ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು ಜಿಲ್ಲೆಯ ಹೋಬಳಿವಾರು ಮಳೆ ವಿವರ ಇಲ್ಲಿದೆ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಜೂನ್‌ 19: ಕೊಡಗು ಜಿಲ್ಲೆಯಲ್ಲಿ ಕಳೆದ ವಾರದಿಂದ ಮಳೆ ಸುರಿಯುತ್ತಿದ್ದು, ಶುಕ್ರವಾರ ಬಿರುಸು ಪಡೆದಿದ್ದ ಮಳೆ ಶನಿವಾರ ಕಡಿಮೆ ಆಗಿದೆ. ಅನೇಕ ಕಡೆಗಳಲ್ಲಿ ಮರಗಳು ನೆಲಕ್ಕೆ ಉರುಳಿದ್ದು, ಕಾವೇರಿ ನದಿ ನೀರಿನ ಮಟ್ಟ ಏರಿಕೆಯಾಗಿದೆ.

ಶನಿವಾರ ಸಂಜೆವರೆಗೂ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆಯಾಗಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ 115.6 ಮಿಲಿ ಮೀಟರ್​ನಿಂದ 204 ಮಿಲಿ ಮೀಟರ್ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಿದೆ.

ಮಳೆ ಅಬ್ಬರಕ್ಕೆ ತ್ರಿವೇಣಿ ಸಂಗಮ ಜಲಾವೃತ: ಭತ್ತದ ಕೃಷಿ ಚಟುವಟಿಕೆ ಶುರುಮಳೆ ಅಬ್ಬರಕ್ಕೆ ತ್ರಿವೇಣಿ ಸಂಗಮ ಜಲಾವೃತ: ಭತ್ತದ ಕೃಷಿ ಚಟುವಟಿಕೆ ಶುರು

ತಲಕಾವೇರಿ, ಭಾಗಮಂಡಲದಲ್ಲಿ ಮಳೆ ಹೆಚ್ಚಾಗಿದ್ದು, ತ್ರಿವೇಣಿ ಸಂಗಮದಲ್ಲಿ ನೀರು ಹೆಚ್ಚಾಗಿ ರಸ್ತೆಯ ಮಟ್ಟಕ್ಕೆ ಹರಿಯುತ್ತಿದೆ. ನಾಪೋಕ್ಲು- ಬಲಮುರಿನಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಅಲ್ಲದೆ ಮಳೆಯ ಆರ್ಭಟಕ್ಕೆ ಅಲ್ಲಲ್ಲಿ ಅವಾಂತರ ಸೃಷ್ಟಿಯಾಗಿದೆ. ದೊಡ್ಡ ದೊಡ್ಡ ಮರಗಳು ನೆಲಕ್ಕುರುಳುತ್ತಿದ್ದು, ರಸ್ತೆ ಸಂಚಾರ ಅಸ್ತವ್ಯಸ್ತವಾಗುತ್ತಿದೆ.

ಸೇತುವೆ ಬಳಿ ಜೀಪ್​ವೊಂದು ನದಿಗೆ ಉರುಳಿದೆ

ಸೇತುವೆ ಬಳಿ ಜೀಪ್​ವೊಂದು ನದಿಗೆ ಉರುಳಿದೆ

ಮಡಿಕೇರಿ ತಾಲ್ಲೂಕಿನ ಮದೆನಾಡು ಗ್ರಾಮದಲ್ಲಿ ಮಳೆ, ಗಾಳಿಯಿಂದ ವಾಸದ ಮನೆಗೆ ಹಾನಿಯಾಗಿದೆ. ಕೆಲವು ಕಡೆ ರಸ್ತೆ ಬಿರುಕು ಬಿಟ್ಟಿದ್ದು, ಟಾರ್ಪಲ್ ಹೊದಿಸಲಾಗಿದೆ. ವಿರಾಜಪೇಟೆ ತಾಲೂಕಿನ ಹುದಿಕೇರಿ ಬಳಿ ಶುಕ್ರವಾರ ಸಂಜೆ ಸೇತುವೆ ಬಳಿ ಜೀಪ್​ವೊಂದು ನದಿಗೆ ಉರುಳಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಜೀಪು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದೆ. ಮಳೆ ಹೆಚ್ಚಾದ ಕಾರಣ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಜೀಪ್‌ನ್ನು ಸ್ಥಳೀಯರು ಬೇರೆ ವಾಹನದ ಸಹಾಯದಿಂದ ಮೇಲಕ್ಕೆ ಎತ್ತಿದ್ದಾರೆ.

