ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏಪ್ರಿಲ್ 15 ರಿಂದ ಕೊಡಗಿನಲ್ಲಿ ಕೌಟುಂಬಿಕ ಹಾಕಿ ಉತ್ಸವ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಫೆಬ್ರವರಿ 23: ಕಳೆದ ಎರಡು ದಶಕಗಳಿಂದ ಅದ್ಧೂರಿಯಾಗಿ ನಡೆದುಕೊಂಡು ಬರುತ್ತಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವ ಈ ಬಾರಿ ಏ. 15ರಂದು ನಾಪೋಕ್ಲು ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದ್ದು, ಹಾಕಿ ಉತ್ಸವದ ಸಾರಥ್ಯವನ್ನು ಈ ಬಾರಿ ಕುಲ್ಲೇಟಿರ ಕುಟುಂಬವು ವಹಿಸಿಕೊಂಡಿದೆ.

ಈ ಬಾರಿ ನಡೆಯುತ್ತಿರುವುದು 22ನೇ ವರ್ಷದ ಹಾಕಿಉತ್ಸವ. ಸುಮಾರು 1.50 ಕೋಟಿ ವೆಚ್ಚದಲ್ಲಿ ನಡೆಸಲು ಈಗಾಗಲೇ ಕುಟುಂಬಸ್ಥರು ಸಿದ್ಧಗೊಂಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಕುಲ್ಲೇಟಿರ ಹಾಕಿ ನಮ್ಮೆ ಸಮಿತಿ ಅಧ್ಯಕ್ಷ ಕುಲ್ಲೇಟಿರ ಶಂಭು ಮಂದಪ್ಪ ಅವರು ಹಾಕಿ ಉತ್ಸವಕ್ಕೆ ಏ. 15ರಂದು ಬೆಳಿಗ್ಗೆ 10.30 ಗಂಟೆಗೆ ಚಾಲನೆ ನೀಡಲಾಗುವುದಾಗಿ ತಿಳಿಸಿದರು. ಈ ಬಾರಿ ಹಾಕಿ ನಮ್ಮೆಯನ್ನು ಸರಳವಾಗಿ ಆಚರಿಸುವದರ ಮೂಲಕ ಖರ್ಚು ವೆಚ್ಚವನ್ನು ಕಡಿಮೆಗೊಳಿಸಿ ಮಾದರಿ ಹಾಕಿ ನಮ್ಮೆ ಆಚರಿಸಲು ಕ್ರಮಕೈಗೊಳ್ಳಲಾಗುವುದಾಗಿಯೂ ಹೇಳಿದ್ದಾರೆ.

Hockey tournament in Kodagu district will be taking place from April 15

ಮೇ 13, ಫೈನಲ್ ಪಂದ್ಯಾಟ
ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ ಮಾತನಾಡಿ ಅಂತಿಮ ಪಂದ್ಯಾಟ ಮೇ .13ರ ಬೆಳಿಗ್ಗೆ 10.30 ಗಂಟೆಗೆ ನಡೆಯಲಿದೆ. ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣೆಯಂದು ನಡೆಯಲಿರುವ ಪಂದ್ಯಾಟಗಳಲ್ಲಿ ಬದಲಾವಣೆ ಮಾಡಲಾಗುವದು ಎಂದು ಹೇಳಿದರು. ಈ ಉತ್ಸವಕ್ಕೆ ಸಂಸದ ಪ್ರತಾಪ್ ಸಿಂಹ ಅವರು ರೂ. 20 ಲಕ್ಷ ಮಂಜೂರು ಮಾಡಿದ್ದು, ಒಂದು ವಾರದಲ್ಲಿ ಹಣ ಕೈ ಸೇರಲಿದೆ. ರಾಜ್ಯ ಸರಕಾರಕ್ಕೆ 50 ಲಕ್ಷ ರೂ. ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಕಾರ್ಯ ಪ್ರಗತಿಯಲ್ಲಿದೆ ಎಂದರು. ದಾಖಲೆಯ 333 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲು ಪ್ರಯತ್ನಗಳು ನಡೆಯುತ್ತಿದೆ. ಮಾರ್ಚ್ 1 ರಿಂದ ತಂಡಗಳ ನೋಂದಾವಣೆ ಆರಂಭಗೊಳ್ಳಲಿದೆ. ಮುಂದಿನ ಹತ್ತು ದಿನಗಳಲ್ಲಿ ನಾಪೋಕ್ಲು ಪಟ್ಟಣದಲ್ಲಿ ಕಚೇರಿ ತೆರೆಯಲಾಗುವದು ಎಂದು ಮಾಹಿತಿ ನೀಡಿದರು.

Hockey tournament in Kodagu district will be taking place from April 15

ಮಿನಿಗ್ಯಾಲರಿ ನಿರ್ಮಾಣಕ್ಕೆ ಚಿಂತನೆ
ಉತ್ಸವ ಸಮಿತಿ ಸಂಚಾಲಕ ಕುಲ್ಲೇಟಿರ ಅರುಣ್ ಬೇಬ ಮಾತನಾಡಿ 147 ವರ್ಷಗಳ ಇತಿಹಾಸವಿರುವ ನಾಪೋಕ್ಲು ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಂಸದರ 20 ಲಕ್ಷ ರೂ. ಅನುದಾನದಲ್ಲಿ ಮಿನಿ ಗ್ಯಾಲರಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಚೆರಿಯಪರಂಬು ಕೆ.ಎಸ್.ಜನರಲ್ ತಿಮ್ಮಯ್ಯ ಕ್ರೀಡಾಂಗಣಕ್ಕೆ ಮೂರು ಲಕ್ಷ ರೂ. ಅನುದಾನ ನೀಡಿದ್ದು ಕಾಮಗಾರಿ ಅಂತಿಮ ಹಂತದಲ್ಲಿದೆ ಎಂದರು.

ಈ ಸಂಬಂಧ ನಡೆದ ಸುದ್ದಿಗೋಷ್ಠಿಯಲ್ಲಿ ಕುಲ್ಲೇಟಿರ ಪಟ್ಟೆದಾರ ಮತ್ತು ಸಲಹಾ ಸಮಿತಿ ಹಿರಿಯ ಸದಸ್ಯರಾದ ಕುಲ್ಲೇಟಿರ ಮಾದಪ್ಪ, ಕೆ.ಕೆ.ಗುರುವಪ್ಪ, ಕೆ.ಸಿ.ಮುತ್ತಪ್ಪ. ಹಾಕಿ ಸಮಿತಿ ಸದಸ್ಯರಾದ ಶಂಕರಿ ಚಂಗಪ್ಪ, ನಂದಾ ನಾಚಪ್ಪ, ದೇವಿ ದೇವಯ್ಯ, ರಾಜೇಶ್, ಸುರೇಶ್, ಲೊಕೇಶ್, ರಾಜಾ, ಬಿನ್ನಿ ಬೋಪಣ್ಣ ಇದ್ದರು.

English summary
Hockey tournament in Kodagu district will be taking place from April 15 in General K S Thimmaiah stadium in Kodagu. Final match will be taking place on May 13th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X