ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳು : ಮಡಿಕೇರಿ-ಮಂಗಳೂರು ರಸ್ತೆ ದುರಸ್ಥಿ

|
Google Oneindia Kannada News

ಮಡಿಕೇರಿ, ಸೆಪ್ಟೆಂಬರ್ 17 : ಕೊಡಗು ಜಿಲ್ಲೆಯಲ್ಲಿನ ಭಾರಿ ಮಳೆ ಮತ್ತು ಗುಡ್ಡ ಕುಸಿತದಿಂದಾಗಿ ಕೋಟ್ಯಾಂತರ ರೂ. ನಷ್ಟವಾಗಿದೆ. ಅದರಲ್ಲೂ ಕೊಡಗು ಜಿಲ್ಲೆಯನ್ನು ಸಂಪರ್ಕಿಸುವ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಜಿಲ್ಲಾಡಳಿತ ರಸ್ತೆ ದುರಸ್ಥಿ ಕಾರ್ಯವನ್ನು ಕೈಗೊಂಡಿದೆ.

ಕೊಡಗು ಮತ್ತು ದಕ್ಷಿಣ ಕನ್ನಡವನ್ನು ಸಂಪರ್ಕಿಸುವ ಹೆದ್ದಾರಿ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಮಡಿಕೇರಿ-ಮಂಗಳೂರು ಸಂಪರ್ಕಿಸುವ ರಸ್ತೆ ಜೋಡುಪಾಲ ಬಳಿ ಸಂಭವಿಸಿದ ಭೂ ಕುಸಿತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದು, ಪುನರ್ ನಿರ್ಮಿಸಲಾಗುತ್ತಿದೆ.

ಕೊಡಗು ಜಿಲ್ಲೆಗೆ ಪ್ರವಾಸಿಗರ ಭೇಟಿಗೆ ಇದ್ದ ನಿರ್ಬಂಧ ತೆರವುಕೊಡಗು ಜಿಲ್ಲೆಗೆ ಪ್ರವಾಸಿಗರ ಭೇಟಿಗೆ ಇದ್ದ ನಿರ್ಬಂಧ ತೆರವು

ಮಡಿಕೇರಿ-ಮಂಗಳೂರು ಸಂಪರ್ಕಿಸುವ ಜೋಡುಪಾಲ-ಸುಳ್ಯ ರಸ್ತೆಯನ್ನು ಕೊಡಗು ಜಿಲ್ಲಾಡಳಿತ ತ್ವರಿತಗತಿಯಲ್ಲಿ ದುರಸ್ಥಿಗೊಳಿಸುತ್ತಿದೆ. ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಈ ರಸ್ತೆಯಲ್ಲಿ ಸಂಚಾರವನ್ನು ಕೊಡಗು ಜಿಲ್ಲಾಡಳಿತ ನಿರ್ಭಂದಿಸಿದೆ.

ಚಿತ್ರಗಳು : ಕೊಡಗಿನಲ್ಲಿ ಕೇಂದ್ರ ಅಧ್ಯಯನ ತಂಡದಿಂದ ನಷ್ಟ ಅಂದಾಜುಚಿತ್ರಗಳು : ಕೊಡಗಿನಲ್ಲಿ ಕೇಂದ್ರ ಅಧ್ಯಯನ ತಂಡದಿಂದ ನಷ್ಟ ಅಂದಾಜು

ಕೊಡಗಿನಲ್ಲಿ ಆಗಿರುವ ಹಾನಿಯ ಬಳಿಕ ಇಂಜಿನಿಯರ್ಸ್‌ಗಳ ಸಂಸ್ಥೆ ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ರಚನೆ ಮಾಡಬೇಕು ಎಂದು ಕೊಡಗು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ವರದಿ ನೀಡಿದೆ. ಈ ಮೂಲಕ ಜಿಲ್ಲೆಯಲ್ಲಿ ಸಂರಕ್ಷಣೆಗೆ ಆದ್ಯತೆ ನೀಡಬೇಕು, ಪ್ರತ್ಯೇಕ ನೀತಿ ಜಾರಿಗೆ ತರಬೇಕು ಎಂದು ಮನವಿ ಮಾಡಿದೆ.

