ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು ಜಿಲ್ಲೆಯಲ್ಲಿ ಮಳೆ ಅಬ್ಬರ: ಗುಡ್ಡ ಕುಸಿತ, ಆರೆಂಜ್ ಅಲರ್ಟ್‌

|
Google Oneindia Kannada News

ಮಡಿಕೇರಿ, ಆಗಸ್ಟ್‌ 05: ಕೊಡಗು ಜಿಲ್ಲೆಯಲ್ಲಿ ಮತ್ತೆ ವರುಣನ ಅಬ್ಬರ ಮುಂದುವರಿದಿದೆ. ಜುಲೈನಲ್ಲಿ ಮೊದಲೆರಡು ವಾರ ಅಬ್ಬರಿಸಿದ್ದ ಮಳೆ ಜನಜೀವನವನ್ನು ಅಸ್ತವ್ಯಸ್ಥಗೊಳಿಸಿತ್ತು. ಇದೀಗ ಮತ್ತೆ ಮಳೆ ಮುಂದುವರಿದಿದ್ದು ಪಯಸ್ವಿನಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಆಗಸ್ಟ್ 1 ರಿಂದಲೂ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಆಗಸ್ಟ್ 1 ರಂದು 38.20 ಮಿ.ಮೀ., 2 ರಂದು 37.94, 3 ರಂದು 58.26 ಮತ್ತು 4 ರಂದು 36.26 ಮಿ. ಮೀ. ರಷ್ಟು ಮಳೆಯಾಗಿದೆ. ಚೆಂಬು, ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಹಾನಿ ಉಂಟಾಗಿದೆ.

ರಸ್ತೆ ಮೇಲೆ ಬಿದ್ದ ಬಂಡೆಕಲ್ಲು: ಬದರಿನಾಥ್‌ ಹೆದ್ದಾರಿ ಬಂದ್‌ರಸ್ತೆ ಮೇಲೆ ಬಿದ್ದ ಬಂಡೆಕಲ್ಲು: ಬದರಿನಾಥ್‌ ಹೆದ್ದಾರಿ ಬಂದ್‌

ಜಿಲ್ಲೆಯ ಸಂಪಾಜೆ, ಚೆಂಬು, ಕರಿಕೆ, ಕೊಯನಾಡು ಭಾಗದಲ್ಲಿ ವ್ಯಾಪಕ ಮಳೆಯಿಂದಾಗಿ ಅಲ್ಲಲ್ಲಿ ಮೂಲ ಸೌಕರ್ಯಕ್ಕೆ ಹಾನಿಯಾಗಿದೆ. ದೇವರಕೊಲ್ಲಿ ಬಳಿ ಮಡಿಕೇರಿ-ಸಂಪಾಜೆ ಮಾರ್ಗದ ರಸ್ತೆ ಬಿರುಕು ಬಿಟ್ಟಿದೆ. ಕೊಯನಾಡು ಬಳಿ ಸೇತುವೆಗೆ ಹಾನಿಯಾಗಿರುವುದು. ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಚೆಂಬು ಗ್ರಾಮ ಬಳಿಯ ಮರ್ಪಡ್ಕ ಸೇತುವೆ ಕೊಚ್ಚಿ ಹೋಗಿದೆ.

Hillock, Landslides in Kodagu District due to Heavy Rainfall

ಭಾಗಮಂಡಲ-ಕರಿಕೆ ರಸ್ತೆ ಮಾರ್ಗದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಭಾಗಮಂಡಲ-ನಾಪೋಕ್ಲು ರಸ್ತೆಯಲ್ಲಿ ನೀರು ಹರಿಯುತ್ತಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ.

4 ದಿನ ಬೆಂಗಳೂರಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ದಾಖಲು!4 ದಿನ ಬೆಂಗಳೂರಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ದಾಖಲು!

ಕಳೆದ ಮೂರು ದಿನಗಳಿಂದ ಬಿಡುವು ನೀಡದೇ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮಳೆಯಿಂದ ಚೆಂಬು ಗ್ರಾಮದಲ್ಲಿ ಜಾನುವಾರುಗಳಿಗೆ ಆಹಾರದ ಕೊರತೆ ಎದುರಾಗಿದೆ. ಮಳೆಯ ಕಾರಣ ರೈತರು ಮನೆಯಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ, ಹಾಗಾಗಿ ಜಿಲ್ಲಾಡಳಿತವೇ ಜಾನುವಾರುಗಳಿಗೆ ಮೇವು ನೀಡುವ ಕಾರ್ಯ ಆರಂಭಿಸಿದೆ.

ಆರೆಂಜ್ ಅಲರ್ಟ್‌; ಜಿಲ್ಲೆಯಲ್ಲಿ ಶುಕ್ರವಾರವೂ ಮಳೆಯಾಗುತ್ತಿದೆ. ಜೊತೆಗೆ ಗಾಳಿಯೂ ಬಿರುಸಿನಿಂದ ಬೀಸುತ್ತಿರುವ ಹಿನ್ನಲೆಯಲ್ಲಿ ಆರೆಂಜ್ ಅಲರ್ಟ್‌ ಘೋಷಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ವಿಪತ್ತು ನಿರ್ವಹಣಾ ತಂಡ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸನ್ನದ್ದವಾಗಿದೆ.

Hillock, Landslides in Kodagu District due to Heavy Rainfall

ಕೊಡಗು ಜಿಲ್ಲೆಯ ಮಳೆ ವಿವರ; ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 72.94 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ 102.60 ಮಿ.ಮೀ., ವಿರಾಜಪೇಟೆ ತಾಲ್ಲೂಕಿನಲ್ಲಿ 62.78 ಮಿ.ಮೀ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 53.43 ಮಿ.ಮೀ. ಮಳೆಯಾಗಿದೆ.

ಹಾರಂಗಿ ಜಲಾಶಯದ ನೀರಿನ ಮಟ್ಟ; ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಯಿದ್ದು, ಇಂದಿನ ನೀರಿನ ಮಟ್ಟ 2856.28 ಅಡಿ ಇದೆ. ಕಳೆದ ವರ್ಷ ಇದೇ ದಿನ 2855.69 ಅಡಿ ನೀರು ತುಂಬಿತ್ತು. ಇಂದಿನ ನೀರಿನ ಒಳಹರಿವು 3619 ಕ್ಯೂಸೆಕ್ ಇದ್ದರೆ, 5125 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ನಾಲೆಗೆ 70 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.

English summary
The rain continued to lash across the Kodagu district and the rainfall intensity has increased over the last 3 days. The Karnataka State Natural Disasters Monitoring Committee (KSNDMC) has declared an Orange Alert in Kodagu
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X