ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿಗೆ ಸಾಂಕ್ರಾಮಿಕ ರೋಗಗಳ ಭೀತಿ ಇಲ್ಲ: ಆರೋಗ್ಯ ಇಲಾಖೆ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 23: ಭೀಕರ ಪ್ರವಾಹದಿಂದ ನಲುಗಿರುವ ಕೊಡಗಿಗೆ ಸಾಂಕ್ರಾಮಿಕ ರೋಗದ ಭೀತಿ ಇಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಿಡಿಸಿದೆ.

ಎಲ್ಲರೂ ಸಂತ್ರಸ್ತರ ಪರಿಹಾರ ಕೇಂದ್ರಗಳಲ್ಲಿ ಸೇರಿದಂತೆ ಕೊಡಗು ಸುತ್ತಮುತ್ತ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿತ್ತು, ಆದರೆ ಇದೀಗ ಆರೋಗ್ಯ ಇಲಾಖೆಯೇ ಖುದ್ದಾಗಿ ಈ ಕುರಿತು ಸ್ಪಷ್ಟನೆ ನೀಡಿದ್ದು ಜನರು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದೆ.

ಕೊಡಗಿನಲ್ಲಿ ಪ್ರವಾಹವೇನೋ ಹೋಯ್ತು, ರೋಗ-ರುಜಿನ ಚಿಂತೆ ಬಂತು ಕೊಡಗಿನಲ್ಲಿ ಪ್ರವಾಹವೇನೋ ಹೋಯ್ತು, ರೋಗ-ರುಜಿನ ಚಿಂತೆ ಬಂತು

ಸ್ಥಳೀಯರು ಖುದ್ದಾಗಿ ತಾವಿರುವ ಪರಿಹಾರ ಕೇಂದ್ರಗಳನ್ನು ಸ್ವಚ್ಛವಾಗಿಡಲು ಮುಂದಾಗಿದ್ದು, ಶೌಚಾಲಯ ಸೇರಿದಂತೆ ಇನ್ನಿತರೆ ಪ್ರದೇಶಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಭಾರಿ ಮಳೆಗೆ ಉಂಟಾಗಿರುವ ಪ್ರವಾಹದಿಂದ ಕೇರಳದಲ್ಲಿ ಈಗಾಗಲೇ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಹಾಗಾಗಿ ಕೊಡಗಿನಲ್ಲೂ ಇದೇ ಪರಿಸ್ಥಿತಿ ಬರಬಹುದು ಎನ್ನುವ ಆತಂಕ ನಿರ್ಮಾಣ ನಿರ್ಮಾಣವಾಗಿತ್ತು.

Health department clarifies no communicable diseases in Kodagu district

ಈ ಸಂಬಂಧ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಧಿಕಾರಿಗಳು ಕೊಡಗಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಡಗಿನಲ್ಲಿ ಸಾಂಕ್ರಾಮಿಕ ರೋಗಗಳ ಭಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೊಡಗು ಹಾಗೂ ಕೇರಳಕ್ಕೆ 1 ಕೋಟಿ ಮೌಲ್ಯದ ಜನೌಷಧಿ: ಅನಂತ್ ಕೊಡಗು ಹಾಗೂ ಕೇರಳಕ್ಕೆ 1 ಕೋಟಿ ಮೌಲ್ಯದ ಜನೌಷಧಿ: ಅನಂತ್

ಕೊಡಗಿನಲ್ಲಿ ಸಂತ್ರಸ್ತರಿಗೆ ವೈದ್ಯ ಸೇವೆ ನೀಡಲು ರಾಜ್ಯದ ವಿವಿಧ ಭಾಗಗಳಿಂದ ನೂರಕ್ಕೂ ಹೆಚ್ಚು ವೈದ್ಯರು ಕೊಡಗಿಗೆ ತೆರಳಿದ್ದು, ಅಗತ್ಯ ಇರುವವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಸಂತ್ರಸ್ತರ ಆರೋಗ್ಯದಲ್ಲಿ ಯಾವುದೇ ಏರುಪೇರು ಆಗಿಲ್ಲ, ರೋಗದ ಭೀತಿಯೂ ಇಲ್ಲ ಸಂತ್ರಸ್ತರಿಗೆ ಎಲ್ಲಾ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಹೀಗಾಗಿ ಹೆಚ್ಚುವರಿ ವೈದ್ಯರನ್ನು ವಾಪಸ್‌ ತೆರಳುವಂತೆ ಸೂಚಿಸಲಾಗಿದೆ.

English summary
Health department has clarified that there were no threat of communicable diseases in Kodagu district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X