ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗ್ರಾ.ಪಂ ಚುನಾವಣೆ: ಜೈಲಿನಿಂದಲೇ ಸ್ಪರ್ಧಿಸಿ ಗೆಲುವು ಸಾಧಿಸಿದ ಅಭ್ಯರ್ಥಿ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಡಿಸೆಂಬರ್ 30: ಗ್ರಾಮ ಪಂಚಾಯತಿ ಚುನಾವಣೆಯ ಫಲಿತಾಂಶ ಡಿ.30 ರಂದು ಪ್ರಕಟವಾಗಿದ್ದು, ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಗ್ರಾಮ ಪಂಚಾಯತಿಯ ಎಮ್ಮೆಗುಂಡಿ ಕ್ಷೇತ್ರದಲ್ಲಿ ಪುಲಿಯಂಡ ಬೋಪಣ್ಣ ಗೆಲುವು ಸಾಧಿಸಿದ್ದಾರೆ.

ಪಾಲಿಬೆಟ್ಟ ಎಮ್ಮೆಗುಂಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪುಲಿಯಂಡ ಬೋಪಣ್ಣ, ಜೈಲಿನಿಂದಲೇ ನಾಮಪತ್ರ ಸಲ್ಲಿಸಿ ಸುದ್ದಿಯಾಗಿದ್ದರು. ಬುಧವಾರ ವಿರಾಜಪೇಟೆಯಲ್ಲಿ ಮತ ಎಣಿಕೆ ನಡೆದಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿರುವ ಬೋಪಣ್ಣ ಗೆಲುವಿನ ನಗೆ ಬೀರಿದ್ದಾರೆ.

Karnataka Gram Panchayat Election Results 2020 Live : ಪಂಚಾಯಿತಿ ಫಲಿತಾಂಶKarnataka Gram Panchayat Election Results 2020 Live : ಪಂಚಾಯಿತಿ ಫಲಿತಾಂಶ

ಹಿಂದಿನಂತೆ ಈ ಬಾರಿಯೂ ಚುನಾವಣೆಗೆ ನಿಲ್ಲುವ ತಯಾರಿ ನಡೆಸುತ್ತಿರುವಾಗ ಇವರ ವಿರುದ್ಧದ ದಲಿತ ದೌರ್ಜನ್ಯ ಪ್ರಕರಣದಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದರು. ಈ ಪ್ರಕರಣದಲ್ಲಿ ಜಾಮೀನಿಗಾಗಿ ಪ್ರಯತ್ನಿಸಿದರೂ ಜಾಮೀನು ಇನ್ನೂ ಸಿಕ್ಕಿರಲಿಲ್ಲ. ನಂತರ ನ್ಯಾಯಾಲಯದಿಂದ ಒಪ್ಪಿಗೆ ಪಡೆದು ಜೈಲಿನಿಂದಲೇ ಗ್ರಾ.ಪಂ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು.

Gram Panchayat Election Result 2020: Candidate Who Contest From Jail And Wins In Kodagu

ಕೊಡಗು: ಗ್ರಾ.ಪಂ ಚುನಾವಣೆಗೆ ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ಕೊಡಗು: ಗ್ರಾ.ಪಂ ಚುನಾವಣೆಗೆ ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ

ಗ್ರಾ.ಪಂ ಚುನಾವಣೆಗೆ ಕೆಲವೇ ಗಂಟೆಗಳಿರುವಾಗ ನ್ಯಾಯಾಲಯದಿಂದ ಬೇಲ್ ಪಡೆದು, ಜನರ ಬಳಿ ತೆರಳಿ ಮತಯಾಚಿಸಿದ್ದರು. ಪಾಲಿಬೆಟ್ಟ್ ಗ್ರಾಮ ಪಂಚಾಯತಿಯಲ್ಲಿ ಸಾಕಷ್ಟು ಅಭಿವೃದ್ಧಿಗೆ ಕೆಲಸ ಮಾಡಿರುವ ಬೋಪಣ್ಣ ಅವರು, ರಾಷ್ಟ್ರ ಮಟ್ಟದಲ್ಲಿ ಗ್ರಾಮ ಪಂಚಾಯತಿಗೆ ಪ್ರಶಸ್ತಿ ಬರಲು ಶ್ರಮಿಸಿದ್ದರು. ಹೀಗಾಗಿ ಪುಲಿಯಂಡ ಬೋಪಣ್ಣ ಬೆಂಬಲಕ್ಕೆ ಮತದಾರರು ನಿಂತಿದ್ದಾರೆ ಎಂದು ಹೇಳಬಹುದು.

ಬೋಪಣ್ಣ ಅವರು ತಮ್ಮ ಸಮೀಪ ಸ್ಪರ್ಧಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಯೂಸುಫ್ ಅವರನ್ನು 66 ಮತಗಳಿಂದ ಸೋಲಿಸಿ ಆಯ್ಕೆ ಆಗಿದ್ದಾರೆ.

Recommended Video

ರಾಯಚೂರು: ಮತ ಎಣಿಕೆ ಕೇಂದ್ರದಲ್ಲಿ ಅಧಿಕಾರಿ ಅಸ್ವಸ್ಥ-ಕೆಲ ಕಾಲ ಮತ ಎಣಿಕೆ ಕಾರ್ಯ ಸ್ಥಗಿತ | Oneindia Kannada

English summary
The results of the Gram Panchayat elections were announced on Dec. 30. Puliyanda Bopanna won in the Emmegundi constituency of Palibetta Grama Panchayat in Virajpet Taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X