ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ವಿಧಾನ ಪರಿಷತ್ ಫಲಿತಾಂಶ: ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು

|
Google Oneindia Kannada News

ಮಡಿಕೇರಿ, ಡಿಸೆಂಬರ್ 14: ಕರ್ನಾಟಕ ವಿಧಾನ ಪರಿಷತ್‌ ಚುನಾವಣೆಯ ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ 105 ಮತಗಳ ಅಂತರದಿಂದ ಗೆಲುವು ಭರ್ಜರಿ ಜಯ ಗಳಿಸಿದ್ದಾರೆ.

ಕೊಡಗು ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮಂಥರ್ ಗೌಡಗೆ ಸೋಲು ಕಂಡಿದ್ದಾರೆ. ಇವರು ಬಿಜೆಪಿ ನಾಯಕ ಎ. ಮಂಜು ಪುತ್ರರಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಕರ್ನಾಟಕ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಡಿಸೆಂಬರ್ 10ರಂದು ನಡೆದ ಚುನಾವಣೆಯ ಫಲಿತಾಂಶ ಇಂದು (ಮಂಗಳವಾರ) ಪ್ರಕಟವಾಗಲಿದೆ. 75 ಸದಸ್ಯರ ಮೇಲ್ಮನೆಯಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಪಡೆದುಕೊಳ್ಳಲು ಈ ಚುನಾವಣೆಯಲ್ಲಿ ಅವಕಾಶವಿದೆ.

Kodagu MLC Election Result 2021: BJP candidate Suja Kushalappa won by 105 votes against Mantar Gowda

ರಾಜ್ಯದ 20 ಜಿಲ್ಲೆಗಳಲ್ಲಿ ಸ್ಥಳೀಯ ಸಂಸ್ಥೆಗಳಿಂದ 1 ಲಕ್ಷಕ್ಕೂ ಹೆಚ್ಚು ಚುನಾಯಿತ ಪ್ರತಿನಿಧಿಗಳು, ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಶಾಸಕರು ಹಾಗೂ ಸಂಸದರು ಮತ ಚಲಾಯಿಸಿದ್ದಾರೆ. ಜನಪ್ರತಿನಿಧಿಗಳೇ ವೋಟ್​ ಹಾಕಿದ್ದರಿಂದ ಶೇ.99ರಷ್ಟು ಪ್ರಮಾಣದಲ್ಲಿ ಮತದಾನ ನಡೆದಿತ್ತು.

ಬಿಜೆಪಿಗೆ ಮೊದಲ ಜಯ
ವಿಧಾನ ಪರಿಷತ್ತಿನ 25 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಮಂಗಳವಾರ ರಾಜ್ಯದಲ್ಲಿ ಭರದಿಂದ ಸಾಗುತ್ತಿದ್ದು, ಕೊಡಗು ಕ್ಷೇತ್ರದಲ್ಲಿ ಜಯ ಗಳಿಸುವ ಮೂಲಕ ಬಿಜೆಪಿ ಶುಭಾರಂಭ ಮಾಡಿದೆ.

ಬಿಜೆಪಿಯ ಸುಜಾ ಕುಶಾಲಪ್ಪರಿಗೆ 705 ಮತಗಳು ಮತಗಳು ಬಂದಿದ್ದು, ಮತ ಎಣಿಕೆ ಆರಂಭವಾದ ಎರಡೇ ತಾಸುಗಳಲ್ಲಿ ಫಲಿತಾಂಶ ಹೊರಬಂದಿದೆ. ಸುಜಾ ಕುಶಾಲಪ್ಪ ಅವರ ಪ್ರತಿಸ್ಪರ್ಧಿ ಆಗಿದ್ದ ಕಾಂಗ್ರೆಸ್‌ನ‌ ಮಂಥರ್ ಗೌಡಗೆ 603 ಮತಗಳು ಬಂದಿದ್ದು, ಸೋಲು ಅನುಭವಿಸಿದ್ದಾರೆ.

ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿದ್ದ ಎಂ.ಪಿ. ಸುಬ್ರಮಣಿ ಅವರ ಸಹೋದರ ಸುಜಾ ಕುಶಾಲಪ್ಪ. ಸುಬ್ರಮಣಿ ಅವರ ಬದಲಿಗೆ ಈ ಬಾರಿ ಸುಜಾ ಕುಶಾಲಪ್ಪ ಅವರಿಗೆ ಟಿಕೆಟ್ ನೀಡಲಾಗಿತ್ತು. ಅಲ್ಲದೆ, ಇವರ ಮತ್ತೊಬ್ಬ ಸಹೋದರ ಅಪ್ಪಚ್ಚು ರಂಜನ್ ಮಡಿಕೇರಿ ಕ್ಷೇತ್ರದ ಶಾಸಕರಾಗಿದ್ದಾರೆ.

ಎ. ಮಂಜುಗೆ ಮುಖಭಂಗ:
ಸುಜಾ ಕುಶಾಲಪ್ಪ ವಿರುದ್ಧ ಸೋತ ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ, ಅರಕಲಗೂಡು ಬಿಜೆಪಿ ನಾಯಕ ಎ. ಮಂಜು ಅವರ ಪುತ್ರರಾಗಿದ್ದಾರೆ. ಎ. ಮಂಜು ಅವರ ಪುತ್ರನಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದರಿಂದ ಬಿಜೆಪಿಯ ಎಲ್ಲ ಜವಾಬ್ದಾರಿಗಳಿಂದ ಎ. ಮಂಜುರನ್ನು ಮುಕ್ತಗೊಳಿಸಲಾಗಿತ್ತು.

ಇದರಿಂದ ಬೇಸರಗೊಂಡಿದ್ದ ಮಂಜು ತಮ್ಮ ಮಗನ ಪರ ಬಹಿರಂಗ ಪ್ರಚಾರ ಮಾಡುವುದಾಗಿ ಘೋಷಿಸಿದ್ದರು. ಆದರೂ ಸಹ ಈ ಚುನಾವಣೆಯಲ್ಲಿ ಮಗ ಸೋತಿರುವುದು ಎ. ಮಂಜುಗೆ ಮುಖಭಂಗವಾದಂತಾಗಿದೆ.

ಇನ್ನು ಹಾಸನ ವಿಧಾನ ಪರಿಷತ್ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಡಾ. ಸೂರಜ್ ರೇವಣ್ಣ 500 ಮತಗಳ ಭಾರಿ ಮುನ್ನಡೆ ಕಾಯ್ದುಕೊಂಡಿದ್ದು, ಮೊದಲ ಪ್ರಾಶಸ್ತ್ಯದ ಮತದಲ್ಲೇ ಗೆಲುವು ಬಹುತೇಕ ಖಚಿತವಾಗಿದೆ.

Recommended Video

ದೇವೇಗೌಡರ ಬಗ್ಗೆ ಇಲ್ಲೂ ಇಲ್ಲದ ಅಭಿಮಾನ ಪಂಜಾಬ್ ರೈತರಿಗಿದೆ...ಹೇಗೆ ಅಂತೀರಾ? | Oneindia Kannada

English summary
MLC Election Result 2021: Kodagu BJP candidate Suja Kushalappa won by 105 votes against Mantar Gowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X