ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಳ್ಳಿಗಳಿಗೆ ತೆರಳಿ ಜನಪದ ಅಧ್ಯಯನ; ಕಲಿಯುವಿಕೆಯ ಹೊಸ ಜಮಾನ

|
Google Oneindia Kannada News

ಮಡಿಕೇರಿ, ಡಿಸೆಂಬರ್ 14: ಹಳ್ಳಿಗಳಿಗೆ ತೆರಳಿ ಅಧ್ಯಯನ ಮಾಡುವ ಮೂಲಕ ಮರೆಯಾಗುತ್ತಿರುವ ಜಾನಪದಕ್ಕೆ ಮೆರಗು ನೀಡುವ ಪ್ರಯತ್ನವೊಂದು ಕೊಡಗು ಜಿಲ್ಲಾ ಜಾನಪದ ಪರಿಷತ್ತು ಹಮ್ಮಿಕೊಂಡಿರುವ ಜಾನಪದ ಅಧ್ಯಯನ ಪ್ರವಾಸದಿಂದ ಸಾಧ್ಯವಾಗಿದೆ.

ಜಾನಪದ ಅಧ್ಯಯನವೆಂದರೆ ಹಳ್ಳಿಗಾಡು ಪ್ರದೇಶದ ಜನರೊಂದಿಗೆ ಬೆರೆತು ಅಲ್ಲಿನ ನಡೆನುಡಿಗಳನ್ನು ನಮ್ಮ ಅನುಭವಕ್ಕೆ ಇಳಿಸಿಕೊಳ್ಳುವುದು ಎನ್ನಬಹುದು. ಇದೇ ತಿರುಳಿನೊಂದಿಗೆ ಈ ಬಾರಿ ಕೊಡಗಿನ ಬೆಟ್ಟಗುಡ್ಡಗಳ ಮಧ್ಯೆ ಹಸಿರಿನ ಐಸಿರಿಯಿಂದ ಮೆರೆಯುತ್ತಿರುವ ಬೆಟ್ಟಗೇರಿ ಸಮೀಪದ ಹಳ್ಳಿಯೊಂದಕ್ಕೆ ಹಮ್ಮಿಕೊಂಡಿದ್ದ ಜಾನಪದ ಅಧ್ಯಯನ ಪ್ರವಾಸ ಒಂದಷ್ಟು ವಿಶೇಷತೆಗಳಿಗೆ ಕಾರಣವಾಗಿತ್ತು.

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ರೆಕ್ಕೆ ಕಟ್ಟಿದ ಸರ್ಕಾರ! ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ರೆಕ್ಕೆ ಕಟ್ಟಿದ ಸರ್ಕಾರ!

ಬೆಟ್ಟಗೇರಿಯ ಸಿವೆಟ್ ಕ್ರೀಕ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವಿಧ ಮನರಂಜನಾ ಹಾಗೂ ಸಾಹಸಿ ಕ್ರೀಡೆಗಳ ಪರಿಚಯಿಸಲಾಗಿತ್ತು. ಮೊದಲನೆಯದಾಗಿ ಸುಮಾರು ನೂರು ಅಡಿ ಉದ್ದ, 25 ಅಡಿ ಆಳದ ಕೆರೆಯ ಮೇಲಿರುವ ಸರಪಳಿ ಸೇತುವೆಯನ್ನು ದಾಟುವ ರೋಮಾಂಚನಕಾರಿ ಕ್ರೀಡೆಯಾಗಿತ್ತು. ಅತ್ತಿತ್ತ ತೊಯ್ದಾಡುವ ಈ ಕಬ್ಬಿಣದ ಸರಪಳಿ ಸೇತುವೆಯ ಮೇಲೆ ಬಹಳ ಜಾಗರೂಕತೆಯಿಂದ ಹೆಜ್ಜೆಯನ್ನಿಕ್ಕಿ ನಮ್ಮ ಸಮತೋಲನವನ್ನು ಕಾಪಾಡಿಕೊಳ್ಳುವುದು ಒಂದು ಸಾಹಸವೇ ಆಗಿತ್ತು.

