ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭೂಮಿ ವೆಬ್‌ಸೈಟ್‌ನಲ್ಲಿ ಕೊಡಗು ನೆರೆ ಸಂತ್ರಸ್ತರಿಗೆ ನೆರವು

By ಬಿ.ಎಂ. ಲವಕುಮಾರ್
|
Google Oneindia Kannada News

ಮಡಿಕೇರಿ, ಆಗಸ್ಟ್ 22: ಕೊಡಗಿನಲ್ಲಿ ಜಲಪ್ರಳಯದಿಂದಾಗಿ ಸುಮಾರು 15 ಗ್ರಾಮಗಳ ಜನ ಸಂಕಷ್ಟಕ್ಕೀಡಾಗಿದ್ದಾರೆ. ಕೃಷಿಯನ್ನೇ ನಂಬಿ ಬದುಕುತ್ತಿದ್ದ ಇಲ್ಲಿನವರ ತೋಟಗಳು, ಮನೆಗಳು ಕೊಚ್ಚಿ ಹೋಗಿವೆ.

ಏನೂ ಇಲ್ಲದೆ ಎಲ್ಲವನ್ನೂ ಕಳೆದುಕೊಂಡು ಬರಿಗೈಲಿ ನಿಂತಿರುವ ಅವರಿಗೆ ಬದುಕು ಕಟ್ಟಿಕೊಡಲು ಇಡೀ ಕರುನಾಡು ಒಂದಾಗಿ ಶ್ರಮಿಸುತ್ತಿದೆ. ಇದು ನಿಜಕ್ಕೂ ಸಂತೋಷಪಡುವ ವಿಚಾರ.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ಈಗಾಗಲೇ ಕೊಡಗಿಗೆ ಸಾಕಷ್ಟು ಪರಿಹಾರ ಸಾಮಗ್ರಿಗಳು ಹೋಗಿದ್ದು ಇನ್ನೂ ಕೂಡ ಸಂಘ ಸಂಸ್ಥೆಗಳು ಸಾಗಿಸುತ್ತಲೇ ಇವೆ. ಇದೆಲ್ಲದರ ನಡುವೆ ಕೊಡಗು ನೆರೆ ಸಂತ್ರಸ್ತರಿಗಾಗಿ ಕೊಡಗು ವಿಪತ್ತು ರಕ್ಷಣಾ ಪರಿಹಾರಕ್ಕೆ ಅನುಕೂಲವಾಗುವಂತೆ ಬೆಂಗಳೂರಿನ ಉಸ್ತುವಾರಿ ಕೋಶವು ತನ್ನ ಭೂಮಿ ವೆಬ್‌ಸೈಟ್‌ನಲ್ಲಿ ಕೊಡಗು ವಿಪತ್ತು ರಕ್ಷಣೆ ಎಂಬ ವಿಭಾಗ ಆರಂಭಿಸಿದೆ.

karnataka landrecords website bhoomi section to help kodagu floods victims

ಈ ವೆಬ್‌ಸೈಟ್‌ನಲ್ಲಿ ನೆರೆಪೀಡಿತ ಪ್ರದೇಶಗಳಲ್ಲಿರುವವರ ನೆರವಿಗಾಗಿ ಪ್ರತ್ಯೇಕ ವಿಭಾಗ ಆರಂಭಿಸಲಾಗಿದ್ದು, ಬೇರೆ ಬೇರೆ ಪ್ರದೇಶಗಳಲ್ಲಿ ಸಿಲುಕಿರುವ ಹಾಗೂ ಪರಿಹಾರ ಕೇಂದ್ರಕ್ಕೆ ಬರಲು ಸಾಧ್ಯವಾಗದಿದ್ದವರು ಪರಿಹಾರ, ರಕ್ಷಣೆ ಹಾಗೂ ಸಾಮಗ್ರಿ, ಔಷಧಿ ಮಾಹಿತಿಗೆ ಹೆಸರು ನೋಂದಾಯಿಸಬಹುದು. ಸಂತ್ರಸ್ಥರು ಇರುವ ಕಡೆ ಅಗತ್ಯವಾದ ಪರಿಕರ, ಸಹಾಯವನ್ನು ಒದಗಿಸಲಾಗುತ್ತದೆ. ಸ್ಥಳಕ್ಕೆ ತೆರಳುವ ಸ್ವಯಂ ಸೇವಕರು, ಅಧಿಕಾರಿಗಳ ಮೂಲಕ ಪರಿಹಾರಕ್ಕಾಗಿ ನೋಂದಾಯಿಸಬಹುದು.

ಕೊಡಗು ವಿಪತ್ತು ರಕ್ಷಣಾ ಪರಿಹಾರ ಎಂಬ ವಿಭಾಗದಿಂದ ಸ್ವಯಂ ಸೇವಕ ತಂಡಗಳು ಮಾಹಿತಿ ಪಡೆದು ಸಹಾಯ ನೀಡಬಹುದಾಗಿದೆ.

ಕೇರಳ, ಕೊಡಗು ಪ್ರವಾಹಕ್ಕೆ 'ಸೋಮಾಲಿ ಜೆಟ್‌' ಕಾರಣ: ಸ್ಫೋಟಕ ಮಾಹಿತಿಕೇರಳ, ಕೊಡಗು ಪ್ರವಾಹಕ್ಕೆ 'ಸೋಮಾಲಿ ಜೆಟ್‌' ಕಾರಣ: ಸ್ಫೋಟಕ ಮಾಹಿತಿ

ಈ ತಂತ್ರಾಂಶವು ನಾಗರಿಕರಿಗೆ ತಮ್ಮನ್ನು, ಬೇರೊಬ್ಬರಿಗೆ ಮತ್ತು ಅವರ ಪ್ರದೇಶಕ್ಕೆ ಪರಿಹಾರವನ್ನು ಪಡೆಯಲು ಮತ್ತು ಪರಿಹಾರ ನೀಡಲು ಅನುಮತಿಸುತ್ತದೆ. ಎಲ್ಲಾ ವಿನಂತಿಗಳನ್ನು ಸಹಾಯಕ್ಕಾಗಿ ನೋಂದಾಯಿಸಿರುವ ವಿನಂತಿಗಳ ಅಡಿಯಲ್ಲಿ ನೀಡಿರುವ ಸಾರ್ವಜನಿಕ ಮಾಹಿತಿ ವಿಭಾಗದಲ್ಲಿ ಕಾಣಬಹುದು. ಆದ್ದರಿಂದ ಯಾರು ಬೇಕಾದರೂ ವಿನಂತಿಯನ್ನು ಮಾಡಬಹುದಾಗಿದೆ.

English summary
Karnataka government Landrecord Website 'Bhoomi' has launched a section dedicated to help Kodagu flood victims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X