ಕೊಡಗು : ನಿರಾಶ್ರಿತರ ತಾತ್ಕಾಲಿಕ ಶೆಡ್ ಹೀಗಿದೆ ನೋಡಿಕೊಡಗು : ನಿರಾಶ್ರಿತರ ತಾತ್ಕಾಲಿಕ ಶೆಡ್ ಹೀಗಿದೆ ನೋಡಿ

ಜನರ ಪರದಾಟ

ಜನರ ಪರದಾಟ

ಕಳೆದ ಒಂದು ತಿಂಗಳಿನಿಂದ ಮಂಗಳೂರು-ಮಡಿಕೇರಿ ನಡುವಿನ ಸಂಪರ್ಕ ಕಡಿತಗೊಂಡಿದೆ. 51 ಕಿ.ಮೀ. ಅಂತರದ ಮಂಗಳೂರು-ಮಡಿಕೇರಿ ಮಾರ್ಗದಲ್ಲಿ ಪ್ರತಿದಿನ ಸಾವಿರಾರು ಪ್ರಯಾಣಿಕರು ಸಂಚಾರ ನಡೆಸುತ್ತಿದ್ದರು. ಆದರೆ, ಈಗ ಹೆದ್ದಾರಿ ಬಂದ್ ಆಗಿರುವುದರಿಂದ ಜನರು ಹೆಚ್ಚು ದೂರ ಕ್ರಮಿಸಿ ಮಡಿಕೇರಿ ತಲುಪಬೇಕಾಗಿದೆ.

ಜೋಡುಪಾಲದಲ್ಲಿ ಭಾರಿ ಹಾನಿ

ಜೋಡುಪಾಲದಲ್ಲಿ ಭಾರಿ ಹಾನಿ

ಮಂಗಳೂರು-ಮಡಿಕೇರಿ ನಡುವಿನ ಸಂಪರ್ಕ ರಸ್ತೆಗೆ ಜೋಡುಪಾಲದ ಬಳಿ ಭಾರಿ ಹಾನಿಯಾಗಿದೆ. ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತ ರಸ್ತೆಯನ್ನು ದುರಸ್ಥಿ ಮಾಡುವ ಕಾರ್ಯವನ್ನು ಆರಂಭಿಸಿವೆ. ಕಾಮಗಾರಿ ಪ್ರಗತಿಯಲ್ಲಿದೆ. ಆದ್ದರಿಂದ ವಾಹನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಹತ್ತಾರು ಜೆಸಿಬಿಗಳಿಂದ ಕೆಲಸ

ಹತ್ತಾರು ಜೆಸಿಬಿಗಳಿಂದ ಕೆಲಸ

ಭೂ ಕುಸಿತ ಉಂಟಾಗಿದ್ದರಿಂದ ರಸ್ತೆ ಸಂಪೂರ್ಣವಾಗಿ ಹಾಳಾಗಿವೆ. ಹೆದ್ದಾರಿ ದುರಸ್ಥಿಗೆ ಕೆಲವು ದಿನಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಹತ್ತಾರು ಕಡೆಗಳಲ್ಲಿ ಭೂ ಕುಸಿತದಿಂದ ಕಂದಕ ನಿರ್ಮಾಣವಾಗಿದೆ. ಹೊಸದಾಗಿ ಮಣ್ಣನ್ನು ತೆಗೆದು, ರಸ್ತೆ ಅಕ್ಕ-ಪಕ್ಕ ಕುಸಿಯದಂತೆ ಮಣ್ಣು ತೆಗೆದು ರಸ್ತೆಯನ್ನು ಸರಿಪಡಿಸಲಾಗುತ್ತಿದೆ.

ಪರ್ಯಾಯ ಮಾರ್ಗಗಳು

ಪರ್ಯಾಯ ಮಾರ್ಗಗಳು

ಮಡಿಕೇರಿ-ಮಂಗಳೂರು ರಸ್ತೆಯ ದುರಸ್ಥಿ ಕಾರ್ಯ ಮುಗಿಯಲು ಹಲವು ದಿನಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಆದ್ದರಿಂದ, ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ.

English summary
Kodagu district administration began the Mangaluru-Madikeri road repair work. Road damaged near Jodupala due to heavy rain and land slide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X