ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಡಿಕೇರಿ: ಜ.1 ರವರೆಗೆ ನಡೆಯಲಿದೆ “ಹೆಲಿಕಾಫ್ಟರ್ ಜಾಯ್ ರೈಡ್ಸ್”

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಡಿಸೆಂಬರ್ 24: ಕೊರೊನಾ ಸಾಂಕ್ರಮಿಕ ಕಾರಣದಿಂದ ರಾಜ್ಯ ಸರ್ಕಾರ ಹೊಸ ವರ್ಷಾಚರಣೆ ರದ್ದು ಮಾಡಿದರೂ ಮಂಜಿನ ನಗರಿಯ ನಾಗರಿಕರಿಗೆ ಮತ್ತು ಪ್ರವಾಸಿಗರಿಗೆ ಹೊಸತೊಂದು ಆಕರ್ಷಣೆ ಇದೆ.

ವರ್ದಾಂತ್ ಅರ್ಥ್ ಡಬ್ಲ್ಯುಟಿಇ ಲಿಮಿಟೆಡ್ ಹಾಗೂ ಥುಂಬೆ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಸಹಯೋಗದಲ್ಲಿ ಕ್ರಿಸ್‍ಮಸ್ ಮತ್ತು ಹೊಸ ವರ್ಷಾಚರಣೆಯ ಪ್ರಯುಕ್ತ ನಗರದಲ್ಲಿ "ಹೆಲಿಕಾಫ್ಟರ್ ಜಾಯ್ ರೈಡ್ಸ್" ಜ.1 ರವರೆಗೆ ನಡೆಯಲಿದೆ ಎಂದು ಸಂಸ್ಥೆಯ ನಿರ್ದೇಶಕ ಅಯ್ಯಣ್ಣ ತಿಳಿಸಿದ್ದಾರೆ.

ರಾಜಾಸೀಟ್, ಬಂಡೀಪುರದಲ್ಲಿ ಹೊಸ ವರ್ಷಾಚರಣೆಗೆ ನಿಷೇಧರಾಜಾಸೀಟ್, ಬಂಡೀಪುರದಲ್ಲಿ ಹೊಸ ವರ್ಷಾಚರಣೆಗೆ ನಿಷೇಧ

ಮಡಿಕೇರಿ ನಗರದದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರಿಸ್‍ಮಸ್ ಮತ್ತು ಹೊಸ ವರ್ಷಾಚರಣೆಯ ಪ್ರಯುಕ್ತ ನಗರದ ಜಿಲ್ಲಾ ಕ್ರೀಡಾಂಗಣದ ಕೆಳಗಿನ ಮೈದಾನದಲ್ಲಿ "ಹೆಲಿಕಾಫ್ಟರ್ ಜಾಯ್ ರೈಡ್ಸ್" ನಡೆಯಲಿದ್ದು, ಇದರೊಂದಿಗೆ ಮಡಿಕೇರಿಯ ತ್ಯಾಜ್ಯ ನಿರ್ವಹಣೆ, ಮಾಲಿನ್ಯ ರಹಿತವಾದ ವಾತಾವರಣದ ಕುರಿತು ಅಧಿಕಾರಿಗಳಿಗೆ ಹಾಗೂ ಹೆಲಿಕಾಫ್ಟರ್‍ನಲ್ಲಿ ಸಂಚರಿಸುವ ಪ್ರತಿಯೊಬ್ಬರಿಗೂ ಮಾಹಿತಿ ನೀಡಲಾಗುತ್ತಿದೆ ಎಂದರು.

Madikeri: Helicopter Joy Rides Hold In Madikeri On January 1

ಈಗಾಗಲೇ ಜಿಲ್ಲಾಡಳಿತದ ಅನುಮತಿ ಮೇರೆಗೆ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಹೆಲಿಕಾಫ್ಟರ್ ಹಾರಾಟವನ್ನು ಆರಂಭಿಸಿದ್ದು, ಉತ್ತಮ ಸ್ಪಂದನೆ ದೊರೆತ್ತಿದೆ. 5 ಹಾಗೂ 15 ನಿಮಿಷದ ಎರಡು ಪ್ಯಾಕೇಜ್ ಗಳನ್ನು ಮಾಡಲಾಗಿದ್ದು, 5 ರಿಂದ 7 ನಿಮಿಷದ ಪಯಣಕ್ಕೆ 3 ಸಾವಿರ ರೂ. ಹಾಗೂ 15 ನಿಮಿಷಕ್ಕೆ 5,500 ರೂ.ಶುಲ್ಕ ನಿಗದಿಪಡಿಸಲಾಗಿದೆ.

ಮತ್ತೊಬ್ಬ ನಿರ್ದೇಶಕ ಬಿ.ಸಿ.ಕಾವೇರಪ್ಪ ಮಾತನಾಡಿ, ಸಂಸ್ಥೆ ತ್ಯಾಜ್ಯ ನಿರ್ವಹಣೆ ಮಾಡಿ ಅದನ್ನು ಪರಿವರ್ತಿತ ಶಕ್ತಿಯನ್ನಾಗಿ ಮಾರ್ಪಡಿಸುವ ಕಾರ್ಯದಲ್ಲಿ ತೊಡಗಿದ್ದು, ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲೂ ತ್ಯಾಜ್ಯ ನಿರ್ವಹಣೆ ಮಾಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

English summary
"Helicopter Joy Rides' will be held in Madikeri city for Christmas and New Year's Eve, said Iyanna, director of the organization.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X