ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು ಜಿಲ್ಲೆಯಲ್ಲಿ ಹೊಸ ತಾಲೂಕು; ಅಧಿಕೃತ ಆದೇಶ

|
Google Oneindia Kannada News

ಮಡಿಕೇರಿ, ಜುಲೈ 07 : ದಶಕಗಳ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ. ಕೊಡಗು ಜಿಲ್ಲೆಯಲ್ಲಿ ಹೊಸ ತಾಲೂಕು ರಚನೆಯಾಗಲಿದೆ. ಕರ್ನಾಟಕ ಸರ್ಕಾರ ಪೊನ್ನಂಪೇಟೆ ತಾಲೂಕು ರಚನೆ ಮಾಡಲು ಅಧಿಕೃತ ಆದೇಶ ಹೊರಡಿಸಿದೆ.

ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿಯ ದಶಕಗಳ ಹೋರಾಟಕ್ಕೆ ಫಲ ಸಿಕ್ಕಿದೆ. ತಾಲೂಕು ರಚನೆಗೆ ಕರ್ನಾಟಕ ಸರ್ಕಾರ ಕರಡು ಆದೇಶ ಪ್ರಕಟ ಮಾಡಿತ್ತು. ಯಾವುದೇ ಆಕ್ಷೇಪಣೆ ಬರದ ಹಿನ್ನಲೆಯಲ್ಲಿ ಅಧಿಕೃತ ಆದೇಶ ಹೊರಡಿಸಲಾಗಿದೆ.

ಹೊರಗಿನಿಂದ ಜಿಲ್ಲೆಗೆ ಬರುವವರಿಗೆ ಎಚ್ಚರಿಕೆ ಕೊಟ್ಟಿರುವ ಕೊಡಗು ಡಿಸಿಹೊರಗಿನಿಂದ ಜಿಲ್ಲೆಗೆ ಬರುವವರಿಗೆ ಎಚ್ಚರಿಕೆ ಕೊಟ್ಟಿರುವ ಕೊಡಗು ಡಿಸಿ

Karnataka Govt Issued To Constitute Ponnampet As New Taluk

ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆ ಸರ್ಕಲ್ ಅನ್ನು ಹೊಸ ತಾಲೂಕು ಆಗಿ ರಚನೆ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಹೊಸ ತಾಲೂಕಿನ ವ್ಯಾಪ್ತಿಗೆ ಬರುವ ಹೋಬಳಿ, ಗ್ರಾಮಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಕೊಡಗು; ವಿವಿಧ ಹುದ್ದೆಗಳು ಖಾಲಿ ಇವೆ, ಅರ್ಜಿ ಹಾಕಿ ಕೊಡಗು; ವಿವಿಧ ಹುದ್ದೆಗಳು ಖಾಲಿ ಇವೆ, ಅರ್ಜಿ ಹಾಕಿ

ಒಟ್ಟು 21 ಗ್ರಾಮ ಪಂಚಾಯಿತಿಗಳು ನೂತನ ತಾಲೂಕು ರಚನೆಯಾಗಬೇಕು ಎಂದು ನಿರ್ಣಯವನ್ನು ಮಂಡನೆ ಮಾಡಿದ್ದವು. ಆಹಾರ ನಿಗಮದ ಕಟ್ಟಟದ ಕಚೇರಿಯಲ್ಲಿ ನೂತನ ತಾಲೂಕು ಕೇಂದ್ರ ಸದ್ಯಕ್ಕೆ ಕಾರ್ಯ ನಿರ್ವಹಣೆ ಮಾಡುವ ಸಾಧ್ಯತೆ ಇದೆ.

ವಿರಾಜಪೇಟೆ, ಮಡಿಕೇರಿ ಕ್ಷೇತ್ರಗಳ ಮತದಾರರ ವಿವರವಿರಾಜಪೇಟೆ, ಮಡಿಕೇರಿ ಕ್ಷೇತ್ರಗಳ ಮತದಾರರ ವಿವರ

ಏಪ್ರಿಲ್‌ನಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೂತನ ತಾಲೂಕು ಕೇಂದ್ರವನ್ನು ಉದ್ಘಾಟನೆ ಮಾಡಬೇಕಿತ್ತು. ಈ ಕುರಿತು ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿ ಸಭೆಯನ್ನು ನಡೆಸಿತ್ತು. ಆದರೆ, ಕೊರೊನಾ ವೈರಸ್ ಸೋಂಕಿನ ಕಾರಣ ಕಾರ್ಯಕ್ರಮ ನಡೆಯಲಿಲ್ಲ.

English summary
Karnataka government issued notification on constitute new taluk called Ponnampet in Kodagu district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X