ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಣ್ಣೆದುರಲ್ಲೇ ಬಿತ್ತು ಮನೆ... ಯಾರಿಗೆ ಹೇಳೋದು ಈ ಯಮಯಾತನೆ?!

|
Google Oneindia Kannada News

Recommended Video

ಕೊಡಗು ಮಳೆಯ ಅವಾಂತರ ಹಾಗು ಭೀಕರ ಪ್ರವಾಹದ ಭಯಾನಕ ವೈರಲ್ ವಿಡಿಯೋಗಳು

ಮಡಿಕೇರಿ, ಆಗಸ್ಟ್ 18: ಮಧ್ಯಮವರ್ಗದ ಎಷ್ಟೋ ಜನರ ಬದುಕಿನ ಕನಸು.. 'ಒಂದು ಸ್ವಂತ ಸೂರು ಕಟ್ಟಿಕೊಳ್ಳೋದು.' ಕೈಗೆ ಬಂದ ಕಾಸನ್ನೆಲ್ಲ ಕೂಡಿಟ್ಟು ಕಟ್ಟಿದ ಇಂಥ ಮನೆಯೇ ಕಣ್ಣೆದುರಲ್ಲೇ ಉದುರಿಬೀಳುತ್ತಿದ್ದರೆ ಆ ಯಮಯಾತನೆ ಯಾರಿಗೆ ಅರ್ಥವಾಗಬೇಕು?!

ಹುಟ್ಟಿ ಬೆಳೆದ ಮನೆ, ಓದಿದ ಶಾಲೆ, ಓಡಾಡಿದ ರಸ್ತೆ ಎಲ್ಲವೂ ಗುರುತೇ ಇಲ್ಲದಂತೆ ಮಾಯವಾಗಿಬಿಟ್ಟರೆ..! ಅಬ್ಬಬ್ಬಾ, ಆ ಸ್ಥಿತಿ ಯಗಾರಿಗೂ ಬೇಡ. ಆದರೆ ಕರ್ನಾಟಕದ ಸುಂದರ ನಗರಿ ಕೊಡಗಿನ ಜನರು ಅಂಥದೊಂದು ವಿಲಕ್ಷಣ ಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ಕಣ್ಣೆದುರಲ್ಲೇ ತಮ್ಮದೇ ಮಳೆ ಬೀಳುವುದನ್ನು ಕಂಡು ಏನೂ ಮಾಡಲಾಗದ ಅಸಹಾಯಕ ಸ್ಥಿತಿಗೆ ಹಿಡಿಶಾಪ ಹಾಕುತ್ತಿದ್ದಾರೆ... ಪ್ರವಾಹದ ಕಬಂಧಬಾಹುವಿನಲ್ಲಿ ತೇಲಿ ಹೋಗುತ್ತಿರುವ ಜಾನುವಾರುಗಳನ್ನು ಮೂಕಪ್ರೇಕ್ಷಕರಾಗಿ ನೋಡುತ್ತಿದ್ದಾರೆ. ಹೌದು ಇದು ಜಲಪ್ರಳಯದ ಪ್ರತ್ಯಕ್ಷ ಚಿತ್ರ!

ನೋಡುನೋಡುತ್ತಿದ್ದಂತೆಯೇ ಧರೆಗುರುಳಿದ ಮನೆ!

ಕರ್ನಾಟಕದ ಮಡಿಕೇರಿಯಲ್ಲಿ ನೋಡು ನೋಡುತ್ತಿದ್ದಂತೆಯೇ ಮನೆಯೊಂದು ಉದುರಿಬಿದ್ದ ದೃಶ್ಯ ಕಂಡರೆ ಒಮ್ಮೆ ಮೈಜುಮ್ಮೆನ್ನುತ್ತದೆ.

ಕೊಡಗಿನಲ್ಲಿ ಅಂದು ನಡೆದದ್ದು ಜಲಪ್ರಳಯದ ಮುನ್ಸೂಚನೆಯಾಗಿತ್ತಾ? ಕೊಡಗಿನಲ್ಲಿ ಅಂದು ನಡೆದದ್ದು ಜಲಪ್ರಳಯದ ಮುನ್ಸೂಚನೆಯಾಗಿತ್ತಾ?

ಪ್ರವಾಹದಲ್ಲಿ ತೇಲಿಹೋದ ಮನೆ!

ಮನೆಯೆತ್ತರಕ್ಕೆ ಬಂದ ಭೀಕರ ಪ್ರವಾಹದಲ್ಲಿ ಮನೆಯೊಂದು ಬಿದ್ದು, ತೇಲಿಹೋದ ದೃಶ್ಯವಂತೂ ಹೃದಯವನ್ನು ಭಾರವಾಗಿಸುತ್ತದೆ! ಮನೆಯೇ ಇಲ್ಲದೆ ಬದುಕುವುದು ಹೇಗೆ? ನಿರಾಶ್ರಿತರ ಕೇಂದ್ರದಲ್ಲಿ ಸದ್ಯಕ್ಕೆ ಆಸರೆ ಪಡೆದಿರುವ ಇವರ ಭವಿಷ್ಯವನ್ನು ನೆನೆದರೆ ಆತಂಕವಾಗುವುದು ಸುಳ್ಳಲ್ಲ.

ಕೊಡಗಿನಲ್ಲಿ ಜಲಪ್ರಳಯ, ಕಣ್ಣೆದುರೇ ಕುಸಿಯುತ್ತಿವೆ ಮನೆ, ಗುಡ್ಡ, ಕಾಫಿತೋಟಕೊಡಗಿನಲ್ಲಿ ಜಲಪ್ರಳಯ, ಕಣ್ಣೆದುರೇ ಕುಸಿಯುತ್ತಿವೆ ಮನೆ, ಗುಡ್ಡ, ಕಾಫಿತೋಟ

ಮನೆಯೇ ಜಾರಿಬಿದ್ದು...

ಭೂಕುಸಿತದಿಂದ ಉಂಟಾದ ಇಳಿಜಾರಿನಲ್ಲಿ ಇಡೀ ಮನೆಯೇ ಜಾರಿಕೊಂಡು ಬಂದ ಈ ದೃಶ್ಯ ಪ್ರವಾಹದ ಭೀಕರತೆಗೆ, ಅದು ಸೃಷ್ಟಿಸಿದ ಅವಾಂತರಕ್ಕೆ ಕನ್ನಡಿ.

ಬಾಯ್ತೆರೆದು ಕುಳಿತ ರಸ್ತೆ!

ಪ್ರಯಾಣಿಕರನ್ನೆಲ್ಲ ತನ್ನೊಡಲಲಲ್ಲಿ ಸೇರಿಸಿಕೊಳ್ಳುವಂತೆ ರಸ್ತೆಯೊಂದು ಬಾಯ್ತೆರೆದು ಕಾಯುತ್ತಿರುವ ದೃಶ್ಯವಿದು. ಹಲವು ರಸ್ತೆಗಳು ಹೀಗೆ ಬಿರುಕುಬಿಟ್ಟಿರುವುದರಿಂದ ಇಂಥ ಸ್ಥಳಗಳಲ್ಲಿ ಈಗಾಗಲೇ ಸಂಚಾರ ನಿರ್ಬಂಧಿಸಲಾಗಿದೆ.

English summary
Heavy rain lashes Karnataka's Kodagu (Coorg)district. People are facing floodlike situation in the district. Here are some viral videos, which show rain havoc in the district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X