ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನಲ್ಲಿ ಬಿಡುವು ನೀಡಿದ ವರುಣ ಮತ್ತೆ ಅಬ್ಬರಿಸುತ್ತಾನಾ?

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಜುಲೈ 12; ಮೃಗಶಿರಾ ಮಳೆಯ ನಂತರ ಆರಿದ್ರಾ ಮಳೆ ಸುರಿಯದ ಕಾರಣ ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಕೊಡಗು ಜಿಲ್ಲೆಯ ರೈತರು ನೀರಿಲ್ಲದೆ ಕಂಗಾಲಾಗಿದ್ದರು. ಇದೀಗ ಪುನರ್ವಸು ಮಳೆ ಬಿರುಸು ಪಡೆಯುತ್ತಿದ್ದು, ಮತ್ತೆ ಮಳೆಗಾಲದ ವಾತಾವರಣ ಕಾಣಿಸುತ್ತಿದೆ.

ಧಾರಾಕಾರವಲ್ಲದಿದ್ದರೂ ನಿಧಾನವಾಗಿ ಮಳೆ ವೇಗ ಪಡೆದುಕೊಳ್ಳುತ್ತಿದ್ದು ಜುಲೈ ತಿಂಗಳ ಕೊನೆ ಹಾಗೂ ಆಗಸ್ಟ್ ತಿಂಗಳ ಮೊದಲ ವಾರದ ನಡುವಿನ ಅವಧಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುವುದು ಸಾಮಾನ್ಯವಾಗಿದೆ. ಈಗಿನ ವಾತಾವರಣವನ್ನು ಗಮನಿಸಿದರೆ ಪುನರ್ವಸು ಮತ್ತು ಪುಷ್ಯ ಮಳೆಗಳು ಅಬ್ಬರಿಸುವ ಸಾಧ್ಯತೆಯಿರುವ ಕಾರಣ ಜಿಲ್ಲಾಡಳಿತ ಅಗತ್ಯ ಕ್ರಮ ಸಹ ಕೈಗೊಂಡಿದೆ.

ಮುಂಗಾರು ಪ್ರಭಾವ; ಬೆಂಗಳೂರಿನಲ್ಲಿ ಮುಂದಿನ 2 ದಿನ ಭಾರೀ ಮಳೆ ಸೂಚನೆಮುಂಗಾರು ಪ್ರಭಾವ; ಬೆಂಗಳೂರಿನಲ್ಲಿ ಮುಂದಿನ 2 ದಿನ ಭಾರೀ ಮಳೆ ಸೂಚನೆ

ಮಳೆ ಸುರಿದು ಭೂಮಿಯಿಂದ ಅಂತರ್ಜಲ ಹೆಚ್ಚಿದರೆ ಮಾತ್ರ ಭತ್ತದ ಕೃಷಿ ಮಾಡಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಇಲ್ಲಿನ ಹೆಚ್ಚಿನ ಜನರು ಮಳೆಯ ನೀರನ್ನೇ ನಂಬಿ ಭತ್ತದ ಕೃಷಿ ಮಾಡುತ್ತಿದ್ದು, ಮೊದಲಿನಂತೆ ಸಮಯಕ್ಕೆ ಸರಿಯಾಗಿ ಮಳೆ ಸುರಿಯದ ಕಾರಣ ಕೃಷಿ ಮಾಡುವುದು ಕಷ್ಟವಾಗುತ್ತದೆ. ಮಳೆಗಾಲದಲ್ಲಿ ಮಳೆ ಬಾರದೆ ಇತರೆ ಸಮಯಗಳಲ್ಲಿ ಮಳೆ ಸುರಿದು ಭತ್ತದ ಬೆಳೆಗೆ ಹಾನಿಯಾಗುತ್ತದೆ. ಇದರಿಂದ ನಿರೀಕ್ಷಿತ ಇಳುವರಿ ಸಿಗದೆ ನಷ್ಟ ಅನುಭವಿಸುವಂತಾಗಿದೆ.

