ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತೆ ಬಂತು ಮಳೆಗಾಲ : ಕೊಡಗು ನಿರಾಶ್ರಿತರಿಗೆ ಮನೆ ಸಿಗುವುದೇ?

|
Google Oneindia Kannada News

ಮಳೆಗಾಲ ಆರಂಭವಾಗಲೂ ಒಂದು ತಿಂಗಳು ಬಾಕಿ ಇದೆ. ಕಳೆದ ವರ್ಷ ಮಳೆಗಾಲದಲ್ಲಿ ಮನೆ ಕಳೆದುಕೊಂಡು ಕೊಡಗಿನ ಜನರ ಪರಿಸ್ಥಿತಿ ಹೇಗಿದೆ?. ಭೂ ಕುಸಿತದಲ್ಲಿ ಮನೆ ಕಳೆದುಕೊಂಡವರಿಗೆ ಮನೆಯನ್ನು ಕಟ್ಟಿಕೊಡುವ ಕಾರ್ಯ ಪ್ರಗತಿಯಲ್ಲಿದೆ.

ಕೊಡಗು ಜಿಲ್ಲಾಡಳಿತ ಈ ಕುರಿತು ಮಾಹಿತಿ ನೀಡಿದೆ. ಏಪ್ರಿಲ್ ಅಂತ್ಯಕ್ಕೆ ಕರ್ಣಂಗೇರಿ ಗ್ರಾಮದಲ್ಲಿ 35 ಮನೆಗಳ ಕಾಮಗಾರಿ ಮುಗಿಯಲಿದೆ. ಮೇ ಅಂತ್ಯದೊಳಗೆ ಮದೆ, ಜಂಬೂರು ಗ್ರಾಮಗಳಲ್ಲಿನ 112 ಮನೆಗಳ ಕಾಮಗಾರಿ ಪೂರ್ಣಗೊಳ್ಳಲಿದೆ.

ಕೊಡಗು ಸಂತ್ರಸ್ತರಿಗೆ ಕಟ್ಟುತ್ತಿರುವ ಮನೆಗಳು ಹೇಗಿವೆ?ಕೊಡಗು ಸಂತ್ರಸ್ತರಿಗೆ ಕಟ್ಟುತ್ತಿರುವ ಮನೆಗಳು ಹೇಗಿವೆ?

ಮಳೆ, ಭೂ ಕುಸಿತದಲ್ಲಿ ಮನೆ ಕಳೆದುಕೊಂಡು ನಿರಾಶ್ರಿತರಾದವರಿಗೆ ಪುನರ್ವಸತಿ ಕಲ್ಪಿಸಲು ಕರ್ಣಂಗೇರಿ, ಬಿಳಿಗೇರಿ, ಗಾಳಿಬೀಡು, ಮದೆ ಹಾಗೂ ಜಂಬೂರು ಗ್ರಾಮದಲ್ಲಿ ಒಟ್ಟು 78.46 ಎಕರೆ ಜಾಗದಲ್ಲಿ 770 ನಿವೇಶಗಳನ್ನು ಗುರುತಿಸಲಾಗಿದೆ.

ಕೊಡಗು : ರೋಟರಿ ಸಂಸ್ಥೆಯಿಂದ ಮನೆ ನಿರ್ಮಾಣ ಕಾರ್ಯ ಆರಂಭಕೊಡಗು : ರೋಟರಿ ಸಂಸ್ಥೆಯಿಂದ ಮನೆ ನಿರ್ಮಾಣ ಕಾರ್ಯ ಆರಂಭ

ಮೊದಲ ಹಂತದಲ್ಲಿ ಪೂರ್ಣ ಹಾನಿಯಾದ 417 ಕುಟುಂಬಗಳ ಪೈಕಿ 53 ನಿರಾಶ್ರಿತ ಕುಟುಂಬಗಳಿಗೆ ಸ್ವಂತ ಜಾಗದಲ್ಲಿ ಪುನರ್ವಸತಿ ಕಲ್ಪಿಸಿಕೊಡುವುದಾಗಿ ಇನ್ಫೋಸಿಸ್ ಸಂಸ್ಥೆ ಘೋಷಣಾ ಪತ್ರ ನೀಡಿದೆ. ಸೋಮವಾರ ಪೇಟೆ ತಾಲೂಕಿನ ಜಂಬೂರು ಗ್ರಾಮದಲ್ಲಿ 200 ಮನೆಗಳನ್ನು ನಿರ್ಮಿಸಲು ಒಪ್ಪಿಗೆ ನೀಡಲಾಗಿದ್ದು, ಕಾಮಗಾರಿ ನಡೆಯುತ್ತಿದೆ.

