ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಗತ್ಯ ವಸ್ತು ಪೂರೈಸುವಂತೆ ಕೊಡಗು ಜಿಲ್ಲಾಧಿಕಾರಿ ಮನವಿ

|
Google Oneindia Kannada News

ಮಡಿಕೇರಿ, ಆಗಸ್ಟ್ 10 : ಕಳೆದ ವರ್ಷದಂತೆ ಈ ವರ್ಷವೂ ಕೊಡಗಿನಲ್ಲಿ ನೆರೆ ಬಂದ ಪರಿಣಾಮ ಅಗತ್ಯ ಸಾಮಗ್ರಿಗಳನ್ನು ಪೂರೈಸುವಂತೆ ಕೋರಿ ಕೊಡಗು ಜಿಲ್ಲಾಧಿಕಾರಿ ಮೈಸೂರು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ.

ಕೊಡಗಿನ ಭೀಕರ ಮಳೆಗೆ 7 ಮಂದಿ ಬಲಿ, 8 ಮಂದಿ ಕಣ್ಮರೆ
ಕೊಡಗು ಜಿಲ್ಲೆಗೆ ಕೆಲವು ಅಗತ್ಯ ಸಾಮಗ್ರಿಗಳ ಅವಶ್ಯಕತೆ ಇದೆ. ಈಗಾಗಲೇ ಆಹಾರ ಹಾಗೂ ಔಷಧ ಬಂದಿವೆ. ಮತ್ತಷ್ಟು ವಸ್ತುಗಳ ಅಗತ್ಯವಿದೆ. ಬಹಳಷ್ಟು ಜನರು ಆಹಾರ ಪದಾರ್ಥಗಳು, ಉಡುಗೆಗಳು, ನೀರು, ಹಾಲು ಮತ್ತು ಹೊದಿಕೆಗಳನ್ನು ನೀಡಿ ಸಹಕರಿಸುತ್ತಿದ್ದು, ಮತ್ತಷ್ಟು ಸಹಕಾರದ ಅವಶ್ಯಕತೆ ಇದೆ. ಪ್ಲಾಸ್ಟಿಕ್ ಬಕೆಟ್ ಮತ್ತು ಮಗ್, ರೇನ್ ಕೋಟ್, ದಿನಬಳಕೆಯ ಉಡುಗೆಗಳು, ಬೆಚ್ಚಗಿನ ಉಡುಪುಗಳು, ಪಾದರಕ್ಷೆಗಳು, ಸ್ಯಾನಿಟರಿ ನ್ಯಾಪ್ಕಿನ್ಸ್ ಮತ್ತು ಡೈಪರ್ಸ್, ಪ್ಲಾಸ್ಟಿಕ್ ಮ್ಯಾಟ್, ಕೊಡೆಗಳು, ಟಾರ್ಚ್ ಲೈಟ್, ಸ್ಯಾನಿಟೈಜರ್ಸ್ ಮತ್ತು ಡೆಟಾಲ್, ಬ್ಲೀಚಿಂಗ್ ಪೌಡರ್, ಫಿನಾಯಿಲ್ ಮತ್ತು ಸ್ವಚ್ಛತೆಗೆ ಸಂಬಂಧಪಟ್ಟ ವಸ್ತುಗಳ ಅವಶ್ಯಕತೆ ಇದೆ.

Kodagu DC appealed people to help Flood victims
ಇದರೊಟ್ಟಿಗೆ ಸಾಬೂನು, ಶಾಂಪೂ, ಟೂತ್ ಬ್ರಶ್ ಮತ್ತು ಪೇಸ್ಟ್ ಮತ್ತು ಬಾಚಣಿಗೆಗಳು, ಅಡುಗೆ ಪರಿಕರಗಳು, ಕ್ಯಾಂಡಲ್ ಮತ್ತು ಬೆಂಕಿಪೊಟ್ಟಣಗಳು, ಟವೆಲ್, ತಲೆದಿಂಬುಗಳು, ಲುಂಗಿ ಮತ್ತು ನೈಟಿಗಳು, ಅಡುಗೆ ಎಣ್ಣೆ, ಒಳ ಉಡುಪುಗಳು, ಲಗೇಜ್ ಬ್ಯಾಗ್, ಮೊಬೈಲ್ ಚಾರ್ಜರ್ ಹಾಗೂ ಇತ್ಯಾದಿ ಸಾಮಗ್ರಿಗಳನ್ನು ಮಳೆಹಾನಿ ಸಂತ್ರಸ್ತರಿಗೆ ಕೊಡಗು ಜಿಲ್ಲಾಡಳಿತವು ತೆರೆದಿರುವ ಸಂಗ್ರಹಣಾ ಕೇಂದ್ರಗಳಿಗೆ ಸ್ವಯಂ ಸೇವಕರು ಮತ್ತು ಸಂಘ ಸಂಸ್ಥೆಗಳು ಕಳುಹಿಸಿಕೊಡಬೇಕಾಗಿ ಕೊಡಗು ಜಿಲ್ಲಾಧಿಕಾರಿ ಕೋರಿದ್ದಾರೆ.
English summary
Kodagu DC appealed people to help Flood victims. Also People are Kodagu know suffering landslide hesitation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X