ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು: ಬಾಗಿಲು ಮುಚ್ಚಿ ಪ್ರವಚನ ನೀಡುತ್ತಿದ್ದ ಮಸೀದಿ ವಿರುದ್ಧ ಕೇಸ್ ದಾಖಲು

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಏಪ್ರಿಲ್ 28: ಕೊರೊನಾ ಎರಡನೇ ಅಲೆ ತಡೆಗಟ್ಟಲು ಸರ್ಕಾರ ವಿವಿಧ ರೀತಿಯಲ್ಲಿ ಕಾನೂನು ಕ್ರಮಗಳನ್ನು ಕೈಗೊಂಡಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಹಗಲು-ರಾತ್ರಿ ಎನ್ನದೆ ದುಡಿಯುತ್ತಿದ್ದಾರೆ.

ಆದರೆ, ಕೊಡಗು ಜಿಲ್ಲೆ ವಿರಾಜಪೇಟೆ ಸಮೀಪದ ಆರ್ಜಿ ಗ್ರಾಮದ ಪೆರುಂಬಾಡಿಯ ಅನ್ವರುಲ್ ಹುದಾ ವಿದ್ಯಾ ಸಂಸ್ಥೆ ಹಾಗೂ ಮಸೀದಿಯ ಆಡಳಿತ ಮಂಡಳಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿದೆ.

ಮಾರ್ಗಸೂಚಿ ಉಲ್ಲಂಘನೆ: ವಿರಾಜಪೇಟೆ ದಂತ ವೈದ್ಯಕೀಯ ಕಾಲೇಜು ವಿರುದ್ಧ ಮೊಕದ್ದಮೆ ಮಾರ್ಗಸೂಚಿ ಉಲ್ಲಂಘನೆ: ವಿರಾಜಪೇಟೆ ದಂತ ವೈದ್ಯಕೀಯ ಕಾಲೇಜು ವಿರುದ್ಧ ಮೊಕದ್ದಮೆ

ಮಸೀದಿಯ ಒಳಾಂಗಣದಲ್ಲಿ ಸುಮಾರು 80 ಮಂದಿಗೆ ಪ್ರವಚನ ಬೋಧಿಸುವ ಬಗ್ಗೆ ಖಚಿತ ಮಾಹಿತಿ ಪಡೆದ ವಿರಾಜಪೇಟೆ ತಾಲೂಕು ತಹಶೀಲ್ದಾರ ಮಂಗಳವಾರ ಮಧ್ಯಾಹ್ನ ದಿಢೀರ್ ದಾಳಿ ನಡೆಸಿ, ಮಸೀದಿಯ ಆಡಳಿತ ಮಂಡಳಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.

 Kodagu: Case Filed Against Mosque In Virajpet For Violating Lockdown Guidelines

ಮಸೀದಿಯ ಹೊರಭಾಗದಲ್ಲಿ ಕೋವಿಡ್-19 ನಿಯಮ ಪಾಲಿಸಲು ಮಸೀದಿಯನ್ನು ಮುಚ್ಚಲಾಗಿದೆ ಎಂಬ ನಾಮಫಲಕ ಅಳವಡಿಸಿ, ಒಳಗೆ ಪ್ರವಚನ ನಡೆಸುತ್ತಿದ್ದರು. ಇಲ್ಲಿನ ವಿದ್ಯಾರ್ಥಿಗಳೂ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರವನ್ನು ಕಾಪಾಡದೆ ಪ್ರವಚನದಲ್ಲಿ ಭಾಗವಹಿಸಿರುವುದು ತಹಶೀಲ್ದಾರ ದಾಳಿಯ ವೇಳೆ ಬೆಳಕಿಗೆ ಬಂದಿದೆ. ಅನಾಥ ಮಕ್ಕಳು ಇರುವುದರಿಂದ ಇವರನ್ನು ಎಲ್ಲಿಯೂ ಕಳುಹಿಸಲು ಸಾಧ್ಯವಾಗಲಿಲ್ಲ ಎಂದು ಆಡಳಿತ ಮಂಡಳಿ ಹೇಳಿದೆ.

 Kodagu: Case Filed Against Mosque In Virajpet For Violating Lockdown Guidelines

ಅನ್ವರಲ್ ಹುದಾ ವಿದ್ಯಾಸಂಸ್ಥೆ ಹಾಗೂ ಮಸೀದಿಯಲ್ಲಿ 50 ರಿಂದ 60 ಮಂದಿ ವಯಸ್ಕರು, 15 ರಿಂದ 20 ವಿದ್ಯಾರ್ಥಿಗಳು ಪ್ರವಚನದಲ್ಲಿ ಭಾಗವಹಿಸಿ ಕೋವಿಡ್-19 ನಿಯಮ ಉಲ್ಲಂಘನೆ ಮಾಡಿದ ಆರೋಪದಡಿಯಲ್ಲಿ ಐಪಿಸಿ ಸೆಕ್ಷನ್ 269 ಕಲಂ 51 ಬಿ. ಇದರಡಿಯಲ್ಲಿ (ವಿಪತ್ತು ನಿರ್ವಹಣಾ ಕಾಯ್ದೆ) ಆಡಳಿತದ ಮಂಡಳಿಯ ಅಬ್ದುಲ್ ರಶೀದ್, ಅಶ್ರಫ್ ಹಾಗೂ ಸೆಫ್ಫಿಯಾನ್ ಎಂಬುವರ ಮೇಲೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Recommended Video

AB de Villiers ಬ್ಯಾಟಿಂಗ್ ನೋಡಿ ತನ್ನ ಆಸೆ ಹೇಳಿಕೊಂಡ ಗವಾಸ್ಕರ್ | Oneindia Kannada

English summary
Case filed against Arji village mosque near Virajpet for violationg Lockdown guidelines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X