ವಿದ್ಯುತ್‌ ಸಂಪರ್ಕ ಕಡಿತ

ವಿದ್ಯುತ್‌ ಸಂಪರ್ಕ ಕಡಿತ

ವೀರಾಜಪೇಟೆ ಭಾಗದಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು, ಹೆಗ್ಗಳ ಗ್ರಾಮದ ರಾಮನಗರದ ಮಾಯಿಲಮಕ್ಕಿ ಪ್ರದೇಶದಲ್ಲಿ ಸಣ್ಣ ಗುಡ್ಡಗಳು ಕುಸಿಯುತ್ತಿವೆ. ಸಹಾಯಕ ನೋಡಲ್ ಅಧಿಕಾರಿ ಅವರೊಂದಿಗೆ ಕಂದಾಯ ಅಧಿಕಾರಿ ಹರೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸದ್ಯ ಅಪಾಯ ಸ್ಥಳಗಳನ್ನು ಗುರುತು ಮಾಡಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ನೋಟಿಸ್ ನೀಡಲಾಗಿದೆ.

ಇನ್ನು ಜಿಲ್ಲೆಯಲ್ಲಿ ಅನಾಹುತಗಳು ಸಂಭವಿಸಿದರೆ ಜನರ ರಕ್ಷಣೆಗಾಗಿ ಎನ್​​ಡಿಆರ್‌ಎಫ್ ತಂಡವನ್ನು ನಿಯೋಜನೆ ಮಾಡಲಾಗಿದೆ.

ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್‌ ಕಂಬಗಳ ಮೇಲೆ ಮರ ಬಿದ್ದಿದ್ದು, ಗ್ರಾಮೀಣ ಭಾಗದಲ್ಲಿ ಮಳೆಯೂ ಬೀಳುತ್ತಿರುವುದರಿಂದ ಕಂಬ ಬದಲಾವಣೆಗೆ ಸಮಯ ತಗುಲುತ್ತಿದೆ ಎಂದು ಸೆಸ್ಕ್ ಅಧಿಕಾರಿಗಳು ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ಮಳೆ ವಿವರ(ಮಿ.ಮೀ ಗಳಲ್ಲಿ)

ಕೊಡಗು ಜಿಲ್ಲೆಯ ಮಳೆ ವಿವರ(ಮಿ.ಮೀ ಗಳಲ್ಲಿ)

ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 46.77 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 64.32 ಮಿ.ಮೀ ಮಳೆಯಾಗಿದೆ. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ 60.45 ಮಿ.ಮೀ ಮಳೆಯಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ 15.53 ಮಿ.ಮೀ ಮಳೆಯಾಗಿದೆ.

ಹೋಬಳಿವಾರು ದಾಖಲಾಗಿರುವ ಮಳೆ ವಿವರ

ಹೋಬಳಿವಾರು ದಾಖಲಾಗಿರುವ ಮಳೆ ವಿವರ

ಮಡಿಕೇರಿ- ಕಸಬಾ 32.4, ಸಂಪಾಜೆ 48.5, ನಾಪೋಕ್ಲು 65.2, ಭಾಗಮಂಡಲ 111.2, ವಿರಾಜಪೇಟೆ ಕಸಬಾ 99, ಹುದಿಕೇರಿ 48.4, ಶ್ರೀಮಂಗಲ 46.6, ಪೊನ್ನಂಪೇಟೆ 77.2, ಅಮ್ಮತ್ತಿ 46.5, ಬಾಳೆಲೆ 45, ಸೋಮವಾರಪೇಟೆ ಕಸಬಾ 10.4, ಶನಿವಾರಸಂತೆ 14, ಶಾಂತಳ್ಳಿ 35.2, ಕೊಡ್ಲಿಪೇಟೆ 16, ಕುಶಾಲನಗರ 2.4, ಸುಂಟಿಕೊಪ್ಪ 15.2 ಮಿ.ಮೀ. ಮಳೆಯಾಗಿದೆ.

ಹಾರಂಗಿ ಜಲಾಶಯದ ನೀರಿನ ಮಟ್ಟ

ಹಾರಂಗಿ ಜಲಾಶಯದ ನೀರಿನ ಮಟ್ಟ

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2834.68 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 8.4 ಮಿ.ಮೀ. ಇಂದಿನ ನೀರಿನ ಒಳಹರಿವು 1265 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 40 ಕ್ಯುಸೆಕ್. ನಾಲೆಗೆ 40 ಕ್ಯುಸೆಕ್. ಇಂದಿನ ನೀರಿನ ಹೊರ ಹರಿವು 80 ಕ್ಯುಸೆಕ್.

Recommended Video

ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದ Team India | Oneindia Kannada

English summary
In the Kodagu district has been recieving rain since last week and the Cauvery river water level has risen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X