ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆಯ ಅಬ್ಬರ, ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಕೊಡಗು, ಆಗಸ್ಟ್ 28 : ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಜೋರಾಗಿದ್ದು, ಹಾರಂಗಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಾಗಿದೆ.

ನಿರಂತರ ಮಳೆ, ಇಂದು ಮೈಸೂರಿನ 4 ತಾಲ್ಲೂಕು ಶಾಲೆಗಳಿಗೆ ರಜೆನಿರಂತರ ಮಳೆ, ಇಂದು ಮೈಸೂರಿನ 4 ತಾಲ್ಲೂಕು ಶಾಲೆಗಳಿಗೆ ರಜೆ

ಮಡಿಕೇರಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನೀರು ಹರಿದು ಬಂದು ನೇರವಾಗಿ ಹಾರಂಗಿ ಜಲಾಶಯವನ್ನು ಸೇರುತ್ತಿದೆ. ಈಗಾಗಲೇ ಜಲಾಶಯ ಭರ್ತಿಯಾಗಿರುವ ಹಿನ್ನಲೆಯಲ್ಲಿ ನದಿಗೆ ಏಳುಸಾವಿರ ಹಾಗೂ ನಾಲೆಗಳಿಗೆ ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ.

Heavy rain in Kodagu district, Harangi reservoir inflow increased

ಹಾರಂಗಿ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಬಿಡುತ್ತಿರುವುದರಿಂದ ಕಾವೇರಿ ನದಿ ನೀರಿನ ಪ್ರಮಾಣ ಹೆಚ್ಚಾಗಲಿದ್ದು, ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ ಹೆಚ್ಚಾಗಲಿದೆ.

ಗರಿಷ್ಠ 2,859 ಅಡಿಯಿಷ್ಟಿರುವ ಜಲಾಶಯದಲ್ಲಿ ಈಗಾಗಲೇ 2858.41 ಅಡಿಯಷ್ಟು ನೀರಿದ್ದು, ಸೋಮವಾರ ಜಲಾಶಯಕ್ಕೆ 7845 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಸದ್ಗುರು ಅವರ Rally for rivers ಬಗ್ಗೆ ತಿಳಿಯಬೇಕಾದ 9 ಸಂಗತಿಸದ್ಗುರು ಅವರ Rally for rivers ಬಗ್ಗೆ ತಿಳಿಯಬೇಕಾದ 9 ಸಂಗತಿ

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿನ ನೀರು ಹರಿದು ಬರುತ್ತಿರುವುದು ಕಂಡು ಬಂದಿದೆ. ಕಳೆದ ವರ್ಷ ಇದೇ ವೇಳೆಗೆ ಕೇವಲ 1441 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಇದೀಗ ಸುರಿಯುತ್ತಿರುವ ಮಳೆಯನ್ನು ಗಮನಿಸಿದರೆ ಇನ್ನು ಕೆಲವು ದಿನಗಳು ಹೀಗೆಯೇ ಸುರಿಯುವ ಸಾಧ್ಯತೆಗಳಿವೆ.

ಭಾನುವಾರದಿಂದ ಸೋಮವಾರದವರೆಗೆ ಸುರಿದ ಮಳೆದ ಮಳೆಯ ಪ್ರಮಾಣವನ್ನು ಗಮನಿಸಿದರೆ ಸರಾಸರಿ ಮಳೆ 35.95 ಮಿ.ಮೀ. ಮಳೆ ಸುರಿದಿದೆ. ಜನವರಿಯಿಂದ ಇಲ್ಲಿಯವರೆಗಿನ 1653.52 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 165 ಮಿ.ಮೀ.ನಷ್ಟು ಹೆಚ್ಚು ಮಳೆ ಸುರಿದಿದೆ.

ಮಡಿಕೇರಿ ತಾಲೂಕಿನಲ್ಲಿ 57.45 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ 25.33 ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ 25.07 ಮಿ.ಮೀ. ಮಳೆಯಾಗಿದೆ.

ಜಿಲ್ಲೆಯಲ್ಲಿ ಅತಿಹೆಚ್ಚು ಮಳೆ 63.8 ಮಿ.ಮೀ. ಭಾಗಮಂಡಲದಲ್ಲಿ, ಅತಿಕನಿಷ್ಠ 10ಮಿ.ಮೀ. ಮಳೆ ಕೊಡ್ಲಿಪೇಟೆಯಲ್ಲಿ ಸುರಿದಿದೆ.

English summary
Harangi reservoir inflow increased to 7845 cusecs because of heavy rain in Kodagu and Madikeri. Axess water of 7000 cusecs is being released from the reservoir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X