ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು ಜಿಲ್ಲಾ ಬ್ಯಾಂಕ್ ಮಾರ್ಗದರ್ಶಿ: ಸಾರ್ವಜನಿಕರ ಗಮನಕ್ಕೆ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಮಾರ್ಚ್ 27: ಇತ್ತೀಚಿನ ದಿನಗಳಲ್ಲಿ ರಾಷ್ಟ್ರ ಮತ್ತು ರಾಜ್ಯದ ಜನರನ್ನು ಕಂಗೆಡಿಸಿರುವ ಕೊರೊನಾ ವೈರಸ್ ನ ಸೋಂಕು ಹರಡದಂತೆ ಸರಕಾರ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ರಾಜ್ಯ ಮಟ್ಟದ ಬ್ಯಾಂಕ್ ಗಳ ಸಮಿತಿಯು ಸಭೆ ಸೇರಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಬ್ಯಾಂಕುಗಳಿಗೆ ನೀಡಲಾದ ದಿನಾಂಕ ಮಾರ್ಚ್ 26, 2020 ರ ನಿರ್ದೇಶನದಂತೆ ಜಾರಿಗೊಳಿಸಲಾದ ಬ್ಯಾಂಕುಗಳ ಸಮಯ ಈ ರೀತಿ ಇದೆ.

1) ಬ್ಯಾಂಕಿಂಗ್ ವ್ಯವಹಾರದ ಸಮಯ ವಾರದ ಎಲ್ಲಾ ದಿನಗಳಲ್ಲಿ(ಭಾನುವಾರ, 2ನೇ ಶನಿವಾರ ಹಾಗೂ ಸರಕಾರಿ ರಜಾ ದಿನಗಳನ್ನು ಹೊರತು ಪಡಿಸಿ) ಬೆಳಗ್ಗೆ 10. ರಿಂದ ಮಧ್ಯಾಹ್ನ 2 ರವರೆಗೆ.

Kodagu District Bank Guide: To Notice Of The Public

2) ಜಿಲ್ಲಾ(ಮಡಿಕೇರಿ) ಮತ್ತು ತಾಲ್ಲೂಕು ಕೇಂದ್ರ ಸ್ಥಾನಗಳಾದ (ಸೋಮವಾರಪೇಟೆ, ವಿರಾಜಪೇಟೆ) ಮತ್ತು ಅರೆ ನಗರ ಪ್ರದೇಶ (ಕುಶಾಲನಗರ) ದಲ್ಲಿ ವ್ಯವಹರಿಸುತ್ತಿರುವ ಶಾಖೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.

3) ಬ್ಯಾಂಕುಗಳ ಗ್ರಾಮೀಣ ಭಾಗದ ಆಯ್ದ ಕೆಲವು ಶಾಖೆಗಳು(ಕೆಳ ಸೂಚಿಸಿದಂತೆ) ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಎಂದಿನಂತೆ ಕಾರ್ಯನಿರ್ವಹಿಸುತ್ತವೆ.

ಬ್ಯಾಂಕ್ ಆಫ್ ಬರೋಡ - ಸಿದ್ದಾಪುರ, ನಗರೂರು, ಗಡ್ಡೆಹಳ್ಳ, ಗೋಣಿಕೊಪ್ಪಲು.

ಕಾರ್ಪೊರೇಶನ್ ಬ್ಯಾಂಕ್ - ಸೋಮವಾರಪೇಟೆ, ಗೋಣಿಕೊಪ್ಪಲು, ಕೂಡುಮಗಳೂರು.

ಕೆನರಾ ಬ್ಯಾಂಕ್ - ಪೊನ್ನಂಪೇಟೆ, ಗುಡುಗಳಲೆ, ಗೋಣಿಕೊಪ್ಪಲು, ಸೋಮವಾರಪೇಟೆ, ಕೊಡ್ಲಿಪೇಟೆ, ನಾಪೋಕ್ಲು

4) ಇನ್ನುಳಿದ ಎಲ್ಲಾ ಬ್ಯಾಂಕುಗಳ ಗ್ರಾಮೀಣ ಭಾಗದ ಶಾಖೆಗಳು ಈ ಕೆಳಕಂಡ ದಿನಗಳಲ್ಲಿ ಕಾರ್ಯನಿರ್ವಹಿಸುತ್ತವೆ. (ದಿನಾಂಕ: ಮಾ. 31, ಏ. 02, 04, 07, 09 ಮತ್ತು 13)

ಸಾರ್ವಜನಿಕರು ಗಮನಿಸಬೇಕಾದ ಅಂಶವೆಂದರೆ ಏ.1 ಬ್ಯಾಂಕ್ ಗಳ ವಾರ್ಷಿಕ ಲೆಕ್ಕಪತ್ರ ಮುಕ್ತಾಯ ದಿನ, ಏ. 5 ಭಾನುವಾರ, ಏ.6 ಮಹಾವೀರ ಜಯಂತಿ, ಏ.10 ಗುಡ್ ಫ್ರೈಡೆ ಮತ್ತು ಏ.11. 2ನೇ ಶನಿವಾರ, ಏ.13 ಭಾನುವಾರ ಮತ್ತು ಏ.14 ಡಾ.ಅಂಬೇಡ್ಕರ್ ಜಯಂತಿ ಪ್ರಯುಕ್ತ ಬ್ಯಾಂಕ್ ಗೆ ಈಗಾಗಲೇ ಸಾರ್ವಜನಿಕ ರಜೆ ನೀಡಲಾಗಿದೆ.

English summary
The banks which have been appointed by the State Level Banking Committee meeting and all the banks operating in the State as of March 26, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X