ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು: ಬಸವೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಭಾವೈಕ್ಯತೆ ಮೆರೆದ ಮುಸ್ಲಿಮರು

|
Google Oneindia Kannada News

ಕೊಡಗು, ಏಪ್ರಿಲ್ 13: ರಾಜ್ಯದಲ್ಲಿ ಹಿಜಾಬ್, ದೇವಸ್ಥಾನದಲ್ಲಿ ವ್ಯಾಪಾರ ನಿಷೇಧ ಹಾಗೂ ಇತರೆ ಹಲವು ವಿಷಯಗಳಲ್ಲಿ ಹಿಂದೂ- ಮುಸ್ಲಿಂ ನಡುವೆ ಧಾರ್ಮಿಕ ವೈಮನಸ್ಯದ ಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ವಿಷಯ ಮುಗಿಯುವಷ್ಟರಲ್ಲಿ ಹಿಂದೂ ದೇವಾಲಯಗಳ ಹಬ್ಬ, ಜಾತ್ರೆಗಳಲ್ಲಿ ಮುಸಲ್ಮಾನರಿಗೆ ವ್ಯಾಪಾರ ಮಾಡದಂತೆ ಹಿಂದೂಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಕಂಡಿದ್ದೇವೆ.

ಹಿಜಾಬ್ ಧರಿಸಿ ಬಂದರೆ ದ್ವಿತೀಯ ಪಿಯು ಪರೀಕ್ಷೆಗೆ ಪ್ರವೇಶವಿಲ್ಲ; ಸಚಿವ ಬಿ.ಸಿ. ನಾಗೇಶ್ ಹಿಜಾಬ್ ಧರಿಸಿ ಬಂದರೆ ದ್ವಿತೀಯ ಪಿಯು ಪರೀಕ್ಷೆಗೆ ಪ್ರವೇಶವಿಲ್ಲ; ಸಚಿವ ಬಿ.ಸಿ. ನಾಗೇಶ್

ಆದರೆ ಇದಕ್ಕೆ ಅಪವಾದ ಎಂಬಂತೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕರಡಿಗೋಡಿನ ಶ್ರೀ ಬಸವೇಶ್ವರ ಜಾತ್ರೆಯಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಭಾಗವಹಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ. ಬಸವೇಶ್ವರ ಜಾತ್ರೆಯಲ್ಲಿ ಹಿಂದೂ, ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರು ನಿರಾತಂಕವಾಗಿ ವ್ಯಾಪಾರ ಮಾಡಿದ್ದಾರೆ.

ಎರಡು ಶತಮಾನಗಳಿಂದ ನೆಲೆಸಿರುವ ಬಸವೇಶ್ವರ ದೇವಾಲಯಕ್ಕೆ ಕರಡಿಗೋಡು, ಸಿದ್ದಾಪುರ, ಬರಡಿ ಮತ್ತು ನೆಲ್ಯಹುದಿಕೇರಿ ಸೇರಿದಂತೆ ವಿವಿಧ ಗ್ರಾಮಗಳ ಸರ್ವಧರ್ಮೀಯರು ಭಕ್ತಿ ಭಾವದಿಂದ ಭಾಗವಹಿಸಿದ್ದರು. ಬಸವಣ್ಣ ದೇವರು ತಮ್ಮಿಷ್ಟಾರ್ಥಗಳನ್ನು ಈಡೇರಿಸುವುದೆಂಬ ನಂಬಿಕೆ ಇರುವುದರಿಂದ ಹಿಂದೂಗಳು ಅಷ್ಟೇ ಅಲ್ಲ ಮುಸ್ಲಿಂ, ಕ್ರೈಸ್ತರು ಕೂಡ ಈ ಜಾತ್ರೆಯಲ್ಲಿ ಭಾಗವಹಿಸಿ ಸಾಮರಸ್ಯ ಮೆರೆದಿದ್ದಾರೆ.

Kodagu: Muslims and Christians Offered Pooja To Basaveshwara God In Virajpet

ಕಾವೇರಿ ನದಿಯಲ್ಲಿ ಮಜ್ಜನ

ಬಸವೇಶ್ವರ ಜಾತ್ರೆಗೆ ಬೇಕಾಗುವ ಹಣ್ಣು, ತರಕಾರಿ, ಅಕ್ಕಿ, ಬೇಳೆಗಳನ್ನು ನೀಡಿ ಭಕ್ತರು ತಮ್ಮ ಭಕ್ತಿಯನ್ನು ಮೆರೆಯುತ್ತಾರೆ. ನಿನ್ನೆ (ಮಂಗಳವಾರ) ನಡೆದ ವಾರ್ಷಿಕ ಪೂಜೆ ಅಂಗವಾಗಿ ದೇವಾಲಯದ ಬಳಿಯಿಂದ ಕಾವೇರಿ ನದಿಗೆ ಮೆರವಣಿಗೆಯಲ್ಲಿ ಸಾಗಿದ ಬಸವಣ್ಣ ದೇವರು, ಕಾವೇರಿ ನದಿಯಲ್ಲಿ ಮಜ್ಜನ ಮುಗಿಸಿ ಬಳಿಕ ಕರಡಿಗೋಡು ಗ್ರಾಮದಲ್ಲಿ ಸಾಗಿದೆ.

