ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಂಚಕ್ಕೆ ಗಾಳ ಹಾಕಿ ಜೈಲಿಗೆ ಹೋದ ಗಾಳಿಬೀಡು ಅರಣ್ಯ ಅಧಿಕಾರಿಗಳು!

|
Google Oneindia Kannada News

ಕೊಡಗು, ಏಪ್ರಿಲ್ 24: ಆತ ಮುಗ್ಧ ರೈತ. ಮಡಿಕೇರಿ ತಾಲೂಕಿನ ನಿಡವಟ್ಟು ನಿವಾಸಿ. ಈ ರೈತನ ಜೀವನಪಪಾಯಕ್ಕೆ ನಿಡವಟ್ಟು ಗ್ರಾಮದಲ್ಲಿ ಮೂರು ಎಕರೆ ಗದ್ದೆ ಇತ್ತು. ಮೂರು ವರ್ಷದ ಹಿಂದೆ ಸುರಿದ ಮಳೆಗೆ ಗುಡ್ಡ ಕುಸಿದು ಇಡೀ ಜಮೀನು ಹಾಳಾಗಿತ್ತು. ಭೂ ಕುಸಿತದಿಂದ ಬಂದಿದ್ದ ಮರಗಳನ್ನು ಜಿಲ್ಲಾಡಳಿತ ಇದೇ ಜಾಗದಲ್ಲಿ ಕೂಡಿ ಹಾಕಿತ್ತು. ಮೂರು ವರ್ಷವಾದರೂ ತೆರವು ಮಾಡಿರಲಿಲ್ಲ ! ಹೀಗಾಗಿ ಮೂರು ವರ್ಷದಿಂದ ರೈತ ಕೃಷಿ ಚಟುವಟಿಕೆ ಕೈಗೊಂಡಿರಲಿಲ್ಲ.

ಈ ವರ್ಷವಾದರೂ ಕೃಷಿ ಮಾಡೋಣ ಎಂದು ಭಾವಿಸಿ ಮೂರು ವರ್ಷದಿಂದ ಬಿದ್ದಿದ್ದ ನಿರಪಯುಕ್ತ ಕೊಂಬೆಗಳಿಗೆ ಬೆಂಕಿ ಇಟ್ಟರು. ರೈತನ ಜಮೀನಿಗೆ ಹೊಂದಿಕೊಂಡಿರುವ ಭದ್ರಕಾಳಿ ದೇವಸ್ಥಾನಕ್ಕೆ ಸಂಬಂಧಿಸಿದ ಜಾಗದಲ್ಲಿ ಬೆಂಕಿ ತಗುಲಿತ್ತು. ಇದನ್ನು ಮುಂದಿಟ್ಟು ಲಂಚ ವಸೂಲಿ ಮಾಡಲು ಯತ್ನಿಸಿದ ಅರಣ್ಯ ಅಧಿಕಾರಿಗಳನ್ನು ರೈತ ಜೈಲಿಗೆ ಕಳುಹಿಸಿದ್ದಾನೆ.

ಇದನ್ನೇ ಮುಂದಿಟ್ಟುಕೊಂಡು, ನಿನ್ನ ವಿರುದ್ಧ ಕೇಸು ದಾಖಲಿಸುತ್ತೇನೆ ಎಂದು ಹೆದರಿಸಿ ರೈತನಿಂದ ಲಂಚ ಸ್ವೀಕರಿಸಿ ಮಡಿಕೇರಿಯ ಗಾಳಿಬೀಡು ಅರಣ್ಯದ ಫಾರೆಸ್ಟ್ ಗಾರ್ಡ್ ಮತ್ತು ವಲಯ ಅರಣ್ಯ ಅಧಿಕಾರಿ ಕೊಡಗು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಅರಣ್ಯ ರಕ್ಷಕ ಅನೀಲ್ ಹಾಗೂ ಮಡಿಕೇರಿ ವಲಯದ ಜಿಲ್ಲಾ ವಲಯ ಅರಣ್ಯ ಅಧಿಕಾರಿ ರಮೇಶ್ ಲಂಚ ಸ್ವೀಕರಿಸಿ ಎಸಿಬಿ ಬಲೆಗೆ ಬಿದ್ದವರು. ಇವರಿಂದ ಒಂದು ಲಕ್ಷ ರೂ. ಲಂಚದ ಹಣ ವಶಪಡಿಸಿಕೊಳ್ಳಲಾಗಿದೆ. ಇಬ್ಬರ ವಿರುದ್ಧವೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕ್ರಿಮಿನಲ್ ದಾವೆ ದಾಖಲಿಸಲಾಗಿದೆ.