ಕೊಡಗಿನವರನ್ನು ಕಾಡುತ್ತಿದೆ ಹತ್ತಾರು ಸಮಸ್ಯೆಗಳುಕೊಡಗಿನವರನ್ನು ಕಾಡುತ್ತಿದೆ ಹತ್ತಾರು ಸಮಸ್ಯೆಗಳು

ಸುಸಜ್ಜಿತ ಬಡಾವಣೆ ನಿರ್ಮಾಣ

ಸುಸಜ್ಜಿತ ಬಡಾವಣೆ ನಿರ್ಮಾಣ

ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಜನರ ಪುನರ್ವಸತಿಗಾಗಿ ಸೋಮವಾರಪೇಟೆ ತಾಲೂಕಿನ ಮಾದಾಪುರ (ಜಂಬೂರು ಗ್ರಾಮ) ದಲ್ಲಿ 50 ಎಕರೆ ವಿಸ್ತೀರ್ಣದಲ್ಲಿ ಸುಸಜ್ಜಿತವಾದ ಬಡಾವಣೆ ಹಾಗೂ ಮನೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಶೀಘ್ರವೇ ಕಾಮಗಾರಿ ಪೂರ್ಣ

ಶೀಘ್ರವೇ ಕಾಮಗಾರಿ ಪೂರ್ಣ

ಕಳೆದ ವರ್ಷದ ಮಳೆಗಾಲದಲ್ಲಿ ಮನೆ ಕಳೆದುಕೊಂಡ ಜನರ ಪುನರ್ವಸತಿಗಾಗಿ ಮಡಿಕೇರಿ ತಾಲೂಕಿನ ಕರ್ಣಂಗೇರಿ ಗ್ರಾಮದಲ್ಲಿ ಮನೆ ನಿರ್ಮಾಣ ಕಾರ್ಯ ತ್ವರಿತ ಗತಿಯಲ್ಲಿ ಸಾಗುತ್ತಿದ್ದು, ಶೀಘ್ರವೇ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.

ಎಲ್ಲಾ ಕುಟುಂಬಗಳಿಗೂ ಮನೆ

ಎಲ್ಲಾ ಕುಟುಂಬಗಳಿಗೂ ಮನೆ

ಕಳೆದ ವರ್ಷ ಕೊಡಗಿನಲ್ಲಿ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಬಾರಿ ಮಳೆಯಾಗಿತ್ತು. ಗುಡ್ಡಗಳು ಕುಸಿದು ಬಿದ್ದಿದ್ದವು. 840 ಕುಟುಂಬಗಳು ಮನೆಯನ್ನು ಕಳೆದುಕೊಂಡಿದ್ದವು. ಈ ವರ್ಷದ ಮಳೆಗಾಲದೊಳಗೆ ಮನೆಯನ್ನು ಕಟ್ಟಿಕೊಡುವ ಸಂಕಲ್ಪವನ್ನು ಜಿಲ್ಲಾಡಳಿತ ಮಾಡಿದೆ. ಎಲ್ಲಾ ಕುಟುಂಬಕ್ಕೂ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗುತ್ತದೆ.

ಎಲ್ಲಿ, ಎಷ್ಟು ಮನೆ ನಿರ್ಮಾಣ

ಎಲ್ಲಿ, ಎಷ್ಟು ಮನೆ ನಿರ್ಮಾಣ

840 ಕುಟುಂಬಗಳ ಪೈಕಿ 770 ಮನೆಗಳನ್ನು ತುರ್ತಾಗಿ ನಿರ್ಮಾಣ ಮಾಡಲಾಗುತ್ತಿದೆ. ಕರ್ಣಂಗೇರಿಯಲ್ಲಿ 40, ಬಿಳಿಗೇರಿಯಲ್ಲಿ 30, ಗಾಳಿಬೀಡುವಿನಲ್ಲಿ 125, ಮದೆ ಗ್ರಾಮದಲ್ಲಿ 175 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

English summary
433 House construction under progress in Madikeri with in a month construction work will completed. 770 site identified for construction of house for the victims who lost house in Kodadu floods 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X