ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನಲ್ಲಿ ಕೊರೊನಾ ಪತ್ತೆ; ಅಗತ್ಯ ವಸ್ತು ವಿತರಿಸಿದ ಜಿಲ್ಲಾಡಳಿತ

|
Google Oneindia Kannada News

ಮಡಿಕೇರಿ, ಮಾರ್ಚ್ 21 : ಕೊಡಗು ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಸದರಿ ವ್ಯಕ್ತಿಯು ವಾಸವಾಗಿದ್ದ ಕೇತುಮೊಟ್ಟೆ ಪ್ರದೇಶದ ಸುತ್ತ 500 ಮೀಟರ್ ಏರಿಯಾವನ್ನು ಕಂಟೈನ್ ಮೆಂಟ್ ಪ್ರದೇಶ ಎಂದು ಗುರುತಿಸಲಾಗಿದೆ.

ಈ ಭಾಗದಲ್ಲಿರುವ 75 ಮನೆಗಳ ನಿವಾಸಿಗಳಿಗೆ ದಿನ ಬಳಕೆಯ ಆಹಾರ ಪದಾರ್ಥ ಮತ್ತು ದಿನ ನಿತ್ಯದ ಶುಚಿತ್ವಕ್ಕೆ ಬೇಕಾದ ವಸ್ತುಗಳನ್ನು ಜಿಲ್ಲಾಡಳಿತದಿಂದ ವಿತರಣೆ ಮಾಡಲಾಗುತ್ತದೆ. ಜನರ ಮನೆಗೆ ವಸ್ತುಗಳನ್ನು ನೀಡಲಾಗುತ್ತಿದ್ದು, ಇದನ್ನು ಮುಂದಿನ 14 ದಿನಗಳ ತನಕ ನೀಡಲಾಗುತ್ತದೆ.

ಕೊಳೆತು ಹೋಗುವಂತಹ ವಸ್ತುಗಳಾದ ತರಕಾರಿ ಮುಂತಾದವುಗಳನ್ನು ಪ್ರತಿ 2 ದಿನಗಳಿಗೊಮ್ಮೆ ಸರ್ಕಾರಿ ಸಿಬ್ಬಂದಿಗಳಿಂದಲೇ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಮನೆಯಲ್ಲಿರುವ ಎಲ್ಲರೂ ಅಲ್ಲಿಯೇ ಸುರಕ್ಷಿತವಾಗಿರಲು ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತದಿಂದ ಕೈಗೊಳ್ಳಲಾಗಿದೆ.

Home Quarantine Kodagu District Administration distributing Items

ಬೇರೆ ರಾಜ್ಯಗಳ ವಾಹನ ಇಲ್ಲ : ಕೊಡಗು ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ತಡೆಯಲು ಸಾರ್ವಜನಿಕ ಹಿತಾಸಕ್ತಿಯಿಂದ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಕೇರಳ ರಾಜ್ಯದ ಕಾಸರಗೋಡು, ಕಣ್ಣೂರು ಮತ್ತು ವಯನಾಡು ಜಿಲ್ಲೆಗಳ ರಸ್ತೆಯನ್ನು ಬಂದ್ ಮಾಡಲಾಗಿದೆ.

ಅವಶ್ಯಕ ವಸ್ತು/ಸೇವೆಗಳಿಗೆ ಹೊರತುಪಡಿಸಿ ಉಳಿದ ವಾಹನಗಳು ಜಿಲ್ಲೆಯನ್ನು ಪ್ರವೇಶಿಸುವಂತಿಲ್ಲ. ಸದರಿ ಜಿಲ್ಲೆಗಳಿಂದ ಕೊಡಗು ಜಿಲ್ಲೆಗೆ ಅಥವಾ ಕೊಡಗು ಜಿಲ್ಲೆಯಿಂದ ಸದರಿ ಜಿಲ್ಲೆಗಳಿಗೆ ಕೊಡಗು ಜಿಲ್ಲೆಯ ಚೆಕ್ ಪೋಸ್ಟ್ ಮೂಲಕ ತೆರಳುವ ಎಲ್ಲಾ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

Home Quarantine Kodagu District Administration distributing Items

ಯಾವುದಾದರೂ ಕಾರ್ಯನಿಮಿತ್ತ ಕೊಡಗು ಜಿಲ್ಲೆಯೊಳಗೆ ಅಥವಾ ಕೊಡಗು ಜಿಲ್ಲೆಯಿಂದ ಕೇರಳ ರಾಜ್ಯದ ಜಿಲ್ಲೆಯೊಳಗೆ ವಾಹನಗಳು ತೆರಳಿದ್ದರೆ ಸದರಿ ವಾಹನಗಳಿಗೂ ಸಹ ನಿರ್ಬಂಧಿತ ಅವಧಿ ಮುಗಿಯುವವರೆಗೆ ಅಂತರ ಜಿಲ್ಲೆಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

English summary
Home quarantine announced in Kodagu after 1 coronavirus tested positive. Essentials items distributing form Kodagu district administration for the people who living in the area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X