Kodagu: Galibeedu Forest officials sent to jail in bribe case

ನಿಡವಟ್ಟು ಗ್ರಾಮದ ರೈತ ತಪ್ಪೇ ಮಾಡಿರಲಿಲ್ಲ. ತನ್ನ ಗದ್ದೆಯಲ್ಲಿ ಮೂರು ವರ್ಷದ ಹಿಂದೆ ಹಾಕಿದ್ದ ಮರಗಳನ್ನು ಜಿಲ್ಲಾಡಳಿತ ತೆರವು ಮಾಡಿರಲಿಲ್ಲ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಕಿವಿಗೆ ಹಾಕಿಕೊಂಡಿರಲಿಲ್ಲ. ಈ ವರ್ಷ ಕೃಷಿ ಚಟುವಟಿಕೆ ಮಾಡುವ ಸಲುವಾಗಿಯೇ ಅವಕ್ಕೆ ಬೆಂಕಿ ಇಟ್ಟಿದ್ದರು. ಈ ವೇಳೆ ಪಕ್ಕದ ಭದ್ರಕಾಳಿ ದೇವಸ್ಥಾನ ಅರ್ಚಕರಿಗೆ ಮನೆ ಕಟ್ಟಿಕೊಡಲು ಮೀಸಲಿಟ್ಟದ್ದ ಜಾಗದಲ್ಲಿ ಬೆಂಕಿ ಬಿದ್ದಿದ್ದು. ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದರು. ಇದನ್ನು ಗಮನಿಸಿದ ಅರಣ್ಯ ರಕ್ಷಕ ಅನೀಲ್, ನೀವು ಬೆಂಕಿ ಇಟ್ಟಿರುವ ಜಾಗದಲ್ಲಿ ಕಾಡು ಸುಟ್ಟು ಹೋಗಿದೆ.

Kodagu: Galibeedu Forest officials sent to jail in bribe case

ಇಲ್ಲಿ ಮರಗಳನ್ನು ನಡೆಡಬೇಕು. ಸರ್ಕಾರ ದಂಡ ಹಾಕಿದರೆ ನೀವೇ ಕಟ್ಟಬೇಕು. ದೇವರ ಕಾಡು ಸುಟ್ಟ ಬಗ್ಗೆ ನಿನ್ನ ವಿರುದ್ಧ ಕೇಸು ದಾಖಲಿಸಿದರೆ ಸುಮಾರು 50 ಸಾವಿರ ದಂಡವನ್ನೇ ಕಟ್ಟಬೇಕಾಗುತ್ತದೆ. ಅದರ ಬದಲಿಗೆ ಇಪ್ಪತ್ತೈದು ಸಾವಿರ ಲಂಚ ಕೊಡಿ, ಮೇಲಾಧಿಕಾರಿಗಳ ಜತೆ ಮಾತನಾಡಿ ಕೇಸು ಇಲ್ಲದಂತೆ ಮಾಡುತ್ತೇನೆ ಎಂದು ತಿಳಿಸಿದ್ದ. ಮುಂಗಡವಾಗಿ 2500 ರೂ. ಸ್ವೀಕರಿಸಿದ್ದ. ಆನಂತರ 5.500 ರೂ. ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ಇದೇ ಪ್ರಕರಣದಲ್ಲಿ DRFO ಕೂಡ ಸಿಕ್ಕಿಬಿದ್ದಿದ್ದು, ಇಬ್ಬರ ವಿರದ್ಧ ಕೊಡಗು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರು ಕೇಸು ದಾಖಲಿಸಿದ್ದಾರೆ.

English summary
Kodagu Anti Corruption wing have arrested the forest officials who were receiving bribes from a farmer know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X