ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಡಿಕೇರಿಗೆ ಶಿಫ್ಟ್ ಆಗಲಿದ್ದಾರೆ ಎಲ್ಲಾ ಜೆಡಿಎಸ್ ನಾಯಕರು

|
Google Oneindia Kannada News

ಮಡಿಕೇರಿ, ಜುಲೈ 8: ರಾಜ್ಯ ರಾಜಕಾರಣದಲ್ಲಾದ ಈ ಭಾರೀ ಬದಲಾವಣೆ ಕಾರಣ ಜೆಡಿಎಸ್ ತನ್ನ ಉಳಿದ ಶಾಸಕರನ್ನು ಉಳಿಸಿಕೊಳ್ಳಲು ಮಡಿಕೇರಿ ರೆಸಾರ್ಟ್ ಗೆ ಶಿಫ್ಟ್ ಮಾಡಲು ಮುಂದಾಗಿದೆ.

ಇಂದು ಸಂಜೆ 5ರ ವೇಳೆಗೆ ಜೆಡಿಎಸ್ ಶಾಸಕರು ಮಡಿಕೇರಿ ರೆಸಾರ್ಟ್ ಗೆ ಶಿಫ್ಟ್ ಆಗಲಿದ್ದಾರೆ. ಶಾಸಕರೊಂದಿಗೆ ಸಿಎಂ ಕುಮಾರಸ್ವಾಮಿ ಸಭೆ ನಡೆಸಲಿದ್ದು, ಸಭೆ ಬಳಿಕ ಮಡಿಕೇರಿಯತ್ತ ಪ್ರಯಾಣ ಬೆಳೆಸಲಿದ್ದಾರೆ. ವಿಶೇಷ ಬಸ್ ಮೂಲಕ ಉಳಿದ ಶಾಸಕರನ್ನು ಮಡಿಕೇರಿಗೆ ಕರೆದೊಯ್ಯಲಾಗುತ್ತದೆ.

 ಬಿಜೆಪಿಯವರೋ ಬೇರೆಯವರೋ ಏನು ಮಾಡ್ತಾರೆ ನನಗೆ ಸಂಬಂಧಿಸಿಲ್ಲ: ಎಚ್ ಡಿಕೆ ಬಿಜೆಪಿಯವರೋ ಬೇರೆಯವರೋ ಏನು ಮಾಡ್ತಾರೆ ನನಗೆ ಸಂಬಂಧಿಸಿಲ್ಲ: ಎಚ್ ಡಿಕೆ

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಪ್ಯಾಡಿಂಗ್ ಟನ್ ರೆಸಾರ್ಟಿನಲ್ಲಿ ರೂಮುಗಳು ಬುಕ್ಕಿಂಗ್ ಆಗಿವೆ. ಇಂದು ಸಂಜೆ ವೇಳೆಗೆ ಬರುವುದಾಗಿ ಜೆಡಿಎಸ್ ಮುಖಂಡರು ರೂಮ್ ಬುಕ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮೂರು ರಾತ್ರಿ ಉಳಿದುಕೊಳ್ಳಲು ಪ್ಲಾನ್ ಮಾಡಿ ರೂಮುಗಳನ್ನು ಬುಕ್ ಮಾಡಲಾಗಿದೆ. 35 ರೂಂಗಳಲ್ಲಿ 10 ವಿಲ್ಲಾ, 15 ಡಿಲೆಕ್ಸ್ ಮತ್ತು 10 ಕಾಟೇಜ್ ರೂಂಗಳನ್ನು ಬುಕ್ಕಿಂಗ್ ಮಾಡಲಾಗಿದೆ. ಪ್ಯಾಡಿಂಗ್ ಟನ್ ಹೋಟೆಲ್ ಮ್ಯಾನೇಜರ್ ರಶ್ಮಿ, ರೂಂಗಳ ಬುಕ್ಕಿಂಗ್ ಬಗ್ಗೆ ದೃಢಪಡಿಸಿದ್ದಾರೆ.

jds leaders are shifting to madikeri resort

ರಾತ್ರಿ 1 ಗಂಟೆಗೆ ರೆಸಾರ್ಟ್ ಎಂಡಿ ಕಡೆಯಿಂದ ರೂಂಗಳು ಬುಕ್ ಆಗಿವೆ ಎಂದು ತಿಳಿದು ಬಂದಿದೆ. ಇತ್ತ ಮಡಿಕೇರಿಯ ರೆಸಾರ್ಟ್ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಸಹ ಏರ್ಪಡಿಸಲಾಗಿದೆ.

English summary
Due to this drastic change in state politics, cm kumaraswamy planned to meet all in the Madikeri resort to retain its remaining legislators. JDS MLAs will shift to Madikeri resort by 5 pm today. CM Kumaraswamy will hold a meeting with MLAs and travel to Madikeri after the meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X