ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಎಚ್ಚರಿಕೆ ನೀಡಿದ ಆರೋಗ್ಯ ಸಚಿವ ಶ್ರೀರಾಮುಲು

|
Google Oneindia Kannada News

Recommended Video

ಶ್ರೀರಾಮುಲು ಹೇಳಿಕೆ ಕೇಳಿ ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ನಡುಕ | Oneindia Kannada

ಕೊಡಗು, ಸೆಪ್ಟೆಂಬರ್ 27: ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದುಕೊಂಡು ಖಾಸಗಿ ಆಸ್ಪತ್ರೆ ನಡೆಸುತ್ತಿರುವ ವೈದ್ಯರಿಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಅರವಳಿಕೆ ನೀಡುವಾಗ ವೈದ್ಯನ ಯಡವಟ್ಟು; ಬೈಲಹೊಂಗಲದ ಗೃಹಿಣಿ ಸಾವುಅರವಳಿಕೆ ನೀಡುವಾಗ ವೈದ್ಯನ ಯಡವಟ್ಟು; ಬೈಲಹೊಂಗಲದ ಗೃಹಿಣಿ ಸಾವು

ಕೊಡಗಿನ ಮಡಿಕೇರಿಗೆ ಭೇಟಿ ನೀಡಿದ್ದ ರಾಮುಲು, ಖಾಸಗಿ ಆಸ್ಪತ್ರೆ ನಡೆಸುವ ಸರ್ಕಾರಿ ವೈದ್ಯರಿಗೆ ಎಚ್ಚರಿಕೆ ನೀಡಿದ್ದು 'ಒಂದೋ ನಮ್ಮೊಂದಿಗೆ ಇರಿ ಇಲ್ಲವೆಂದರೆ ಬಿಟ್ಟು ತೊಲಗಿ' ಎಂದು ಖಾರವಾಗಿಯೇ ಹೇಳಿದ್ದಾರೆ.
ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಲು ಶ್ರೀರಾಮುಲು ಅವರು ನಿನ್ನೆ ಮಡಿಕೇರಿಗೆ ಆಗಮಿಸಿದ್ದರು. ಈ ಸಮಯ ಸುದ್ದಿಗಾರರೊಂದಿಗೆ ಮಾತನಾಡಿ 'ಖಾಸಗಿ ಆಸ್ಪತ್ರೆ ನಡೆಸುತ್ತಿರುವ ಸರ್ಕಾರಿ ವೈದ್ಯರ ಮೇಲೆ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ' ಎಂದರು.

ಡಿಸಿಎಂ ಹುದ್ದೆ ಬದಲಿಗೆ ರಾಮುಲು ಮುಂದಿಟ್ಟರು ಪ್ರಮುಖ ಬೇಡಿಕೆಡಿಸಿಎಂ ಹುದ್ದೆ ಬದಲಿಗೆ ರಾಮುಲು ಮುಂದಿಟ್ಟರು ಪ್ರಮುಖ ಬೇಡಿಕೆ

'ಎರಡು ದೋಣಿಗಳ ಮೇಲೆ ಕಾಲಿಡುವುದು ವೈದ್ಯರಿಗೆ ಸೂಕ್ತವಲ್ಲ, ಈಗಾಗಲೇ ಈ ಸಂಬಂಧ ನಿರ್ಣಯ ತೆಗೆದುಕೊಳ್ಳಲಾಗಿದೆ. ನೂರಕ್ಕೆ ನೂರರಷ್ಟು ಹೊಸ ಬದಲಾವಣೆಯನ್ನು ನಾನು ಮಾಡಿಯೇ ಸಿದ್ಧ' ಎಂದು ರಾಮುಲು ಹೇಳಿದರು.

Health Minister Sriramulu Warns Government Hospital Doctors

ರೋಗಿ ಸತ್ತನೆಂದು ವೈದ್ಯರನ್ನೇ ಹೊಡೆದು ಕೊಂದರುರೋಗಿ ಸತ್ತನೆಂದು ವೈದ್ಯರನ್ನೇ ಹೊಡೆದು ಕೊಂದರು

'ಸರ್ಕಾರಿ ಆಸ್ಪತ್ರೆಯಲ್ಲಿದ್ದುಕೊಂಡು ಖಾಸಗಿ ಆಸ್ಪತ್ರೆ ನಡೆಸುವ ವೈದ್ಯರನ್ನು ಅಮಾನತ್ತು ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ. ನಮ್ಮಲ್ಲಿ ವೈದ್ಯರಿಗೆ ಕೊರತೆ ಇಲ್ಲ, ಯುವಕರು ಕಾಯ್ದು ಕೂತಿದ್ದಾರೆ, ಈ ಬಗ್ಗೆ ಸಮರೋಪಾದಿಯಲ್ಲಿ ಕೆಲಸ ಮಾಡಲು ಸರ್ಕಾರ ಸಿದ್ಧವಿದೆ' ಎಂದು ರಾಮುಲು ಹೇಳಿದರು.

English summary
Karnataka health minister Sriramulu warns government doctors who were running private hospitals. He said we will take strick action against them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X