Janapada Study Tourism Opens Up Lot Of Dimensions In Madikeri

ಮರದ ಹಲಗೆಗಳ ಮೇಲೆ ನಡೆದು ಅನಂತರ ಟೈರ್ ನ ಒಳಗೆ ಪಾದವಿರಿಸಿ ನಿಗದಿತ ಗುರಿ ತಲುಪುವ ಮತ್ತೊಂದು ರೋಮಾಂಚನಕಾರಿ ಕ್ರೀಡೆಯಲ್ಲೂ ಜಾನಪದ ಬಳಗದ ತಂಡ ಆಸಕ್ತಿ ತೋರಿತ್ತು. ಇದರೊಂದಿಗೆ ಮೋಜಿನ ಕ್ರಿಕೆಟ್ ಆಟ, ಟೇಬಲ್ ಟೆನ್ನಿಸ್, ವಾಲಿಬಾಲ್, ಕೇರಮ್, ರೈಫಲ್ ಶೂಟಿಂಗ್, ಮುಂತಾದ ಹತ್ತು ಹಲವು ಆಟಗಳನ್ನು ಆಡಿದ್ದು ವಿಶೇಷವಾಗಿತ್ತು.

ಅತಿ ಕಡಿಮೆ ಖರ್ಚಿನಲ್ಲಿ ವಿಶ್ವ ಪರ್ಯಟನೆಗೆ ಶ್ರೀನಿಧಿ ದಿಕ್ಸೂಚಿ!ಅತಿ ಕಡಿಮೆ ಖರ್ಚಿನಲ್ಲಿ ವಿಶ್ವ ಪರ್ಯಟನೆಗೆ ಶ್ರೀನಿಧಿ ದಿಕ್ಸೂಚಿ!

ಇದದೊಂದಿಗೆ ಅಲ್ಲಿನ ಸಸ್ಯಕಾಶಿಯಲ್ಲಿ ಲಭ್ಯವಿರುವ ಎಲ್ಲ ಔಷಧೀಯ ಹಾಗೂ ಆಹಾರದ ಗಿಡಮೂಲಿಕೆಗಳನ್ನು ಸಂಗ್ರಹಿಸಲು ಆರಂಭಿಸಿ ಸುಮಾರು 45ಕ್ಕೂ ಹೆಚ್ಚಿನ ಸಸ್ಯದ ಎಲೆಗಳನ್ನು ಸಂಗ್ರಹಿಸಲಾಯಿತು. ಇದೆಲ್ಲದರ ನಡುವೆ ಚಿತ್ರಕಲಾವಿದ ಸತೀಶ್ ಅರವರ ಕುಂಚದ ಚಳಕಕ್ಕೆ ಮೋಹನ್‌ರವರು ಧ್ವನಿಯಾಗಿ ಎಲ್ಲ ಸದಸ್ಯರಿಂದರೂ ಪ್ರಶಂಸೆ ಪಡೆದರು.

Janapada Study Tourism Opens Up Lot Of Dimensions In Madikeri

ಈ ಪ್ರವಾಸದಲ್ಲಿ ಪತ್ರಕರ್ತರು, ಚಿತ್ರಕಲಾವಿದರು, ಗಾಯಕರು, ಸಿನಿಮಾ ತಾರೆ, ಕವಿ ಕವಯತ್ರಿಯರು, ವಕೀಲರು, ಶಿಕ್ಷಕ ವೃಂದ, ಕೃಷಿಕರು ಹೀಗೆ ಬಹುತೇಕ ಎಲ್ಲ ರಂಗದವರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

English summary
An attempt to cheer up the folk culture by visiting the villages is made possible by a Janapada study tourism organized by the Kodagu District Folk Council,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X