಕವಾಗಿ ದುಸ್ಥಿತಿಯಲ್ಲಿದ್ದರೂ ಪೋಷಕರ ಪರಿಶ್ರಮ, ಪೊನ್ನಮ್ಮ ಅವರ ಛಲದಿಂದಾಗಿ ಈ ಸಾಧನೆ ಸಾಧ್ಯವಾಗಿದೆ.

 ಚಿಗುರೊಡೆದ

ಚಿಗುರೊಡೆದ "ಪೈಲಟ್" ಬಯಕೆ

1987ರಲ್ಲಿಯೇ ಪೊನ್ನಮ್ಮ ಅವರ ಕುಟುಂಬ ಕೊಡಗು ಬಿಟ್ಟು ಬೆಂಗಳೂರು ಸೇರಿತ್ತು. ಉತ್ತಯ್ಯ ಅವರು ವಿಮಾನ ನಿಲ್ದಾಣಕ್ಕೆ ತಮ್ಮ ಆರು ವರ್ಷದ ಮಗಳನ್ನು ಆಗಾಗ್ಗೆ ಕರೆದೊಯ್ಯುತ್ತಿದ್ದರು. ಆಗ ವಿಮಾನ ಹಾರಾಟವನ್ನು ನೋಡಿ ಪೊನ್ನಮ್ಮ ಅತ್ಯಂತ ಹರ್ಷ ಪಡುತ್ತಿದ್ದುದನ್ನು ಕಂಡ ಉತ್ತಯ್ಯ ಅವರಲ್ಲಿ ಆಕೆಯನ್ನು ಪೈಲಟ್ ಮಾಡಬೇಕೆಂಬ ಬಯಕೆ ಮೂಡಿತು. ಹೀಗಾಗಿ ಪೊನ್ನಮ್ಮ ಬಿಷಪ್ ಕಾಟನ್ ಕಾಲೇಜಿನಲ್ಲಿ ದ್ವಿತೀಯ ಬಿಎಸ್ಸಿ ಕಡಿತಗೊಳಿಸಿ ವಿಮಾನ ಯಾನ ತರಬೇತಿಗೆ ಸೇರಿಕೊಂಡರು. ಭಾರತೀಯ ವಿಮಾನ ಯಾನದಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ಪೈಲಟ್ ಹುದ್ದೆ ಗಳಿಸಲು ಸಾಧ್ಯವಾಗಲಿಲ್ಲ.

ಶಿವಾಂಗಿ-ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಪೈಲಟ್ಶಿವಾಂಗಿ-ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಪೈಲಟ್

 ಭಾರತದಲ್ಲಿ ಸಾಧ್ಯವಾಗದ್ದು ವಿದೇಶದಲ್ಲಿ ಆಯಿತು

ಭಾರತದಲ್ಲಿ ಸಾಧ್ಯವಾಗದ್ದು ವಿದೇಶದಲ್ಲಿ ಆಯಿತು

ಕೊನೆಗೆ ಪೊನ್ನಮ್ಮ ವಿಶೇಷ ಪ್ರಯತ್ನ ನಡೆಸಿ ಫಿಲಿಪ್ಪೀನ್ಸ್ ಗೆ ತೆರಳಿ ಅಲ್ಲಿ 4 ವರ್ಷದ ತರಬೇತಿ ಬಳಿಕ ಪೈಲಟ್ ಅಧಿಕಾರಿಯಾಗಿ ಬಡ್ತಿ ಹೊಂದುವ ಅವಕಾಶ ಲಭ್ಯವಾಯಿತು. ಭಾರತದಲ್ಲಿ ಸಾಧ್ಯವಾಗದ್ದು ವಿದೇಶದಲ್ಲಿ ಸಾಧ್ಯವಾಯಿತು ಎಂದು ಪೊನ್ನಮ್ಮ ನೆನಪಿಸಿಕೊಳ್ಳುತ್ತಾರೆ. "ಈ ಕೆಲಸ ನಿರ್ವಹಣೆಗೆ ಮನೋಸ್ಥೈರ್ಯ, ದೇಹದಾರ್ಢ್ಯ ಹಾಗೂ ದೃಢತೆ ಬಲು ಮುಖ್ಯ" ಎಂದು ಹೇಳುತ್ತಾರೆ ಪೊನ್ನಮ್ಮ. ಪೊನ್ನಮ್ಮ ಅವರ ಪ್ರಕಾರ, ಪೊನ್ನಮ್ಮ ಅವರು ತಮ್ಮ 4 ವರ್ಷಗಳಲ್ಲಿ 3000 ಗಂಟೆಗಳ ವಿಮಾನ ಯಾನ ಚಾಲನೆ ಪೂರೈಸಿದ್ದಾರೆ. ವಾರಕ್ಕೆ ಕನಿಷ್ಠ 30 ಗಂಟೆ ವಿಮಾನ ಚಾಲನೆ ಮಾಡಬೇಕಾಗುತ್ತದೆ.

