ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನಲ್ಲಿ ಇನ್ನೂ ಎರಡು ದಿನ ಸುರಿಯಲಿದೆ ಭಾರೀ ಮಳೆ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಆಗಸ್ಟ್ 21: ಕೊಡಗಿನಲ್ಲಿ ನಿರಂತರವಾಗಿ ಸುರಿಯುತ್ತಿದ್ದ ಮಳೆ ಕೆಲ ದಿನದ ಹಿಂದಷ್ಟೇ ತಗ್ಗಿತ್ತು. ಮಳೆ ಕಡಿಮೆಯಾಗಿ ನದಿಗಳ ನೀರಿನ ಮಟ್ಟ ಇಂಚಿಂಚೇ ಇಳಿಕೆಯಾಗುತ್ತಿತ್ತು. ಇದರಿಂದ ಜನರೂ ನಿಟ್ಟುಸಿರುಬಿಟ್ಟಿದ್ದರು. ಆದರೆ ಇದೀಗ ಕೊಡಗಿನಲ್ಲಿ ಇನ್ನೂ 2 ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

 ಅಪಾಯ ಮಟ್ಟ ಮೀರಿದ ಗಂಗಾ: ದೆಹಲಿಗೆ ರೆಡ್ ಅಲರ್ಟ್ ಅಪಾಯ ಮಟ್ಟ ಮೀರಿದ ಗಂಗಾ: ದೆಹಲಿಗೆ ರೆಡ್ ಅಲರ್ಟ್

ಕೊಡಗಿನಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದ್ದು, ರಸ್ತೆ ಸಂಪರ್ಕ ಕಡಿತವಾಗುವ ಕಡೆ ಹೋಗದಂತೆ ಹಾಗೂ ಕೆಲವೆಡೆ ಗುಡ್ಡ ಕುಸಿಯುವ ಸಾಧ್ಯತೆ ಇರುವುದರಿಂದ ಪ್ರವಾಸಿಗರಿಗೆ ಎಚ್ಚರಿಕೆ ನೀಡಿ ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಆದೇಶ ಹೊರಡಿಸಿದ್ದಾರೆ.

Heavy Rain Forecast In Kodagu Today And Tomorrow

ಕೆಲ ದಿನಗಳಿಂದ ರಾಜ್ಯದ ಮಲೆನಾಡು, ಕರಾವಳಿ, ಕೊಡಗು, ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಗೆ ಪ್ರವಾಹ ಸೃಷ್ಟಿಯಾಗಿತ್ತು. ಆಸ್ತಿ ಪಾಸ್ತಿ ಪ್ರಾಣ ಹಾನಿ ಸಂಭವಿಸಿದ್ದು, ಜೀವನಕ್ಕೆ ಆಧಾರವಾಗಿದ್ದ ಮನೆ, ಜಮೀನುಗಳೂ ನೀರುಪಾಲಾಗಿದ್ದವು. ಕೆಲವೇ ದಿನಗಳಿಂದಷ್ಟೇ ಮಳೆ ತಗ್ಗಿದ್ದು, ಜನರು ಮನೆಗಳಿಗೆ ಮರಳುತ್ತಿದ್ದರು. ಆದರೆ ಈ ಮುನ್ಸೂಚನೆ ಮತ್ತೆ ಭಯವನ್ನು ಹುಟ್ಟಿಹಾಕಿದೆ.

English summary
The Metereological Department has forecast heavy rainfall for 2 more days in Kodagu. The public has been warned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X