ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಡಿಕೇರಿಗೂ ಬರಲಿದೆ ಇಂದಿರಾ ಕ್ಯಾಂಟೀನ್!

By ಬಿ.ಎಂ.ಲವಕುಮಾರ್
|
Google Oneindia Kannada News

ಮಡಿಕೇರಿ ಜನವರಿ 25: ಕೊನೆಗೂ ಕೊಡಗಿನ ಮುಖ್ಯಪಟ್ಟಣ ಮಡಿಕೇರಿಯಲ್ಲಿ ಇಂದಿರಾ ಕ್ಯಾಂಟೀನ್ ಶೀಘ್ರವೇ ಆರಂಭವಾಗಲಿದ್ದು, ಈಗಾಗಲೇ ಸಿದ್ಧತಾ ಕಾರ್ಯಕ್ರಮಗಳು ಭರದಿಂದ ಸಾಗಿದೆ.

ಮಡಿಕೇರಿ ನಗರದ ನೂತನ ಖಾಸಗಿ ಬಸ್ ನಿಲ್ದಾಣ ಬಳಿ ಇಂದಿರಾ ಕ್ಯಾಂಟೀನ್ ನಿರ್ಮಾಣದ ಕಾಮಗಾರಿ ಭರದಿಂದ ಸಾಗುತ್ತಿವೆ. ಈಗಾಗಲೇ ಕಟ್ಟಡಕ್ಕೆ ಬೇಕಾದ ಎಲ್ಲ ಸಾಮಗ್ರಿಗಳು ಬಂದು ತಲುಪಿದ್ದು, ಈ ಪೈಕಿ ಎಲ್ಲವೂ ಸಿದ್ದ ವಸ್ತುಗಳಾಗಿದ್ದು, ಅದನ್ನು ಬಳಸಿಕೊಂಡು ಕಟ್ಟಡ ನಿರ್ಮಾಣ ಕಾರ್ಯ ಪ್ರಿಕಾಸ್ಟ್ ಕನ್‍ಸ್ಟ್ರಕ್ಷನ್ ತಂತ್ರಜ್ಞಾನ ಬಳಸಿ ನಡೆಯುತ್ತಿದೆ.

ಈಗಾಗಲೇ ಹೆಚ್ಚಿನ ಕಡೆಗಳಲ್ಲಿ ಕಟ್ಟಡಗನ್ನು ಇದೇ ಸಾಮಗ್ರಿ ಬಳಸಿ ನಿರ್ಮಿಸಲಾಗಿದ್ದು, ಇವು ಸುಮಾರು 60 ವರ್ಷ ಬಾಳಿಕೆ ಬರಲಿವೆ ಎನ್ನಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಫೆಬ್ರವರಿ ತಿಂಗಳೊಳಗೆ ಮಡಿಕೇರಿಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾಗಲಿದ್ದು, ಅದರ ಸೌಲಭ್ಯ ಜನ ಪಡೆಯಲಿದ್ದಾರೆ.

Indira canteen will start in Madikeri

ಕಟ್ಟಡ ನಿರ್ಮಾಣದ ಕುರಿತಂತೆ ಹೇಳುವುದಾದರೆ ಈಗಾಗಲೇ ಒಳಾಂಗಣ ಮತ್ತು ಹೊರಾಂಗಣದ ಕೆಲಸ ನಡೆದಿದ್ದು ಅಂತಿಮ ಕಾಮಗಾರಿ ನಡೆಯಬೇಕಾಗಿದೆ.

ಬೆಳಗಿನ ಉಪಾಹಾರದಲ್ಲಿ ಇಡ್ಲಿ ಸಾಂಬಾರ್, ರೈಸ್ ಬಾತ್, ಅವಲಕ್ಕಿ ಉಪ್ಪಿಟ್ಟು, ಖಾರಾ ಉಪ್ಪಿಟ್ಟು, ಇಡ್ಲಿ ಸಾಂಬಾರ್, ಚಿತ್ರಾನ್ನ, ಖಾರಾ ಪೊಂಗಲ್ ಮೊದಲಾದವು ಐದು ರೂಪಾಯಿಗೆ, ಅನ್ನ, ಸಾರು, ಉಪ್ಪಿನಕಾಯಿ, ಹಪ್ಪಳವಿರುವ ಮಧ್ಯಾಹ್ನದ ಊಟ, ಅನ್ನ ಸಾಂಬಾರು, ಉಪ್ಪಿನ ಕಾಯಿ, ಹಪ್ಪಳದ ರಾತ್ರಿಯ ಊಟ 10 ರೂ.ಗಳಿಗೆ ದೊರೆಯುವುದರಿಂದ ಇಲ್ಲಿನ ಜನಕ್ಕೆ ಅನುಕೂಲವಾಗುವುದು ಖಚಿತ.

Indira canteen will start in Madikeri

ಒಟ್ಟಾರೆ ಸರ್ಕಾರದ ಮಹತ್ವದ ಯೋಜನೆಯಾದ ಇಂದಿರಾ ಕ್ಯಾಂಟೀನ್ ಮಡಿಕೇರಿಗೂ ಬರುವುದರಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಒಂದಷ್ಟು ಉಪಯೋಗವಾಗುವುದರಲ್ಲಿ ಎರಡು ಮಾತಿಲ್ಲ.

English summary
Preparations have been started to open Indira Canteen in Madikeri. The canteen will come up near new bus stand and it is expected to start in February last week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X