ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನಲ್ಲಿ ಮುಂದುವರೆದ ಮಳೆ... ಹಾರಂಗಿ ಜಲಾಶಯದಲ್ಲಿ ಹೆಚ್ಚಿದ ನೀರಿನ ಪ್ರಮಾಣ

|
Google Oneindia Kannada News

ಮಡಿಕೇರಿ, ಜುಲೈ 6: ಕೊಡಗಿನಲ್ಲಿ ಸಾಧಾರಣ ಮಳೆ ಮುಂದುವರೆದಿದೆ. ಈಗಾಗಲೇ ಪುನರ್ವಸು ನಕ್ಷತ್ರದ ಮಳೆ ಆರಂಭವಾಗಿರುವ ಕಾರಣ ಮಳೆ ತುಸು ಬಿರುಸುಗೊಳ್ಳುತ್ತಿದ್ದು, ಹಾರಂಗಿ ಜಲಾಶಯದ ಒಳಹರಿವು ಹೆಚ್ಚಾಗಿದೆ.

Recommended Video

ಚಿತ್ರದುರ್ಗ ರೈತನ ಬದುಕನ್ನು ನಾಶ ಮಾಡಿದ ಕೊರೊನ | Chitradurga | Oneindia Kannada

ಸಾಮಾನ್ಯವಾಗಿ ಮಳೆಗಾಲದ ಈ ಸಮಯದಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು. ಕಳೆದ ಎರಡು ವರ್ಷಗಳಿಂದ ಆಗಸ್ಟ್ ತಿಂಗಳಲ್ಲಿ ಧಾರಾಕಾರವಾಗಿ ಮಳೆ ಸುರಿದು ಅನಾಹುತಗಳಾಗುತ್ತಿವೆ. ಈ ಬಾರಿಯೂ ಇಲ್ಲಿನ ಜನ ಅದೇ ಭಯದಲ್ಲಿದ್ದಾರೆ.

ಕೊಡಗಿನಲ್ಲಿ ಸಂಜೆ ಬಿರುಸು ಮಳೆಗೆ ಕುಸಿದ ತಡೆಗೋಡೆಕೊಡಗಿನಲ್ಲಿ ಸಂಜೆ ಬಿರುಸು ಮಳೆಗೆ ಕುಸಿದ ತಡೆಗೋಡೆ

ಕಳೆದ ಬಾರಿಗೆ ಹೋಲಿಸಿದರೆ ಜನವರಿಯಿಂದ ಇಲ್ಲಿವರೆಗೆ ಹೆಚ್ಚು ಮಳೆ ಸುರಿದಿದೆ. ಕಳೆದ ವರ್ಷ ಈ ಸಮಯದಲ್ಲಿ 398 ಮಿ.ಮೀ. ಮಳೆ ಸುರಿದಿದ್ದರೆ, ಈ ಬಾರಿ 475ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷಕ್ಕಿಂತ 77ಮಿ.ಮೀ. ಮಳೆ ಹೆಚ್ಚಾಗಿದೆ. ಕಳೆದ ಒಂದು ದಿನದ ಅವಧಿಯಲ್ಲಿ ಜಿಲ್ಲೆಯಲ್ಲಿ 36.92 ಮಿ.ಮೀ. ಮಳೆ ಸುರಿದಿದೆ. ತಾಲೂಕುವಾರು ಮಳೆಯ ಪ್ರಮಾಣವನ್ನು ಗಮನಿಸಿದರೆ ಮಡಿಕೇರಿಯಲ್ಲಿ 40.50 ಮಿ.ಮೀ. ಮಳೆಯಾಗಿದ್ದು ಜನವರಿಯಿಂದ ಇಲ್ಲಿವರೆಗೆ 755.22 ಮಿ.ಮೀ, ಮಳೆಯಾಗಿದೆ.

Harangi Reservoir Water Level Increased Due To Rain In Kodagu

ವಿರಾಜಪೇಟೆ ತಾಲ್ಲೂಕಿನಲ್ಲಿ 46.57 ಮಿ.ಮೀ. ಮಳೆ ಸುರಿದಿದ್ದು, ಜನವರಿಯಿಂದ ಇಲ್ಲಿವರೆಗೆ 399.96 ಮಿ.ಮೀ. ಮಳೆಯಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ 23.70 ಮಿ.ಮೀ. ಮಳೆಯಾಗಿದ್ದರೆ, ಜನವರಿಯಿಂದ ಇಲ್ಲಿಯವರೆಗಿನ ಮಳೆ 270.05 ಮಿ.ಮೀ. ಮಳೆ ಸುರಿದಿದೆ. ಹೋಬಳಿವಾರು ನೋಡವುದಾದರೆ, ದಕ್ಷಿಣ ಕೊಡಗಿನ ಹುದಿಕೇರಿಯಲ್ಲಿ 76.20 ಮಿ.ಮೀ ಅತಿಹೆಚ್ಚು ಮಳೆಯಾಗಿದ್ದರೆ, ಕುಶಾಲನಗರದಲ್ಲಿ ಕಡಿಮೆ 4 ಮಿ.ಮೀ. ಮಳೆಯಾಗಿದೆ. ಸುಂಟಿಕೊಪ್ಪ 12 ಮಿ.ಮೀ.ಮಳೆಯಾಗಿದೆ.

Harangi Reservoir Water Level Increased Due To Rain In Kodagu

ಮಡಿಕೇರಿ ವ್ಯಾಪ್ತಿಯಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣವೂ ಹೆಚ್ಚಾಗಿದೆ. ಗರಿಷ್ಠ 2,859 ಅಡಿಯ ಜಲಾಶಯದಲ್ಲಿ ಸದ್ಯ 2844.31 ಅಡಿ ನೀರಿದೆ. ಜಲಾಶಯ ಭರ್ತಿಯಾಗಲು 15 ಅಡಿಯಷ್ಟು ಬಾಕಿಯಿದೆ. ಒಳ ಹರಿವಿನ ಪ್ರಮಾಣ 1742 ಕ್ಯುಸೆಕ್ ಇದ್ದು, 30 ಕ್ಯುಸೆಕ್ ನೀರನ್ನು ನಾಲೆಗೆ ಬಿಡಲಾಗಿದೆ. ಈ ನಡುವೆ ಜಿಲ್ಲೆಯಲ್ಲಿ ಭತ್ತದ ಕೃಷಿ ಚಟುವಟಿಕೆ ಬಿರುಸುಗೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಕೆಲವು ಕಡೆಗಳಲ್ಲಿ ನಾಟಿ ಕೆಲಸವೂ ಆರಂಭವಾಗಲಿದೆ.

English summary
Harangi reservoir water inflow has raised due to increasing rain in Kodagu district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X