• search
  • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊಡಗಿನಲ್ಲಿ ಜನರ ಬಳಿಕ ಜಾನುವಾರುಗಳಿಗೆ ಹೆಲ್ಪ್ ಲೈನ್

By Nayana
|

ಕೊಡಗು, ಆಗಸ್ಟ್ 24: ಕೊಡಗಿನಲ್ಲಿ ಉಂಟಾದ ಭಾರಿ ಪ್ರವಾಹದಿಂದ ಮನುಷ್ಯರಷ್ಟೇ ಅಲ್ಲದೆ ಪ್ರಾಣಿಗಳು ಕೂಡ ಸಂಕಷ್ಟಕ್ಕೀಡಾಗಿದೆ ಹಾಗಾಗಿ ಪ್ರಾಣಿಗಳಿಗಾಗಿಯೇ ಸಹಾಯವಾಣಿಯನ್ನು ಆರಂಭಿಸಲಾಗಿದೆ.

ಭೂ ಕುಸಿತದಿಂದಾಗಿ ಜಾನುವಾರುಗಳು, ನಾಯಿ, ಇತರೆ ಸಾಕು ಪ್ರಾಣಿಗಳು ತಮ್ಮ ಮಾಲಿಕರನ್ನು ಕಳೆದುಕೊಂಡಿದೆ. ಜೀವನೋಪಾಯಕ್ಕಾಗಿ ಅಲೆಮಾರಿಯಾಗುವ ಸಾಧ್ಯತೆ ಇದೆ. ಜಾನುವಾರುಗಳ್ನು ರಕ್ಷಿಸಿ ಅವುಗಳನ್ನು ಪಾಲಾನೆಗಾಗಿ ಸರ್ಕಾರ ಸೋಮವಾರಪೇಟೆಯ ಕುಶಾಲನರದಲ್ಲಿ ಜರ್ಸಿ ತಳಿ ಸಂವರ್ಧನಾ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಜೋಡುಪಾಲದಲ್ಲಿ ಮನುಷ್ಯರ ಸುಳಿವಿಲ್ಲ, ಸಾಯೋ ಸ್ಥಿತೀಲಿ ಸಾಕುಪ್ರಾಣಿಗಳು

ಪರಿಸ್ಥಿತಿ ಸುಧಾರಿಸುವ ತನಕ ಜಾನುವಾರುಗಳನ್ನು ಈ ಕೇಂದ್ರದಲ್ಲಿ ಪಾಲನೆ ಮಾಡಲಾಗುವುದು. ಈ ಸಂಬಂಧ ಈಗಾಗಲೇ ಜಿಲ್ಲೆಯಲ್ಲಿ ಸಹಾಯವಾಣಿ ಪ್ರಾರಂಭಿಸಲಾಗಿದೆ. ಸಾರ್ವಜನಿಕರು ಈ ರೀತಿ ಸಂಕಷ್ಟಕ್ಕೀಡಾದ ಜಾನುವಾರುಗಳು ಕಂಡುಬಂದಲ್ಲಿ ಸಹಾಯವಾಣಿ ಸಂಖ್ಯೆ: 08272-229449 ಸಂಪರ್ಕಿಸಬಹುದು.

Helpline on cattle in flood affected Kodagu district

ಅಥವಾ ಸಹಾಯಕ ನಿರ್ದೇಶಕರ ಕಚೇರಿ, ಪಶು ಆಸ್ಪತ್ರೆ ಮಡಿಕೇರಿ ದೂ. ಸಂ:08272-228805, ಸಹಾಯಕ ನಿರ್ದೇಶಕರ ಕಚೇರಿ, ಪಶು ಆಸ್ಪತ್ರೆ ವಿರಾಜಪೇಟೆ ದೂ.ಸಂ:08274-257228, ಸಹಾಯಕ ನಿರ್ದೇಶಕರ ಕಚೇರಿ, ಪಶು ಆಸ್ಪತ್ರೆ ಸೋಮವಾರಪೇಟೆ ದೂ. ಸಂ:08276-282127 ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಂಪರ್ಕಿಸಬಹುದಾಗಿದೆ.

ಮುದ್ದಿನ ನಾಯಿ ರಕ್ಷಿಸಲು ಮಡಿಕೇರಿಯಿಂದ ನಡೆದುಕೊಂಡು ಬಂದ ಯುವಕ

ಜಾನುವಾರುಗಳು ಅಲ್ಲದೇ ಇತರೆ ಸಾಕುಪ್ರಾಣಿಗಳು ಸಹ ಸಂಕಷ್ಟಕ್ಕೀಡಾಗಿದ್ದು, ಅವುಗಳಿಗೆ ತುರ್ತು ಚಿಕಿತ್ಸೆ, ಆಹಾರ ಮತ್ತು ಸಂರಕ್ಷಣೆಗಾಗಿ ಸರ್ಕಾರವು ಕ್ರಮ ವಹಿಸಲಾಗುತ್ತಿದ್ದು, ಗೋಶಾಲೆಯನ್ನು ಪರಿಸ್ಥಿತಿ ಸುಧಾರಿಸುವ ತನಕ ಕೂಡಿಗೆ ಜರ್ಸಿ ತಳಿ ಸಂವರ್ಧನಾ ಕೇಂದ್ರದಲ್ಲಿ ನಿರ್ವಹಿಸಬೇಕಾಗಿರುವುದರಿಂದ ಸಾರ್ವಜನಿಕರು/ ದಾನಿಗಳು ಪಶು ಆಹಾರ, ಒಣಹುಲ್ಲು, ಹಸಿ ಹುಲ್ಲು, ಮತ್ತು ಶ್ವಾನ ಆಹಾರಗಳನ್ನು ದೇಣಿಗೆಯಾಗಿ ಉಪ ನಿರ್ದೇಶಕರು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಜರ್ಸಿ ತಳಿ ಸಂವರ್ಧನಾ ಕೇಂದ್ರ ಕೂಡಿಗೆ ದೂರವಾಣಿ ಸಂಖ್ಯೆ; 08276-278248, 9901668895 ಅಥವಾ 9449562309 ಇವರನ್ನು ಸಂಪರ್ಕಿಸಿ ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
As thousands of cattle have become shelterless in flood affected Kodagu district, state government has opened a helpline and rehabilitation center for cattle in Kushala Nagar of Somavarpet taluk.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more