ಕೊಡಗು ಅನ್‌ಲಾಕ್; ಪರಿಷ್ಕೃತ ನಿಯಮಗಳನ್ನು ತಿಳಿಯಿರಿ ಕೊಡಗು ಅನ್‌ಲಾಕ್; ಪರಿಷ್ಕೃತ ನಿಯಮಗಳನ್ನು ತಿಳಿಯಿರಿ

Kodagu Farmers Have Hope On July Rain For Agriculture Activities

ಈ ಬಾರಿ ಜೂನ್ ತಿಂಗಳಲ್ಲಿ ಮೃಗಶಿರಾ ಮಳೆ ಉತ್ತಮವಾಗಿ ಸುರಿದು ನದಿ, ತೊರೆಗಳು ಉಕ್ಕಿ ಹರಿದಿದ್ದವು ಇದರಿಂದ ಗದ್ದೆಗೆ ನೀರು ಹರಿದು ಬಂದಿತ್ತು. ಆದರೆ ಮೃಗಶಿರಾ ಮಳೆಯ ನಂತರ ಆರಿದ್ರಾ ನಕ್ಷತ್ರದ ಮಳೆ ಸುರಿಯದೆ ಸುಮಾರು ಎರಡು ವಾರಗಳ ಕಾಲ ಬಿಡುವು ನೀಡಿದ್ದರಿಂದ ಕಾವೇರಿ ನದಿ ಸೇರಿದಂತೆ ತೊರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಅಷ್ಟೇ ಅಲ್ಲ ಹಾರಂಗಿ ಜಲಾಶಯಕ್ಕೆ ಒಳ ಹರಿವು ಕೂಡ ಇಳಿಮುಖವಾಯಿತು.

ಕೊಡಗು: ಭಾಗಮಂಡಲದಲ್ಲಿ ಪಿಂಡ ಪ್ರದಾನಕ್ಕೆ ಅವಕಾಶಕೊಡಗು: ಭಾಗಮಂಡಲದಲ್ಲಿ ಪಿಂಡ ಪ್ರದಾನಕ್ಕೆ ಅವಕಾಶ

ಒಂದು ವೇಳೆ ಮಳೆಯ ಅಬ್ಬರ ಅದೇ ರೀತಿ ಮುಂದುವರೆದಿದ್ದರೆ ಇಷ್ಟರಲ್ಲಿಯೇ ಹಾರಂಗಿ ಜಲಾಶಯ ಭರ್ತಿಯಾಗುವ ಸಾಧ್ಯತೆ ಇತ್ತಲ್ಲದೆ, ಕೆಆರ್‌ಎಸ್ ಜಲಾಶಯಕ್ಕೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿತ್ತು. ಆದರೆ ಒಮ್ಮೆಲೇ ಮಳೆ ಬಿಡುವು ನೀಡುವ ಮೂಲಕ ಜನರನ್ನು ಆತಂಕಕ್ಕೆ ತಳ್ಳಿತ್ತು. ಇದೀಗ ಮಳೆ ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ಅಬ್ಬರಿಸಿ ಇನ್ಯಾವ ರೀತಿಯ ಅನಾಹುತ ಮಾಡಿ ಬಿಡುತ್ತದೆಯೋ? ಎಂಬ ಭಯವೂ ಈಗ ಆರಂಭವಾಗಿದೆ.

Kodagu Farmers Have Hope On July Rain For Agriculture Activities

Recommended Video

ಇಬ್ಬರು ಶಿಷ್ಯರಲ್ಲಿ ದ್ರಾವಿಡ್ ಆಯ್ಕೆ ಯಾರು? | Oneindia kannada

ಕಳೆದ ಒಂದು ದಿನದ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 14.11 ಮಿ. ಮೀ. ಮಳೆ ಸುರಿದಿದೆ. ಅತಿ ಹೆಚ್ಚು 36 ಮಿ. ಮೀ. ಮಳೆ ಕೊಡಗಿನ ಗಡಿಭಾಗ ಸಂಪಾಜೆಯಲ್ಲಿ ಸುರಿದಿದೆ. ಸದ್ಯ ಸಾಧಾರಣವಾಗಿ ಮಳೆ ಸುರಿಯುತ್ತಿರುವುದು ನೆಮ್ಮದಿ ತಂದಿದೆ. ಹೀಗೆಯೇ ಮುಂದುವರೆದರೆ ರೈತರು ಭತ್ತದ ನಾಟಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗಲಿದೆ.

English summary
Kodagu farmers have hope on July rain for yearly agriculture activities. Monsoon rain started in the month of June. But monsoon rain stooped in the middle of the month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X