"ಕಷ್ಟದ ದಿನಗಳೇ ಸ್ಫೂರ್ತಿಯಾದವು"

"ಕಷ್ಟದ ದಿನಗಳು ಮುಗಿದು ನೆಮ್ಮದಿ ಲಭಿಸಿದೆ. ನನ್ನ ಪೋಷಕರು ನನಗಾಗಿ ಪರಿಶ್ರಮ ಪಟ್ಟಿದ್ದಾರೆ. ನನ್ನ ತಾಯಿ ಭಾಗ್ಯ ನನಗೆ "ರೋಲ್ ಮಾಡೆಲ್". ನನ್ನ ತಂದೆ, ತಾಯಿ ಚಾಮರಾಜನಗರದಲ್ಲಿ ಫಾರ್ಮ್ ಹೌಸ್ ಅನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ನಮ್ಮ ಕಷ್ಟದ ದಿನಗಳೇ ನಮಗೆ ಸ್ಫೂರ್ತಿಯಾಗಿವೆ. ಮುಂದಿನ ದಾರಿ ತೋರಿದೆ" ಎಂದು ನೆನಪಿಸಿಕೊಳ್ಳುತ್ತಾರೆ. ಕಳೆದ 8 ವರ್ಷಗಳಿಂದ ಈ ಕುಟುಂಬ ಚಾಮರಾಜನಗರದಲ್ಲಿ ನೆಲೆಸಿದೆ.

ಗಾಲಿಕುರ್ಚಿ ಕೇಳಿದ್ದಕ್ಕೆ ಆವಾಜ್ ಹಾಕಿದ ಪೈಲಟ್ ಅಮಾನತುಗಾಲಿಕುರ್ಚಿ ಕೇಳಿದ್ದಕ್ಕೆ ಆವಾಜ್ ಹಾಕಿದ ಪೈಲಟ್ ಅಮಾನತು

 ಸೇನೆಯಲ್ಲಿ 16 ವರ್ಷ ಸೇವೆ ಸಲ್ಲಿಸಿದ್ದ ಉತ್ತಯ್ಯ

ಸೇನೆಯಲ್ಲಿ 16 ವರ್ಷ ಸೇವೆ ಸಲ್ಲಿಸಿದ್ದ ಉತ್ತಯ್ಯ

ಉತ್ತಯ್ಯ ಅವರು ಭಾರತೀಯ ಸೇನೆಯಲ್ಲಿ 16 ವರ್ಷಗಳ ಕಾಲ ಹವಾಲ್ದಾರರಾಗಿ ಸೇವೆ ಸಲ್ಲಿಸಿ 1985ರಲ್ಲಿ ನಿವೃತ್ತರಾದರು. "ನನ್ನ ಮಗಳು ಫಿಲಿಫೈನ್ಸ್ ನಲ್ಲಿ ಪೈಲಟ್ ಆಗಿದ್ದು, ನಾನು ಮತ್ತು ನನ್ನ ಪತ್ನಿ ಆಕೆಯೊಂದಿಗೆ ವಿಮಾನದ ಪೈಲಟ್ ಕ್ಯಾಬಿನ್ನಲ್ಲಿ ಕುಳಿತು ಪ್ರಯಾಣ ಮಾಡಿದ್ದೇವೆ" ಎಂದು ಸಂತಸ ಹಂಚಿಕೊಂಡರು ಉತ್ತಯ್ಯ. ಉತ್ತಯ್ಯ ಅವರಿಗೆ ಮಗನೂ ಇದ್ದು, ಅವರು ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ.

English summary
Kodagu woman successfully became pilot in philippines. She is working as a pilot officer for the last four years in philippines
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X