ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿ, ಕೇರಳದಲ್ಲಿ ಮುಂದಿನ 48 ತಾಸು ಭಾರಿ ಮಳೆ ಎಚ್ಚರಿಕೆ

By Nayana
|
Google Oneindia Kannada News

Recommended Video

ಕೊಡಗು ಕೇರಳದಲ್ಲಿ ಮುಂದಿನ 48 ಗಂಟೆಗಳು ಭಾರಿ ಮಳೆ ಮುನ್ಸೂಚನೆ | Oneindia Kannada

ಬೆಂಗಳೂರು, ಆಗಸ್ಟ್ 24: ಕರ್ನಾಟಕದ ಕರಾವಳಿ, ಕೇರಳ ಭಾಗದಲ್ಲಿ ಮತ್ತೆ ಹೈ ಅಲರ್ಟ್ ಘೋಷಿಸಲಾಗಿದೆ, ಆಗಸ್ಟ್ 24,25ರಂದು ಮತ್ತೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈಗಾಗಲೇ ಕೇರಳ, ಕರ್ನಾಟಕದ ದಕ್ಷಿಣ ಕನ್ನಡ, ಕೊಡಗು ಭಾಗಗಳಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹವೇ ಬಂದಿತ್ತು, ಅದರಿಂದ ಜನರು ಇನ್ನೂ ಹೊರಬರಲು ಸಾಧ್ಯವಾಗಿಲ್ಲ.

ಕೊಡಗು ಸಂತ್ರಸ್ತರಿಗೆ ಪುನರ್ವಸತಿ: ಸಂಪುಟ ಸಭೆಯಲ್ಲಿ ನಿರ್ಧಾರ ಸಾಧ್ಯತೆ ಕೊಡಗು ಸಂತ್ರಸ್ತರಿಗೆ ಪುನರ್ವಸತಿ: ಸಂಪುಟ ಸಭೆಯಲ್ಲಿ ನಿರ್ಧಾರ ಸಾಧ್ಯತೆ

ಗುರುವಾರದಿಂದ ಶಾಲೆಗಳು ಆರಂಭವಾಗಿವೆ, ಇನ್ನೂ ಕೆಲವು ಶಾಲೆಗಳು ಸಂತ್ರಸ್ತರ ಪರಿಹಾರ ಕೇಂದ್ರವಾಗಿಯೇ ಮುಂದುವರೆದಿದೆ. ಇಂತಹ ಸಂದರ್ಭದಲ್ಲಿ ಮತ್ತೆ ಮಳೆಯಾಗಲಿದೆ ಎನ್ನುವ ಎಚ್ಚರಿಕೆ ಸಂದೇಶವನ್ನು ಹವಾಮಾನ ಇಲಾಖೆ ರವಾನಿಸಿದೆ.

Heavy rain alarm in coastal again!

ಕೊಡಗು, ಕೇರಳ ಭಾಗದಲ್ಲಿ ಮುಂದಿನ 48 ಗಂಟೆಗಳ ಕಾಲ ಮಳೆಯಾಗಲಿದೆ, ಗುಡ್ಡ ಹಾಗೂ ಏರು ಪ್ರದೇಶದಲ್ಲಿ 6.4ರಿಂದ 11.5 ಸೆಂ ಮೀಟರ್ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಶುಕ್ರವಾರ ಬೆಳಗ್ಗೆಯಿಂದ ಕೊಡಗಿನಲ್ಲಿ ಮತ್ತೆ ಮಳೆ ಆರಂಭೌಆಗಿದೆ. ಕಳೆದ ಎರಡು ದಿನಗಳಿಂದ ಕೊಂಚ ಬಿಡುವು ಪಡೆದಿತ್ತು.

ಕೊಡಗಿನಲ್ಲಿ ಜನರ ಬಳಿಕ ಜಾನುವಾರುಗಳಿಗೆ ಹೆಲ್ಪ್ ಲೈನ್ಕೊಡಗಿನಲ್ಲಿ ಜನರ ಬಳಿಕ ಜಾನುವಾರುಗಳಿಗೆ ಹೆಲ್ಪ್ ಲೈನ್

ಈಗಾಗಲೇ ಪ್ರವಾಹದಿಂದಾಗಿ ಕೊಡಗು ಜಿಲ್ಲೆಯಲ್ಲಿ ಸಾವಿರಾರು ಎಕರೆ ಜಮೀನು ನಾಶವಾಗಿದೆ, ಜನರಿಗೆ ಪುನರ್ವಸತಿ ನಿರ್ಮಿಸುವ ಕಾರ್ಯ ಇನ್ನೂ ಆರಂಭವಾಗಬೇಕಿದೆ. ವಿಧಾನಸೌಧದಲ್ಲಿ ಶುಕ್ರವಾರ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಂತ್ರಸ್ತರ ಪುನರ್ವಸತಿ ಹಾಗೂ ರಾಜ್ಯ ಹದಿಮೂರು ಜಿಲ್ಲೆಗಳಲ್ಲಿರುವ ಬರದ ಪರಿಸ್ಥಿತಿ ಕುರಿತು ಚರ್ಚೆಯಾಗುವ ಸಾಧ್ಯತೆ ಇದೆ.

English summary
Indian Meteorological Department has forecasted heavy rain in Karnataka coastal and Kerala for next two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X