ಕರಡಿಗೋಡಿನಲ್ಲಿ ಹಿಂದೂ, ಮುಸ್ಲಿಂ ಎನ್ನದೆ ಎಲ್ಲರ ಮನೆ ಬಳಿಗೆ ಮೆರವಣಿಗೆ ತೆರಳಿದಾಗ ಮುಸಲ್ಮಾನರು, ಕ್ರೈಸ್ತರು ಕೂಡ ಹಣ್ಣು ಕಾಯಿ ಹೂವು ನೀಡಿ ಪೂಜೆ ಸಲ್ಲಿಸಿದರು.

15-20 ವರ್ಷಗಳಿಂದ ಬಸವವೇಶ್ವರ ಜಾತ್ರೆಯಲ್ಲಿ ವ್ಯಾಪಾರ
ಈ ಸಂದರ್ಭದಲ್ಲಿ ಮಾತನಾಡಿದ ಮುಸ್ಲಿಂ ವ್ಯಾಪಾರಿಗಳು, "15-20 ವರ್ಷಗಳಿಂದ ಬಸವವೇಶ್ವರ ಜಾತ್ರೆಯಲ್ಲಿ ವ್ಯಾಪಾರ ಮಾಡಿಕೊಂಡು ಬದುಕುತ್ತಿದ್ದೇವೆ. ಕೊಡಗು ಅಷ್ಟೇ ಅಲ್ಲದೆ ಹೊರ ಜಿಲ್ಲೆಗಳಿಗಲ್ಲೂ ನಡೆಯುವ ಎಲ್ಲಾ ಹಿಂದೂ ಮುಸ್ಲಿಂ ಜಾತ್ರೆ ಸಮಾರಂಭಗಳಲ್ಲಿ ಅಂಗಡಿ ಹಾಕಿ ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿದ್ದೇವೆ," ಎಂದು ತಿಳಿಸಿದರು.

"ಇದುವರೆಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಈಗ ಮಂಗಳೂರು ಭಾಗದಲ್ಲಿ ಕೆಲವು ಜಾತ್ರೆಗಳಲ್ಲಿ ಅಂಗಡಿ ಹಾಕುವುದಕ್ಕೆ ಬಿಡಲಿಲ್ಲ. ಆದರೆ ಕೊಡಗು ಜಿಲ್ಲೆಯಲ್ಲಿ ಮಾತ್ರ ಯಾವುದೇ ತೊಂದರೆಯಿಲ್ಲದೆ ವ್ಯಾಪಾರ ಮಾಡುತ್ತಿದ್ದೇವೆ. ಈಗಾಗಲೇ ಐದಾರು ಊರುಗಳ ಜಾತ್ರೆಗಳಲ್ಲಿ ವ್ಯಾಪಾರ ಮಾಡಿದ್ದೇವೆ. ಎಲ್ಲರೂ ಅಣ್ಣ ತಮ್ಮಂದಿರು, ಅಕ್ಕ ತಂಗಿಯರಂತೆ ಬದುಕುತ್ತಿದ್ದೇವೆ. ಮುಂದೆಯೂ ಇದೇ ರೀತಿ ಮುಂದುವರೆಯಬೇಕು ಎನ್ನುವುದು ನಮ್ಮ ಆಶಯ," ಎಂದಿದ್ದಾರೆ.

ನಾಲ್ಕೈದು ತಿಂಗಳು ಮಾತ್ರವೇ ದುಡಿಮೆ

ಇನ್ನು ಎಜಾಸ್ ಎಂಬ ವ್ಯಾಪಾರಿ ಮಾತನಾಡಿ, "ನಾವು ಹಲವು ವರ್ಷಗಳಿಂದ ಜಾತ್ರೆಗಳಲ್ಲಿ ಚಿಕ್ಕಪುಟ್ಟ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದೇವೆ. ವರ್ಷದ ನಾಲ್ಕೈದು ತಿಂಗಳು ಮಾತ್ರ ಜಾತ್ರೆ ಸಮಾರಂಭಗಳು ನಡೆಯುವುದರಿಂದ ಆ ನಾಲ್ಕೈದು ತಿಂಗಳು ಮಾತ್ರವೇ ದುಡಿದು ನಮ್ಮ ಇಡೀ ವರ್ಷದ ಜೀವನ ನಡೆಸಬೇಕು. ದಯವಿಟ್ಟು ಯಾರೂ ಇದಕ್ಕೆ ಕಲ್ಲು ಹಾಕಿ ನಮ್ಮ ಹೊಟ್ಟೆ ಮೇಲೆ ಹೊಡೆಯಬೇಡಿ. ಇಂತಹ ಸ್ಥಿತಿ ಬರದಂತೆ ಸರ್ಕಾರ ದಯವಿಟ್ಟು ತಡೆಯಬೇಕು. ಇಲ್ಲದಿದ್ದರೆ ಬಡವರ ಬದುಕು ಹಾಳಾದರೆ ಅದಕ್ಕೆ ಸರ್ಕಾರವೇ ನೇರ ಹೊಣೆ," ಎಂದಿದ್ದಾರೆ.

English summary
Hindu, Muslim and Christian participated in the Sri Basaveshwara jatre at Karadigodu in Virajpet Taluk, Kodagu District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X