ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನಲ್ಲಿ ಭಾರೀ ಮಳೆ ಸೂಚನೆ; ಜಿಲ್ಲಾದ್ಯಂತ ರೆಡ್ ಅಲರ್ಟ್, ಶಾಲಾ ಕಾಲೇಜುಗಳಿಗೂ ರಜೆ

|
Google Oneindia Kannada News

ಮಡಿಕೇರಿ, ಸೆಪ್ಟೆಂಬರ್ 5: ಇಂದು ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಬುಧವಾರದಿಂದಲೇ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಅಧಿಕ ಮಳೆಯಾಗುವ ಸೂಚನೆ ದೊರೆತ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಶಾಲಾ ಕಾಲೇಜುಗಳಿಗೆ ಇಂದು ರಜೆಯನ್ನು ಘೋಷಿಸಿದ್ದಾರೆ.

ಭಾನುವಾರ ಸಂಜೆಯಿಂದಲೂ ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದೆ. ಕೊಡಗು ವಿಪತ್ತು ನಿರ್ವಹಣಾ ಆಡಳಿತ ನೀಡಿದ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಗುರುವಾರ 204.5 ಮಿಲಿ ಮೀಟರ್ ಮಳೆಯಾಗಲಿದೆ.

ಕೊಡಗಿನಲ್ಲಿ ಇನ್ನೂ ಎರಡು ದಿನ ಸುರಿಯಲಿದೆ ಭಾರೀ ಮಳೆಕೊಡಗಿನಲ್ಲಿ ಇನ್ನೂ ಎರಡು ದಿನ ಸುರಿಯಲಿದೆ ಭಾರೀ ಮಳೆ

ಜೊತೆಗೆ ಮಡಿಕೇರಿ ಹಾಗೂ ಕುಶಾಲನಗರದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಕಾವೇರಿ ನದಿ ಉಕ್ಕಿ ಹರಿಯುವ ಸಂಭವವೂ ಇದೆ. ಕಳೆದ ತಿಂಗಳು ದಕ್ಷಿಣ ಕೊಡಗಿನಲ್ಲಿ ಮಳೆಯಿಂದ ಹಲವೆಡೆ ಭೂಕುಸಿತವಾಗಿತ್ತು. ಈಗ ಅಲ್ಲೂ ಮಳೆ ಮುಂದುವರೆದಿದೆ. ಲಕ್ಷ್ಮಣ ತೀರ್ಥ, ಕೊಂಗನಪೋಲ್ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ನಿವಾಸಿಗಳಿಗೆ ಪ್ರವಾಹದ ಆತಂಕ ಎದುರಾಗಿದೆ.

Heavy Rainfall Alert In Kodagu District

ಮಂಗಳವಾರದಿಂದ ಬುಧವಾರದವರೆಗೆ ಜಿಲ್ಲೆಯಲ್ಲಿ 46.7 ಮಿಲಿ ಮೀಟರ್ ಮಳೆ ದಾಖಲಾಗಿದೆ. ಹಾರಂಗಿ ಜಲಾಶಯದ ಮಟ್ಟ 2,858 ಅಡಿ ಭರ್ತಿಯಾಗಿದ್ದು, ತುಂಬಲು ಒಂದು ಅಡಿ ಮಾತ್ರ ಬಾಕಿಯಿದೆ.

English summary
Red alert is declared in kodagu district and weather forecast alerted heavy rain in the district in next 24 hours. DC declared holiday for schools and colleges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X