ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು ಪ್ರವಾಹ ಸಂತ್ರಸ್ತರಿಗೆ ಸಹಾಯವಾಣಿ ಆರಂಭ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 17: ಕೊಡಗು, ಕರಾವಳಿ ಭಾಗದಲ್ಲಿ ಮಳೆ ಮುಂದುವರೆದು ಪ್ರವಾಹಕ್ಕೆ ಎಡೆಮಾಡಿಕೊಟ್ಟಿದೆ. ದಿನದಿಂದ ದಿನಕ್ಕೆ ಮೃತರ ಸಂಖ್ಯೆ ಏರುತ್ತಲೇ ಇದೆ. ಸಂಕಷ್ಟದಲ್ಲಿರುವ ಜನತೆಗಾಗಿ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಈ ಕುರಿತು ನಟಿ ಸಂಯುಕ್ತಾ ಹೊರ್ನಾಡ್‌ ಸಹಾಯವಾಣಿ ಸಂಖ್ಯೆಗಳನ್ನು ಟ್ವೀಟ್‌ ಮಾಡಿದ್ದಾರೆ.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ಕೊಡಗು ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದೆ, ನಾಪೋಕ್ಲು, ಅಯ್ಯಂಗೇರಿ, ಭಾಗಮಂಡಲ, ಚೆಟ್ಟಿಮಾನಿ ವ್ಯಾಪ್ತಿಯ ಗ್ರಾಮಗಳಲ್ಲಿ ಭಾರಿ ಮಳೆಯಾಗುತ್ತಿದೆ. ಗುರುವಾರ ಸ್ವಲ್ಪ ಬಿಡುವು ನೀಡಿದ್ದ ಮಳೆ ಮತ್ತೆ ಚುರುಕಾಗಿದ್ದು, ಜಿಲ್ಲೆಯ ಜನಜೀವನ ಸಂಪೂರ್ಣವಾಗಿ ಅಸ್ತವ್ಯವಸ್ತವಾಗಿದೆ.

ಧಾರಾಕಾರ ಮಳೆ: ವರುಣನ ಆರ್ಭಟ 'ಸಾಕಪ್ಪಾ ಸಾಕು' ಎಂದ ಕೊಡಗು ಜನತೆ ಧಾರಾಕಾರ ಮಳೆ: ವರುಣನ ಆರ್ಭಟ 'ಸಾಕಪ್ಪಾ ಸಾಕು' ಎಂದ ಕೊಡಗು ಜನತೆ

ಶುಕ್ರವಾರ ಹಾಗೂ ಶನಿವಾರ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಲವು ದಿನಗಳಿಂದ ಕೇರಳ ರಾಜ್ಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಸಾವಿಗೀಡಾದವರ ಸಂಖ್ಯೆ 114ಕ್ಕೇರಿದೆ. ಕೊಡಗು ಜಿಲ್ಲೆಯಲ್ಲಿ ಎರಡು ದಿನದಿಂದ ಭಾರೀ ಮಳೆ ಆಗುತ್ತಿದೆ.

ಕೇರಳಕ್ಕೆ ಹೋಗುವ ಹೆದ್ದಾರಿ ಕೂಡ ಬಂದ್ ಆಗಿದೆ. ಜಿಲ್ಲೆಯಲ್ಲಿ ಪರಿಹಾರ ಕಾರ್ಯಾಚರಣೆ ತೀವ್ರಗೊಳಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಅಗತ್ಯ ನೆರವುಗಳನ್ನು ಪಡೆಯುವಂತೆ, ಜನರ ರಕ್ಷಣೆಗೆ ಹೆಲಿಕಾಪ್ಟರ್ ಗಳನ್ನು ಬಳಸುವಂತೆ ಕೂಡ ಸೂಚನೆ ನೀಡಿದ್ದಾರೆ.

Kodagu district braces for monsoon: Helpline

ಮಳೆ ಪೀಡಿತ ಜಿಲ್ಲೆಗಳಿಗೆ 200 ಕೋಟಿ ಬಿಡುಗಡೆ ಮಾಡಿದ ಸಿಎಂ<br>ಮಳೆ ಪೀಡಿತ ಜಿಲ್ಲೆಗಳಿಗೆ 200 ಕೋಟಿ ಬಿಡುಗಡೆ ಮಾಡಿದ ಸಿಎಂ

ಮಳೆಯ ಅಬ್ಬರ ಮುಂದುವರೆದಿದೆ. ಭಾಗಮಂಡಲದಲ್ಲಿ ಒಂದೇ ದಿನದ ಅವಧಿಯಲ್ಲಿ ದಾಖಲೆಯ ಸುಮಾರು 252 ಮಿ.ಮೀ. ಮಳೆ ಸುರಿದಿದ್ದು ಪರಿಣಾಮ ತ್ರಿವೇಣಿ ಸಂಗಮ ಜಲಾವೃತವಾಗಿದೆ. ಇದರಿಂದ ಸುತ್ತಮುತ್ತಲ ಸಂಪರ್ಕ ಬಂದ್ ಆಗಿದ್ದು ಜನಜೀವನ ಅಸ್ತವ್ಯಸ್ತವಾಗಿದ್ದು ಮಳೆ ಯಾವಾಗ ನಿಲ್ಲುವುದೋ ಎಂದು ಜನರು ಕಾಯುವಂತಾಗಿದೆ. ಮನೆಗಳು ಸಂಪೂರ್ಣವಾಗಿ ಜಲಾವೃತವಾಗಿದೆ. ಇನ್ನು ಕೆಲವು ಮನೆಗಳು ಕುಸಿದಿದೆ. ಕೊಡಗು ಜಿಲ್ಲಾಧಿಕಾರಿ-9482628409, ಜಿಲ್ಲಾ ಪಂಚಾಯತ್‌ ಸಿಇಓ-9480869000.

English summary
The Kodagu district administration is bracing itself for the onset of monsoon and will initiate measures to tackle floods that are a regular feature during the rainy season, they are started helpline for flood affected people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X