• search
  • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನವನ್ನು ವಿರೋಧಿಸಿ ಪ್ರತಿಭಟನೆ

|

ಬೆಂಗಳೂರು , ನವೆಂಬರ್ 13: ಪತ್ರಕರ್ತ, ಜನಪ್ರಿಯ ಅಂಕಣಕಾರ ಸಂತೋಷ್ ತಮ್ಮಯ್ಯ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಹಿಂದೂಪರ ಕಾರ್ಯಕರ್ತರು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರತಿಭಟಿಸುತ್ತಿದ್ದಾರೆ.

ಟ್ವಿಟ್ಟರ್ ನಲ್ಲಿ #IAmWithSanthoshThammaiah ಸದ್ಯ ಬೆಂಗಳೂರಿನಲ್ಲಿ ಟಾಪ್ ಟ್ರೆಂಡಿಂಗ್ ನಲ್ಲಿದೆ.

'ಪತ್ರಕರ್ತ ಹಾಗು ಖ್ಯಾತ ಅಂಕಣಕಾರ ಸಂತೋಷ್ ತಮ್ಮಯ್ಯರ ಭಂಧನ ಖಂಡಿಸಿ ಪ್ರತಿಭಟನೆಗಳು ಶುರುವಾಗಿವೆ...ಮುಖ್ಯಮಂತ್ರಿಗಳೆ ಎಚ್ಚೆತ್ತುಕೊಳ್ಳಿ ಇಲ್ಲವಾದರೆ ಕರ್ನಾಟಕವೆ ದಂಗೆ ಎದ್ದಿತು ಜೋಕೆ.. ಎಂದು ಟ್ವಿಟ್ಟರ್ ನಲ್ಲಿ ಬರೆಯಲಾಗಿದೆ.

ಗೋಣಿಕೊಪ್ಪದಲ್ಲಿ ಅಘೋಷಿತ ಬಂದ್ ಪರಿಸ್ಥಿತಿ ಉಂಟಾಗಿದ್ದು, ಬಂಧನ ಖಂಡಿಸಿ, ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಗುತ್ತಿದೆ. ಟಿಪ್ಪು ಸುಲ್ತಾನ್ ಸ್ಮರಣೆಯಲ್ಲಿ ಸರ್ಕಾರಿ ಪ್ರಾಯೋಜಿತ ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಿ ಸಂತೋಷ್ ತಮ್ಮಯ್ಯ ಅವರು ಭಾಷಣ ಮಾಡಿದ್ದರು. ಟಿಪ್ಪುವಿನ ರಾಷ್ಟ್ರೀಯತೆ, ಕೊಡವರಿಗೆ ಆಗಿರುವ ಅನ್ಯಾಯದ ಬಗ್ಗೆ ಹೇಳಿದ್ದರು.

ಇದು ಸರ್ಕಾರದ ವಿರುದ್ಧದ ಭಾಷಣ ಎಂದು ಪರಿಗಣಿಸಿದ ಪೊಲೀಸರು, ಸಂತೋಷ್ ತಮ್ಮಯ್ಯ ಅವರನ್ನು ಸೋಮವಾರ ಮಧ್ಯರಾತ್ರಿ ಬಂಧಿಸಿದ್ದಾರೆ. ಕರ್ನಾಟಕದಲ್ಲಿ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಸಂತೋಷ್ ತಮ್ಮಯ್ಯ ಪರ ಪ್ರತಿಭಟನೆ ಆರಂಭವಾಗಿದೆ.

ಸಂತೋಷ್ ತಮ್ಮಯ್ಯ ಪರ ಪ್ರತಿಭಟನೆ ಆರಂಭ

ರಾಜ್ಯ ಪತ್ರಕರ್ತರ ಸಂಘ ಹಾಗೂ ಪ್ರಮುಖ ಪತ್ರಿಕೆಗಳು ಪತ್ರಕರ್ತರು ಮೌನ ವಹಿಸಿರುವುದೇಕೆ? ಎಂದು ಪ್ರಶ್ನಿಸಲಾಗಿದೆ.

ಹಿಂದೂಗಳ ಪರ ನಿಂತರೆ ಬಂಧನ ಖಂಡಿತ

ರಾಮ, ಕೃಷ್ಣ ದೇವರಲ್ಲ ಎಂದು ನಿಂದಿಸುತ್ತಾರೆ. ಜೆಎನ್ ಯುವಿನಲ್ಲಿ ಮಾ ದುರ್ಗಾರನ್ನು ಅಪಮಾನ ಮಾಡಲಾಗುತ್ತದೆ. ಅಯ್ಯಪ್ಪ ದೇಗುಲದ ನಂಬಿಕೆಯನ್ನು ಪ್ರಶ್ನಿಸಲಾಗುತ್ತದೆ. ಟಿಪ್ಪು ವಿರುದ್ಧ ಮಾತನಾಡಿದರೆ ಬಂಧಿಸಲಾಗುತ್ತದೆ.,.

ಗೋಣಿಕೊಪ್ಪದಲ್ಲಿ ಪ್ರತಿಭಟನೆ

ಸಂತೋಷ್ ತಮ್ಮಯ್ಯ ಬಂಧನವನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಮಾನವ ಸರಪಳಿ ನಿರ್ಮಿಸಿ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಲಾಗುತ್ತಿದೆ. ಪಟ್ಟಣದಲ್ಲಿ ಅಘೋಷಿತ ಬಂದ್ ಆಚರಿಸಲಾಗುತ್ತಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತಿದೆ, ಸಂತೋಷ್ ರನ್ನು ಬಿಡುಗಡೆ ಮಾಡದಿದ್ದರೆ, ಸಂಪೂರ್ಣವಾಗಿ ಕೊಡಗು ಬಂದ್ ಆಗಲಿದೆ ಎಂದು ಸಿಎಂ ಹಾಗೂ ಡಿಸಿಎಂಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಲಾಗಿದೆ.

ನಮ್ಮನ್ನು ಬಂಧಿಸಿ ಎಂದು ಸರ್ಕಾರಕ್ಕೆ ಸವಾಲು

ಟಿಪ್ಪು ಬಗ್ಗೆ ಮಾತನಾಡಿದ್ದಕ್ಕೆ ರಾಜ್ಯದಲ್ಲಿ ಜನರನ್ನು ಅರೆಸ್ಟ್ ಮಾಡುವುದಾದರೆ, ಟಿಪ್ಪುವಿನ ಮತಾಂಧತೆಯ ಬಗ್ಗೆ ಮಾತಾಡಿದ ನಮ್ಮೆಲ್ಲರನ್ನು ಅರೆಸ್ಟ್ ಮಾಡಿ ಮುಖ್ಯಮಂತ್ರಿಗಳೇ ಎಂದು ರೋಹಿತ್ ಚಕ್ರತೀರ್ಥ ಅವರು ಸವಾಲು ಹಾಕಿದ್ದಾರೆ.

ಬುದ್ಧಿಜೀವಿಗಳೇ ಎಲ್ಲಿದ್ದೀರಿ?

ಪತ್ರಕರ್ತರ ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಿದೆ. ಬಂಧನವಾಗಿದೆ. ಬುದ್ಧಿಜೀವಿಗಳೇ ಎಲ್ಲಿದ್ದೀರಿ? ಈಗ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Know Why #IamwithSanthoshThammaiah is trending on Twitter today. Karnataka police have arrested Writer, Journalist Santosh Thammaiah for speaking against Tipu Jayanti. Right wing activists protesting against the arrest of Journalist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more